More

    ಶ್ರಮಿಕ ವರ್ಗದಿಂದ ಚರಿತ್ರೆ ನಿರ್ಮಾಣ ಉಪನ್ಯಾಸಕಿ ಡಾ.ಜಯದೇವಿ ಗಾಯಕವಾಡ ಅಭಿಮತ

    ರಾಯಚೂರು: ಇತಿಹಾಸದಲ್ಲಿ ವಿಲಾಸಿ ಜೀವನ ನಡೆಸಿದವರಿಂದ ಚರಿತ್ರೆ ನಿರ್ಮಾಣವಾಗಿರುವುದನ್ನು ಕಾಣಲು ಸಾಧ್ಯವಿಲ್ಲ. ಶ್ರಮಿಕ ವರ್ಗದಿಂದ ಮಾತ್ರ ಚರಿತ್ರೆ ನಿರ್ಮಾಣ ಸಾಧ್ಯವಾಗಿದೆ ಎಂದು ಉಪನ್ಯಾಸಕಿ ಡಾ.ಜಯದೇವಿ ಗಾಯಕವಾಡ ಹೇಳಿದರು.

    ಸ್ಥಳೀಯ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ ಶುಕ್ರವಾರ ಏರ್ಪಡಿಸಿದ್ದ ವೀರ ವನಿತೆ ಒನಕೆ ಓಬವ್ವ ಜಯಂತ್ಯುತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಇತಿಹಾಸ ತಿಳಿದುಕೊಳ್ಳದಿದ್ದರೆ ಚರಿತ್ರೆ ಬರೆಯಲು ಸಾಧ್ಯವಿಲ್ಲ ಎಂದರು.

    ಓಬವ್ವ ಕೆಳ ಸಮುದಾಯಕ್ಕೆ ಸೇರಿದವರೆಂಬುದು ಬಹುತೇಕರಿಗೆ ಗೊತ್ತಿಲ್ಲ. ಅವರ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ, ಸಂಶೋಧನೆಗಳು ನಡೆಯಬೇಕಾಗಿದೆ. ಸಾಧಾರಣ ಮಹಿಳೆ ಕೂಡಾ ನಾಡನ್ನು ಕಟ್ಟಬಹುದು ಎನ್ನುವುದನ್ನು ಓಬವ್ವ ತೋರಿಸಿಕೊಟ್ಟಿದ್ದಾಳೆ ಎಂದು ತಿಳಿಸಿದರು.

    ನಗರ ಶಾಸಕ ಡಾ.ಶಿವರಾಜ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಶಕ್ತಿವಂತರಾಗಿದ್ದಾರೆ ಪುರುಷರು ಸರಿದಾರಿಯಲ್ಲಿ ನಡೆಯುತ್ತಾರೆ. ಮಹಿಳೆಯರು ದೃಢವಾಗಿದ್ದಾಗ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯವಾಗಲಿದೆ. ಈಗಾಗಲೇ ಸ್ಥಳೀಯ ಸಂಸ್ಥೆಗಳಲ್ಲಿ ಸ್ತ್ರೀಯರಿಗೆ ಶೇ.50 ಮೀಸಲಾತಿ ಜಾರಿಯಲ್ಲಿದೆ. ಇದೇ ಪದ್ಧತಿ ಮುಂದಿನ ದಿನಗಳಲ್ಲಿ ಲೋಕಸಭೆ ಮತ್ತು ವಿಧಾನಸಭೆಗೂ ಕಾಲಿಡುವ ಕಾಲ ದೂರವಿಲ್ಲ. ಓಬವ್ವಳ ಧೈರ್ಯ, ಸಾಹಸವನ್ನು ಮಹಿಳೆಯರು ರೂಢಿಸಿಕೊಳ್ಳಬೇಕಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts