More

    ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈಬಿಡಿ

    ರೈತ ಸಂಘ, ಹಸಿರು ಸೇನೆಯಿಂದ ಪ್ರತಿಭಟನೆ | ರಾಜ್ಯ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ

    ರಾಯಚೂರು: ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ರಾಜ್ಯ ಸರ್ಕಾರ ಕೂಡಲೇ ಕೈ ಬಿಡಲು ಒತ್ತಾಯಿಸಿ ರಾಜ್ಯ ರೈತ ಸಂಘ ಜಿಲ್ಲಾ ಸಮಿತಿ ಪದಾಧಿಕಾರಿಗಳು ನಗರದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಅಧಿಸೂಚನೆ ದಾಖಲೆ ಜೆರಾಕ್ಸ್ ಪ್ರತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

    ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, ಈ ಕಾಯ್ದೆಯನ್ನು 1961ರಲ್ಲಿ ಡಿ.ದೇವರಾಜ ಅರಸು ಜಾರಿಗೆ ತಂದು ಭೂ ಮಿತಿ ದುಪ್ಪಟ್ಟು ಮಾಡಿದ್ದರು. ಭೂ ಖರೀದಿಯನ್ನು ಕೇವಲ ರೈತ ಕುಟುಂಬ ಮಾತ್ರ ಮಾಡುವಂತೆ ನಿರ್ಬಂಧ ವಿಧಿಸಿದ್ದರು. ಇವುಗಳನ್ನು ತೆಗದು ಹಾಕಿರುವ ಬಿಜೆಪಿ ಸರ್ಕಾರ ಬಹುರಾಷ್ಟ್ರೀಯ ಮತ್ತು ರಾಷ್ಟ್ರೀಯ ಕಂಪನಿಗಳಿಗೆ ಸ್ವಾಗತ ನೀಡಿದೆ ಎಂದು ದೂರಿದರು.

    ರೈತ ಮುಖಂಡರು ನಂತರ ಡಿಸಿ ಕಚೇರಿಗೆ ಆಗಮಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತ ವಿರೋಧಿ ನಿಲುವನ್ನು ಮೊದಲು ಪರಿಶೀಲಿಸಬೇಕು. ತಿದ್ದುಪಡಿ ಮಾಡಿದರೆ ಸಣ್ಣ ಮತ್ತು ಅತಿ ಸಣ್ಣ ರೈತರು ಸರ್ವನಾಶವಾಗುತ್ತಾರೆ ಎನ್ನುವುದನ್ನು ಅರಿತು ನಿರ್ಧಾರ ಕೈ ಬಿಡಬೇಕು ಎಂದು ಆಗ್ರಹಿಸಿದರು. ಮನವಿ ಆಲಿಸದೆ ತಿದ್ದುಪಡಿ ಮಾಡಿದರೆ ರಾಜ್ಯಾದ್ಯಂತ ರೈತ ಸಂಘದಿಂದ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ನಂತರ ಎಡಿಸಿ ದುರಗೇಶಗೆ ಮನವಿ ಸಲ್ಲಿಸಿದರು.

    ಸಂಘದ ಜಿಲ್ಲಾಧ್ಯಕ್ಷ ಸೂಗೂರಯ್ಯ ಸ್ವಾಮಿ, ಸದಸ್ಯರಾದ ಬೂದಯ್ಯ ಸ್ವಾಮಿ, ಬಸವರಾಜ ಗೌಡ, ಲಿಂಗರೆಡ್ಡಿ ಗೌಡ, ಮಲ್ಲಣ್ಣ, ಸಿದ್ದರಾಮಯ್ಯ ಸ್ವಾಮಿ, ದೇವರಾಜ ನಾಯಕ, ವೀರೇಶ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts