More

    ಏ.9ರಿಂದ ವೀರಾಂಜನೇಯ ದೇವಸ್ಥಾನದಲ್ಲಿ ಶ್ರೀರಾಮೋತ್ಸವ

    ರಾಯಚೂರು: ನಗರದ ಜೋಡು ವೀರಾಂಜನೇಯ ದೇವಸ್ಥಾನ ಸಮಿತಿಯಿಂದ ಶ್ರೀರಾಮ ನವಮಿ ಅಂಗವಾಗಿ ಏ.9ರಿಂದ 14ವರೆಗೆ ಶ್ರೀರಾಮೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀರಾಮೋತ್ಸವ ಸಮಿತಿ ಕಾರ್ಯದರ್ಶಿ ಪ್ರಾಣೇಶ ಮುತಾಲಿಕ ಹೇಳಿದರು.

    ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದಂಗಳ, ಫಲಿಮಾರು ಮಠದ ಶ್ರೀವಿದ್ಯಾದೀಶ ತೀರ್ಥ ಶ್ರೀಪಾದಂಗಳ, ಕಿರಿಯ ಸ್ವಾಮೀಜಿ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದಂಗಳರ ನೇತೃತ್ವದಲ್ಲಿ 14 ದಿನಕಾಲ ಕಾರ್ಯಕ್ರಮ ನಡೆಯಲಿವೆ. ಪ್ರತಿನಿತ್ಯ ವಿಶೇಷ ಅಲಂಕಾರ, ಶ್ರೀರಾಮದೇವರ ಮಹಾಪೂಜೆ, ತೀರ್ಥ ಪ್ರಸಾದ, ಸಂಜೆ ರಾಮಾಯಣ ಪ್ರವಚನ, ಶ್ರೀರಾಮದೇವರ ಪೂಜೆ, ಏಕಾಂತ ಸೇವೆ, ಅಷ್ಟಾವಧಾನ ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ನೀಡಿದರು.

    ಏ.8ರಂದು ವಾಸವಿ ನಗರದ ಬನ್ನಿಕಾಳಿ ಮಂಟಪದಿಂದ ಶ್ರೀಜೋಡು ವೀರಾಂಜನೇಯ ದೇವಸ್ಥಾನದವರೆಗೆ ಶೋಭಾಯಾತ್ರೆ ನಡೆಯಲಿದೆ. ನಂತರ ಶ್ರೀರಾಮೋತ್ಸವ ಕಾರ್ಯಕ್ರಮವನ್ನು ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದಂಗಳವರು ಉದ್ಘಾಟಿಸಲಿದ್ದಾರೆ. ಫಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದಂಗಳವರು ಸಾನ್ನಿಧ್ಯವಹಿಸಲಿದ್ದಾರೆ ಎಂದು ತಿಳಿಸಿದರು.

    ಏ.11ರಂದು ಮಹಿಳಾಗೋಷ್ಠಿ ನಡೆಯಲಿದೆ. ಮಹಿಳೆಯರ ಸಾಧನೆ, ಚಿಂತನ ಮಂಥನ ವಿಷಯವಾಗಿ ಡಾ.ಸುಧಾ ನರಸಿಂಗರಾವ್ ದೇಶಪಾಂಡೆ ಮಾತನಾಡಲಿದ್ದಾರೆ. ಮಾ.13ರಂದು ಪವಮಾನ ಹೋಮ, 14ರಂದು ಸೌರಮಾನ ಯುಗಾದಿ, ಸಂಜೆ ಯುವಗೋಷ್ಠಿ ನಡೆಯಲಿದೆ ಎಂದರು.
    ಮುಖಂಡರಾದ ವೇಣುಗೋಪಾಲ್ ಇನಾಂದಾದ್, ರಾಮರಾವ್ ಗಣೇಕಲ್, ದಾನಪ್ಪ ಯಾದವ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts