More

    26ರಿಂದ ಬೀರಲಿಂಗೇಶ್ವರ ಜಾತ್ರೆ

    ರಾಯಚೂರು: ಸಿರವಾರ ತಾಲೂಕಿನ ಮಾಡಗಿರಿ ಗ್ರಾಮದಲ್ಲಿ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಅ.26 ಮತ್ತು 27ರಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕುರುಬ ಸಂಘದ ತಾಲೂಕು ಅಧ್ಯಕ್ಷ ಕೆ.ಸತ್ಯನಾರಾಯಣ ತಿಳಿಸಿದರು.

    ಅ.26ರಂದು ಗಂಗಾಪೂಜೆ, ಪಲ್ಲಕ್ಕಿ ಸೇವೆ ನಡೆಯಲಿದ್ದು, 27ರ ಬೆಳಗ್ಗೆ 6ರಿಂದ 8ರವರೆಗೆ ಬೀರಲಿಂಗೇಶ್ವರ ದೇವರ ಹೇಳಿಕೆ ಕಾರ್ಯಕ್ರಮ ನಡೆಯಲಿದೆ. ನಂತರ ಕಡುಬಿನ ಕಾಳಗ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಹಲವು ವರ್ಷಗಳಿಂದ ಕಾಲಮಾನ ಕುರಿತು ದೇವರ ಹೇಳಿಕೆ ನಡೆಯುತ್ತಿದ್ದು, ಜನರು ಹೇಳಿಕೆ ಬಗ್ಗೆ ಅಪಾರ ನಂಬಿಕೆ ಇರಿಸಿಕೊಂಡಿದ್ದಾರೆ. ದೇವಸ್ಥಾನ ಸಮಿತಿ ಹಲವು ವರ್ಷದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

    ದೇವಸ್ಥಾನ ಸಮಿತಿ ಅಧ್ಯಕ್ಷ ರಾಮಣ್ಣ ಪೂಜಾರಿ ತಾತ ಮಾತನಾಡಿ, ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಗ್ರಾಪಂಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಹಿಂದೂ ದೇವಸ್ಥಾನಗಳ ಅರ್ಚಕರನ್ನು ಸನ್ಮಾನ ಮಾಡಲು ತೀರ್ಮಾನಿಸಲಾಗಿದೆ. ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ದೇಣಿಗೆ ನೀಡುತ್ತಿದ್ದು, ಸಮಿತಿಯಿಂದ ಅವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದೇಣಿಗೆ ರಸೀದಿಗಳನ್ನು ಡ್ರಾ ಮೂಲಕ ಎತ್ತಿ ಕಾರು, ಟ್ರಾೃಕ್ಟ್‌ರ್, ಬೈಕ್, ಜೋಡಿ ಎತ್ತು, ಎತ್ತಿನ ಬಂಡಿ ನೀಡಲಾಗುತ್ತಿದೆ ಎಂದು ಹೇಳಿದರು. ಮಾಡಗಿರಿ ಗ್ರಾಪಂ ಅಧ್ಯಕ್ಷ ಕೆ.ಶರಣಪ್ಪ, ದೇವಸ್ಥಾನ ಸಮಿತಿ ಪದಾಧಿಕಾರಿಗಳಾದ ನಾಗಪ್ಪ, ಚಂದ್ರು ಬೊಮ್ಮನಾಳ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts