More

    ಸಂಗೀತ ವಿಶ್ವ ಪ್ರೇಮ ಬೆಳೆಸುವ ಸಂವಹನ

    ರಾಯಚೂರು: ಸಂಗೀತ ವಿಶ್ವಪ್ರೇಮ ಮತ್ತು ಮಾನವೀಯತೆಯನ್ನು ಬೆಳೆಸುವ ಸಂವಹನವಾಗಿದ್ದು, ಸಾಮಾಜಿಕ ಸ್ವಾಸ್ಥೃ ಮತ್ತು ಆರೋಗ್ಯಯುತ ಸಮಾಜ ಸೃಷ್ಟಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹಿರಿಯ ಸಾಹಿತಿ ಡಾ.ಜಯಲಕ್ಷ್ಮೀ ಮಂಗಳಾಮೂರ್ತಿ ಹೇಳಿದರು.

    ನಗರದ ಕರ್ನಾಟಕ ಸಂಘದಲ್ಲಿ ಶ್ರುತಿ ಸಾಹಿತ್ಯ ಮೇಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳವಾರ ಸಂಜೆ ಏರ್ಪಡಿಸಿದ್ದ ಶ್ರುತಿ ಸೇರಿದಾಗ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಗೀತದಲ್ಲಿ ಚಿಕಿತ್ಸಕ ಗುಣವಿದ್ದು, ಸಂಗೀತಗಾರರು ತಪಸ್ವಿಗಳಿದ್ದಂತೆ ಎಂದರು.

    ಕರ್ನಾಟಕ ಸಂಘದ ಅಧ್ಯಕ್ಷ ಕೆ.ಶಾಂತಪ್ಪ ಮಾತನಾಡಿ, ಶ್ರುತಿ ಸಾಹಿತ್ಯ ಮೇಳ 35 ವರ್ಷಗಳಿಂದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತ ಬರುತ್ತಿದೆ. ಅದರಲ್ಲೂ ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಹಲವಾರು ಪ್ರತಿಭೆಗಳನ್ನು ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

    ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ ಕಾರ್ಯಕ್ರಮ ಉದ್ಘಾಟಿಸಿದರು. ರಾಗಿಣಿ ಸಂಗೀತ ವಿದ್ಯಾಲಯದ ಪ್ರಾಚಾರ್ಯೆ ರಾಧಿಕಾ ಕಾಂತನವರ, ತಬಲಾ ವಾದಕ ಶ್ರೀಪಾದ ಲಕ್ಕಂದಿನ್ನಿಯನ್ನು ಸನ್ಮಾನಿಸಲಾಯಿತು. ನಂತರ ಶ್ರೀಪಾದ ದಾಸ, ಗೋಪಾಲ ಗುಡಿಬಂಡಿ, ಮೀರಾ ಕೋನಾಪುರ, ಅನುರಾಧಾ ಅರಿಷಣಿಗಿ, ಪ್ರಭಾ ಕಂಬಾರ, ಪದ್ಮಜಾ, ಸುಪ್ರಿತಾ ದೇಸಾಯಿ, ಹೇಮಾ ವಸುಧೇಂದ್ರ, ವೇಣುಗೋಪಾಲ ವರಪ್ಪರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಆರ್‌ಡಿಎ ಮಾಜಿ ಅಧ್ಯಕ್ಷ ಕಡಗೋಲ ಆಂಜನೇಯ, ಹಿರಿಯ ಪತ್ರಕರ್ತ ಅರವಿಂದ ಕುಲಕರ್ಣಿ, ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳೀಧರ ಕುಲಕರ್ಣಿ, ಪದಾಧಿಕಾರಿಗಳಾದ ರಮೇಶ ಕುಲಕರ್ಣಿ, ರವೀಂದ್ರ ಕುಲಕರ್ಣಿ, ಜೆ.ಎಂ.ವೀರೇಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts