More

    ಗಬ್ಬೂರು ತಾಲೂಕು ಕೇಂದ್ರ ಮಾಡಿ; ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯ

    ಕೇಂದ್ರ ಸ್ಥಾನಿಕ ಅಧಿಕಾರಿಗೆ ಮನವಿ

    ರಾಯಚೂರು: ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ಡಿಸಿ ಕಚೇರಿಯ ಕೇಂದ್ರ ಸ್ಥಾನಿಕ ಅಧಿಕಾರಿಗೆ ರಾಜ್ಯ ರೈತ ಸಂಘ ಸೋಮವಾರ ಮನವಿ ಸಲ್ಲಿಸಿತು.

    ಈ ಬಗ್ಗೆ ಸಾಕಷ್ಟು ಬಾರಿ ಹೋರಾಟ ಮಾಡಲಾಗಿದೆ. ಗಬ್ಬೂರು ಹೋಬಳಿಯು ಐತಿಹಾಸಿಕ ಕ್ಷೇತ್ರವಾಗಿದ್ದು, 14ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಆಡಳಿತ ಕೇಂದ್ರವಾಗಿತ್ತು. ಅನೇಕ ಪ್ರೇಕ್ಷಣೀಯ ಸ್ಥಳಗಳು ಹೊಂದಿದೆ. ಈ ಹೋಬಳಿ ದೇವದುರ್ಗಕ್ಕೆ ಸುಮಾರು 50ರಿಂದ 60 ಕಿ.ಮೀ ಅಂತರದಲ್ಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದೆ. ಈ ಹೋಬಳಿ 110ಗ್ರಾಮಗಳ ವಾಣಿಜ್ಯ ಕೇಂದ್ರವಾಗಿದೆ. ಅನೇಕ ಸರ್ಕಾರಿ ಕಚೇರಿಗಳು ಇಲ್ಲಿವೆ. ತಾಲೂಕ ಕೇಂದ್ರಕ್ಕೆ ಅರ್ಹತೆ ಹೊಂದಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

    ಈ ಹೋಬಳಿ ಜನ ಪ್ರತಿಯೊಂದಕ್ಕೂ ದೇವದುರ್ಗಕ್ಕೆ ಹೋಗಬೇಕಾಗಿದೆ. ಜಿಲ್ಲಾ ಕೇಂದ್ರ ರಾಯಚೂರಿಗೆ ಹೋಗಲು 30 ಕಿ.ಮೀ. ಪ್ರಯಾಣಿಸಬೇಕು. ಆದ್ದರಿಂದ ಗಬ್ಬೂರನ್ನೇ ತಾಲೂಕು ಕೇಂದ್ರ ಮಾಡಿದರೆ ಜನರಿಗೆ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

    ಸಂಘಟನೆಯ ತಾಲೂಕು ಅಧ್ಯಕ್ಷ ಬೂದಯ್ಯಸ್ವಾಮಿ ಗಬ್ಬೂರು, ಬಂದಯ್ಯ ಸ್ವಾಮಿ ಹಿರೇಮಠ, ಉಪಾಧಢ್ಯಕ್ಷ ಮಲ್ಲಪ್ಪಗೌಡ ಮಾ.ಪಾ, ನಾರಾಯಣಸ್ವಾಮಿ, ಚನ್ನಪ್ಪಗೌಡ ಕಾತರಕಿ, ಶಾಂತಕುಮಾರ್ ಹೊನ್ನಟಗಿ, ರವಿ ಕುಮಾರ್, ಬಸವರಾಜ ತುಪ್ಪಳ, ಹುಚ್ಚಪೀರ್ ಮಲದಕಲ್, ಉಮ್ಮಣ್ಣ ನಾಯಕ, ಕರ್ಲಿ ಸಿದ್ದನಗೌಡ ಮಸೀದಪುರ, ಶಿವರಾಜಪ್ಪಗೌಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts