More

    ಕನ್ನಡ ವಿವಿ ನೇಮಕಾತಿ ಅಧಿಸೂಚನೆ ರದ್ದುಪಡಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹ

    ರಾಯಚೂರು: ಮೀಸಲಾತಿ ನಿಯಮ ಉಲ್ಲಂಘಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬೋಧಕ ಹುದ್ದೆಗಳ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆ ರದ್ದುಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.

    ಸಮಿತಿ ನಿಯೋಗ ಸ್ಥಳೀಯ ಜಿಲ್ಲಾಧಿಕಾರಿ ಕಚೇರಿಯ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರ್‌ಗೆ ಶುಕ್ರವಾರ ಮನವಿ ಸಲ್ಲಿಸಿ, ನೇಮಕಾತಿಯಲ್ಲಿ ಮಹಿಳಾ, ಒಬಿಸಿ, ಅಲ್ಪಸಂಖ್ಯಾ ಮತ್ತು ಎಸ್ಸಿ, ಎಸ್ಟಿ ಮೀಸಲಾತಿ ಕಡೆಗಣಿಸಲಾಗಿದೆ ಎಂದು ದೂರಿತು.

    ವಿವಿ 17 ಬೋಧಕ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿದೆ. 371ಜೆ ಅನ್ವಯ ನೇಮಕಾತಿಗೆ ದಾಖಲೆಗಳ ಕುರಿತು ಜಾಲತಾಣದಲ್ಲಿ ಉಲ್ಲೇಖಿಸಿಲ್ಲ. 17 ಹುದ್ದೆಗಳಲ್ಲಿ 14 ಹುದ್ದೆಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದ್ದು, ಎಸ್ಸಿ, ಎಸ್ಟಿ ಹಾಗೂ ಸಾಮಾನ್ಯ ಮಹಿಳೆಗೆ ಒಂದು ಹುದ್ದೆ ಮಾತ್ರ ಮೀಸಲಿರಿಸಲಾಗಿದೆ ಎಂದು ಟೀಕಿಸಿತು.

    ನೇಮಕಾತಿ ಪೂರ್ವ ಕಾರ್ಯಕಾರಿ ಸಮಿತಿ ಅನುಮೋದನೆ ಪಡೆಯದೆ ಹಾಗೂ ವಿಷಯ ತಜ್ಞರೊಂದಿಗೆ ಸಮಾಲೋಚಿಸದೆ ವಿವಿ ನೇಮಕಾತಿಗೆ ಮುಂದಾಗಿದೆ. ಕುಲಪತಿ ಅಧಿಕಾರಾವಧಿ 5 ತಿಂಗಳು ಬಾಕಿಯಿರುವಾಗ ನೇಮಕಾತಿ ಹೊರಡಿಸಿ ನಿಯಮ ಉಲ್ಲಂಘಿಸಲಾಗಿದೆ. ಯುಜಿಸಿ ನಿಯಮಗಳನ್ನು ಪಾಲಿಸದೆ, ಜಾಲತಾಣದಲ್ಲಿ ಪೂರ್ಣ ಮಾಹಿತಿ ನೀಡದೆ ಏಕಪಕ್ಷೀಯವಾಗಿ ನೇಮಕಾತಿ ನಡೆಸಲಾಗುತ್ತಿದೆ. ಕೂಡಲೇ ಅಧಿಸೂಚನೆ ರದ್ದುಪಡಿಸಿ ನಿಯಮ ಪ್ರಕಾರ ನೇಮಕಾತಿ ನಡೆಸಬೇಕೆಂದು ಮನವಿಯಲ್ಲಿ ಒತ್ತಾಯಿಸಿತು.

    ನಿಯೋಗದಲ್ಲಿ ಸಮಿತಿ ಜಿಲ್ಲಾ ಸಂಚಾಲಕ ರಾಜು ಪಟ್ಟಿ, ಪದಾಧಿಕಾರಿಗಳಾದ ಪರಶುರಾಮ, ಪರಂಧಾಮ, ಮೌನೇಶ ಬಾಗಲವಾಡ, ಮೆಹಬೂಬ್, ಮಹ್ಮದ್ ಆರೀಫ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts