More

    ಬಂಜೆತನ ನಿವಾರಣಾ ತಜ್ಞರ ಸಮಾವೇಶ ಡಿ.10ರಂದು

    ರಾಯಚೂರು: ಪ್ರಸೂತಿ ಮತ್ತು ಸ್ತ್ರೀರೋಗ ವೈದ್ಯರ ಸಂಘದಿಂದ ನಗರದಲ್ಲಿ ಡಿ.10 ಮತ್ತು 11ರಂದು ಉತ್ತರ ವಲಯ ಬಂಜೆತನ ನಿವಾರಣಾ ತಜ್ಞರ ಸಮಾವೇಶ ಆಯೋಜಿಸಲಾಗಿದೆ ಎಂದು ಸಮಾವೇಶದ ಎಂಡೋಸ್ಕೋಪಿ ಸಮಿತಿ ಅಧ್ಯಕ್ಷ ಡಾ.ಜಯಪ್ರಕಾಶ ಪಾಟೀಲ್ ಬೆಟ್ಟದೂರು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ನಗರದಲ್ಲಿ ಪ್ರಥಮ ಬಾರಿಗೆ ಸಮಾವೇಶ ಆಯೋಜಿಸಲಾಗಿದ್ದು, 3ಡಿ ತಂತ್ರಜ್ಞಾನ ಕುರಿತು ತಜ್ಞ ವೈದ್ಯರು ಮಾಹಿತಿ ನೀಡಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ ಹಾಗೂ ಮುಂಬೈ, ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶದ ಸ್ತ್ರೀರೋಗ ತಜ್ಞರು ಪ್ರತಿನಿಧಿಗಳಾಗಿ ಭಾಗವಹಿಸಲಿದ್ದಾರೆ. ಈಗಾಗಲೇ 270 ವೈದ್ಯರು ನೋಂದಣಿ ಮಾಡಿಸಿದ್ದು, ಡಿ.10ರಂದು 3ಡಿ ತಂತ್ರಜ್ಞಾನದಿಂದ ನಡೆಸಲಾಗುವ ಶಸ್ತ್ರಚಿಕಿತ್ಸೆಯನ್ನು ನೇರವಾಗಿ ವೀಕ್ಷಿಸುವ ಅವಕಾಶ ದೊರೆಯಲಿದೆ ಎಂದರು.

    ಡಿ.11ರಂದು ಬಂಜೆತನ ನಿವಾರಣೆ ಮತ್ತು ಸವಾಲುಗಳು, ಪರಿಹಾರ ಕುರಿತು ವಿಚಾರ ಮಂಡನೆ ಮತ್ತು ಸಂವಾದ ನಡೆಯಲಿದೆ. ವೈದ್ಯರು ನಿತ್ಯವೂ ಕಲಿಯಬೇಕಿದ್ದು, ಈ ನಿಟ್ಟಿನಲ್ಲಿ ಸಮಾವೇಶದಲ್ಲಿ ಹೊಸ ಅವಿಷ್ಕಾರ, ಸಂಶೋಧನೆ ಕುರಿತು ತಜ್ಞರು ವಿಚಾರಗಳನ್ನು ಮಂಡನೆ ಮಾಡಲಿದ್ದಾರೆ ಎಂದು ಹೇಳಿದರು.

    ಸಂಘದ ಜಿಲ್ಲಾಧ್ಯಕ್ಷೆ ಡಾ.ಮಂಜುಳಾ ಗದ್ವಾಲ್ ಮಾತನಡಿ, ಬಂಜೆತನ ನಿವಾರಣೆಗಾಗಿ 3ಡಿ ತಂತ್ರಜ್ಞಾನ ಶಸ್ತ್ರಚಿಕಿತ್ಸೆಯನ್ನು ಎಲ್ಲ ವೈದ್ಯರು ಮಾಡಲು ಸಾಧ್ಯವಿಲ್ಲ. ಡಾ.ಜಯಪ್ರಕಾಶ ಪಾಟೀಲ್ ನಗರದಲ್ಲಿ 3ಡಿ ತಂತ್ರಜ್ಞಾನವನ್ನು ಅನುಷ್ಠಾನಕ್ಕೆ ತಂದಿದ್ದಾರೆ. ವೈದ್ಯರಿಗೆ ಸಮಾವೇಶದಿಂದ ಈ ಕುರಿತು ಮಾಹಿತಿ ದೊರೆಯಲಿದೆ. ಮಕ್ಕಳಲ್ಲಿ ಹದಿಹರೆಯದ ಬದಲಾವಣೆ ಕುರಿತು ಈಗಾಗಲೇ ಸಂಘದಿಂದ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸ್ತ್ರೀ ರೋಗಗಳ ಮಾಹಿತಿಯನ್ನು ಜನರಿಗೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು. ಖಜಾಂಚಿ ಡಾ.ದೀಪಶ್ರೀ ಪಾಟೀಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts