More

    ಜಿ-20 ಆರ್ಥಿಕ ಸಹಕಾರಕ್ಕೆ ಪ್ರಧಾನ ವೇದಿಕೆ

    ರಾಯಚೂರು: ಪ್ರಸಕ್ತ ವರ್ಷದ ಜಿ-20 ಸಮ್ಮೇಳನದ ಆತಿಥ್ಯ ಭಾರತದಲ್ಲಿ ಆಯೋಜಿಸುತ್ತಿರುವುದು ದೇಶದ ಸಾಮರ್ಥ್ಯವನ್ನು ಜಗತ್ತಿಗೆ ಸಾರಿದಂತಾಗಿದೆ. ಸಮ್ಮೇಳನ ಅಂತಾರಾಷ್ಟ್ರೀಯ ಆರ್ಥಿಕ ಸಹಕಾರಕ್ಕೆ ಪ್ರಧಾನ ವೇದಿಕೆಯಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ತಿಳಿಸಿದರು.

    ಸ್ಥಳೀಯ ಎಲ್‌ವಿಡಿ ಕಾಲೇಜಿನಲ್ಲಿ ನೆಹರು ಯುವ ಕೇಂದ್ರದಿಂದ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮ್ಮೇಳನ ಯುವ ಸಮುದಾಯದ ಅಭಿಪ್ರಾಯ ಮತ್ತು ಆಶೋತ್ತರ ಅವಲಂಬಿಸಿದ್ದು, ಅವರ ಅಪೇಕ್ಷೆ ಅರಿಯಲು ಯುವ ಸಂಸತ್ ಸಂಘಟಿಸಲಾಗುತ್ತಿದೆ ಎಂದರು.

    ಅಂತಾರಾಷ್ಟ್ರೀಯ ಸಮಸ್ಯೆಗಳ ಮೇಲೆ ಆಡಳಿತ ರೂಪಿಸುವಲ್ಲಿ ಮತ್ತು ಬಲಪಡಿಸುವಲ್ಲಿ ಸಮ್ಮೇಳನದ ಪಾತ್ರ ಪ್ರಮುಖವಾಗಿದೆ. ದೇಶ ಇಂದು ವಿಶ್ವದಲ್ಲಿ ಎಲ್ಲ ರಾಷ್ಟ್ರಗಳ ಗಮನ ಸೆಳೆಯುವಂತೆ ಮಾಡಿದೆ. ಅದಕ್ಕೆ ಮೋದಿಯವರ ಉತ್ತಮ ಆಡಳಿತ ಕಾರಣವಾಗಿದೆ ಎಂದು ಹೇಳಿದರು.

    ತಾರಾನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಾರಸಮಲ್ ಸುಖಾಣಿ ಮಾತನಾಡಿ, ಯುವಕರು ಒಗ್ಗಟ್ಟು, ಉತ್ತಮ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ದೇಶ ಸಬಲೀಕರಣಗೊಳ್ಳಲು ಸಾಧ್ಯವಾಗಲಿದೆ. ದೇಶದ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ಜಿ-20 ಸಂಚಾಲಕ ಡಾ.ಅರವಿಂದಕುಮಾರ ರೆಡ್ಡಿ, ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಬಿಸಾತಿ ಭರತ್, ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಂದಾಪುರ, ಕಾಲೇಜು ಪ್ರಾಚಾರ್ಯ ಡಾ.ವೆಂಕಟೇಶ ದೇವರು, ಎಸ್ಪಿ ಬಿ.ನಿಖಿಲ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts