More

    ಸತ್ಯದ ಶೋಧನೆ ಸಂಶೋಧನೆಯ ಗುರಿಯಾಗಲಿ

    ರಾಯಚೂರು: ವಾದವನ್ನು ವಿರೋಧಿಸಬೇಕೇ ಹೊರತು ವ್ಯಕ್ತಿಯನ್ನಲ್ಲ. ವಾದ, ವಿಮರ್ಶೆ, ಸಂಶೋಧನೆ ಆಳವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯಬೇಕಾಗಿದೆ. ಸತ್ಯದ ಶೋಧನೆಯೇ ಸಂಶೋಧನೆಯ ಗುರಿಯಾಗಿರಬೇಕು ಎಂದು ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಹೇಳಿದರು.

    ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದಿಂದ ಭಾನುವಾರ ಹಮ್ಮಿಕೊಂಡಿದ್ದ ಇತಿಹಾಸ ಸಂಶೋಧನಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಸಮಾವೇಶದ ಉದ್ದೇಶ ಸತ್ಯಾನ್ವೇಷಣೆಗೆ ಪೂರಕವಾದ ವಾತಾವರಣ ನಿರ್ಮಿಸುವುದಾಗಿದೆ. ಮುಕ್ತವಾದ ಚರ್ಚೆ, ಸಂವಾದ ನಡೆಸಲು ಮಂತ್ರಾಲಯ ಮಠ ವೇದಿಕೆಯಾಗಲಿದೆ. ಸಂಶೋಧನೆಯ ದಾರಿಯನ್ನು ಸುಗಮಗೊಳಿಸಲು ನಾವೆಲ್ಲರೂ ಪ್ರಯತ್ನಿಸಬೇಕು. ಶ್ರೀಮಠ ಹಿಂದಿನಿಂದಲೂ ಸಂಶೋಧನೆ, ಸಂಗ್ರಹ, ಪ್ರಕಟಣೆ ಕಾರ್ಯ ನಡೆಸುತ್ತಾ ಬಂದಿದ್ದು, ವಿದ್ವಾಂಸರು ಸೇರಿರುವುದು ಸಂಶೋಧನಾ ಕ್ಷೇತ್ರಕ್ಕೆ ಹೊಸ ಜೀವ ಬಂದಂತಾಗಿದೆ ಎಂದು ಹೇಳಿದರು.

    ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ ವಿಶೇಷಾಧಿಕಾರಿ ವಿದ್ವಾನ್ ಆನಂದತೀರ್ಥಾಚಾರ್ ಪಗಡಾಲ, ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್‌ನ ಸಂಚಾಲಕ ಕೆ.ಅಪ್ಪಣ್ಣಾಚಾರ್, ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿ, ಸಾಹಿತಿಗಳಾದ ಡಾ.ಜಯಲಕ್ಷ್ಮಿ ಮಂಗಳಮೂರ್ತಿ, ಪವನಕುಮಾರ ಗುಂಡೂರು, ಸುಳಾದಿ ಹನುಮೇಶಾಚಾರ್ಯ, ಶ್ರೀನಿವಾಸಾಚಾರ್ ಮುತ್ತಿಗೆ, ಶ್ರೀನಿವಾಸ ನವಲಗುಂಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts