More

    ಹಿಂದಿ ದಿವಸ್ ಆಚರಣೆ ನಿಲ್ಲಿಸಿ

    ರಾಯಚೂರು: ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ಜೆಡಿಎಸ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ, ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತ ಕುಮಾರಗೆ ಮನವಿ ಸಲ್ಲಿಸಿದರು.

    ಹಿಂದಿ ದಿವಸ್ ಆಚರಣೆ ಸೃಷ್ಟಿಸಿ ಪ್ರಾದೇಶಿಕ ಭಾಷೆಗಳಿಗೆ ಸರ್ಕಾರ ಮೋಸ ಮಾಡುತ್ತಿದ್ದು, ಕರ್ನಾಟಕ ಹಲವು ಭಾಷೆಗಳನ್ನು ಒಳಗೊಂಡ ಅದ್ಭುತ ನಾಡಾಗಿದ್ದು, ಇಲ್ಲಿ ಹಿಂದಿ ದಿನಾಚರಣೆ ಆಚರಿಸುವುದು ಖಂಡನೀಯ. ಹಿಂದಿ ದಿವಸ್ ಒಕ್ಕೂಟದ ವ್ಯವಸ್ಥೆಗೆ ಮಾರಕ. ಜತೆಗೆ ಭಾರತದ ಐಕ್ಯತೆ ಒಡೆಯುವ ತಂತ್ರ. ಆದ್ದರಿಂದ ಹಿಂದಿ ದಿವಸ್ ಆಚರಣೆ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.

    ಭಾರತ ಒಕ್ಕೂಟ ಸರ್ಕಾರವು ಪ್ರತಿವರ್ಷ ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಮಾಡುತ್ತ ದೇಶದ ಇತರ ಭಾಷೆಗಳನ್ನು ಕಡೆಗಣಿಸಲಾಗುತ್ತಿದೆ. ಕೂಡಲೇ ಕೇಂದ್ರ ಸರ್ಕಾರ ಹಿಂದಿ ದಿವಸ್ ಆಚರಣೆಯನ್ನು ನಿಲ್ಲಿಸಬೆಕೆಂದು ಒತ್ತಾಯಿಸಿದರು.

    ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು 8ನೇ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳನ್ನು ಆಡಳಿತ ಭಾಷೆಗಳನ್ನಾಗಿಸಬೇಕು. ಶಿಕ್ಷಣ, ಉದ್ಯೋಗದಲ್ಲಿ ಎಲ್ಲ ಭಾಷೆಗಳಿಗೆ ಸಮಾನ ಸ್ಥಾನ ಸಿಗುವಂತಾಗಬೇಕೆಂದು ಆಗ್ರಹಿಸಿದರು.

    ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ, ಮುಖಂಡರಾದ ಮಹಾಂತೇಶ ಪಾಟೀಲ್, ಶಿವಶಂಕರ್, ಯೂಸೂಫ್ ಖಾನ್, ದಾನಪ್ಪ ಯಾದವ್, ವಿಶ್ವನಾಥ ಪಟ್ಟಿ, ಕರವೇ ಕಾರ್ಯಕರ್ತರಾದ ವಿನೋದ ರೆಡ್ಡಿ, ಜಿಲಾನಿ ಪಾಷಾ, ದುರ್ಗರಾಜ, ಗಂಗಣ್ಣ, ಬಸನಗೌಡ, ರಮೇಶ, ಗೋವಿಂದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts