More

    ಮೇಲಧಿಕಾರಿಗಳ ಆದೇಶ ಪಾಲನೆಗಾಗಿ ಆತಂಕದಲ್ಲೇ ಮನೆ ಮನೆಗೆ ಧಾನ್ಯ ಪೂರೈಕೆ ಮಾಡಿದ ಅಂಗನವಾಡಿ ಕಾರ್ಯಕರ್ತೆಯರು

    ರಾಯಚೂರು: ಮೇಲಧಿಕಾರಿಗಳ ಆದೇಶ ಪಾಲಿಸದಿದ್ದರೆ ಶಿಸ್ತಿನ ಕ್ರಮದ ಎಚ್ಚರಿಕೆ, ಮತ್ತೊಂದು ಕಡೆ ಯಾರಿಗೆ, ಎಲ್ಲಿ ಕರೊನಾ ಸೋಂಕು ಇದೆಯೋ ಎನ್ನುವ ಆತಂಕದ ಮಧ್ಯೆಯೇ ಅಂಗನವಾಡಿ ಕಾರ್ಯಕರ್ತೆಯರು ಮನೆ, ಮನೆಗೆ ತೆರಳಿ ಆಹಾರ ಧಾನ್ಯ ವಿತರಿಸುವಂತಾಗಿದೆ.

    ಈಗಾಗಲೆ ಶಾಲೆಗಳಿಗೆ ರಜೆ ನೀಡಲಾಗಿದೆ. ಆದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗಳಿಗೆ ರಜೆ ನೀಡದ ಕಾರಣ ಸಮಸ್ಯೆ ಅನುಭವಿಸುವಂತಾಗಿದೆ. ಕರೊನಾ ಹಿನ್ನೆಲೆಯಲ್ಲಿ ಗುಂಪಾಗಿ ಸೇರದಂತೆ ಆದೇಶ ಪಾಲನೆಗಾಗಿ ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿ, ಬಾಣಂತಿ ಹಾಗೂ ಮಕ್ಕಳಿಗೆ ಮನೆ ಮನೆಗೆ ತೆರಳಿ ಆತಂಕದಿಂದಲೆ ಆಹಾರ ಧಾನ್ಯ ವಿತರಿಸುತ್ತಿದ್ದಾರೆ. ನಗರ ಸೇರಿ ಜಿಲ್ಲಾದ್ಯಂತ ಮೇಲ್ವಿಚಾರಕರ ಕಟ್ಟುನಿಟ್ಟಿನ ಆದೇಶ ಪಾಲನೆ ಮಾಡದಿದ್ದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎನ್ನುವ ಭಯ ಶುರುವಾಗಿದೆ.

    ಮತ್ತೊಂದು ಕಡೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಲ್ಲಲ್ಲಿ ಇರುವ ಪೊಲೀಸ್, ಗೃಹ ರಕ್ಷಕ ದಳದವರು ಗುರುತಿನ ಚೀಟಿ ಕೇಳುತ್ತಿರುವುದರಿಂದ ಸಮಸ್ಯೆ ತಲೆದೂರಿದೆ. ಅಲ್ಲದೆ, ಈ ಆತಂಕದ ಮಧ್ಯೆ ಆಹಾರ ಧಾನ್ಯ ಫಲಾನುಭವಿಗಳಿಗೆ ತಲುಪಿಸುತ್ತಿದ್ದರೂ, ಅದರ ಖಚಿತತೆಗೆ ಭಾವಚಿತ್ರ ತೆಗೆದು ಕಳುಹಿಸುವಂತೆ ಮೇಲ್ವಿಚಾರಕರು ಸೂಚಿಸುತ್ತಿರುವುದು ಸಮನ್ವಯತೆ ಕೊರತೆ ಎದ್ದು ಕಾಣುತ್ತಿದೆ. ಈ ಬಗ್ಗೆ ಮೇಲ್ವಿಚಾರಕರನ್ನು ಕೇಳಿದರೆ, ಮೇಲಧಿಕಾರಿಗಳ ಸೂಚನೆ ಇದೆ. ಅವರ ನಿರ್ದೇಶನ ಪಾಲಿಸುವಂತೆ ಹೇಳಲಾಗುತ್ತಿದೆ ಎಂದು ಹೇಳುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts