More

    ಮಕ್ಕಳ ಕಳ್ಳರೆಂದು ಸುಡುಗಾಡು ಸಿದ್ಧರಿಗೆ ಕಿರುಕುಳ

    ರಾಯಚೂರು: ಭಿಕ್ಷಾಟನೆ, ವ್ಯಾಪಾರಕ್ಕಾಗಿ ಗ್ರಾಮಗಳಿಗೆ ಹೋಗುವ ಸುಡುಗಾಡು ಸಿದ್ಧ, ಬುಡುಗ ಜಂಗಮ, ಸಿಂಧೋಳು ಸಮುದಾಯದ ಜನರಿಗೆ ಮಕ್ಕಳ ಕಳ್ಳರೆಂದು ಕಿರುಕುಳ ನೀಡುವ ಹಾಗೂ ಗ್ರಾಮ ಪ್ರವೇಶಕ್ಕೆ ನಿರಾಕರಿಸಲಾಗುತ್ತಿದೆ ಎಂದು ಕರ್ನಾಟಕ ಸುಡುಗಾಡುಸಿದ್ಧ ಮಹಾ ಸಂಘದ ಜಿಲ್ಲಾಧ್ಯಕ್ಷ ಹುಸೇನಪ್ಪ ವಿಭೂತಿ ತಿಳಿಸಿದರು.

    ಯಾದಗಿರಿ ಜಿಲ್ಲೆಯ ಗ್ರಾಮವೊಂದರಲ್ಲಿ ಸುಡುಗಾಡು ಸಿದ್ಧ ಸಮುದಾಯದ ವ್ಯಕ್ತಿಯ ಮೇಲೆ ಮಕ್ಕಳ ಕಳ್ಳ ಎಂದು ಹಲ್ಲೆ ನಡೆಸಲಾಗಿದೆ. ರಾಯಚೂರು ಜಿಲ್ಲೆಯ ಕೆಲ ಹಳ್ಳಿಗಳಲ್ಲಿ ಗ್ರಾಮ ಪ್ರವೇಶಿಸದಂತೆ ತಡೆಯೊಡ್ಡಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

    ಸಮುದಾಯದ ಜನರು ಭಿಕ್ಷಾಟನೆ, ಹಗಲು ವೇಷ, ಗಿಳಿ ಶಾಸ್ತ್ರ ಮುಂತಾದ ಕಾರ್ಯಗಳಿಗಾಗಿ ಗ್ರಾಮಗಳಿಗೆ ಅಲೆದಾಡುತ್ತಿದ್ದಾರೆ. ಜನರು ಅವರನ್ನು ಮಕ್ಕಳ ಕಳ್ಳರು ಎನ್ನುವ ವದಂತಿ ನಂಬಿ ಕಿರುಕುಳ ನೀಡುತ್ತಿರುವುದು ಸರಿಯಲ್ಲ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಪೊಲೀಸರು ಕಿರುಕುಳ ನಡೆಯದಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಸಂಘದಿಂದ ಸಮುದಾಯದ ಜನರಿಗೆ ಗುರುತಿನ ಚೀಟಿ ನೀಡಲಾಗುತ್ತಿದ್ದು, ಜನರು ಅವರ ಗುರುತಿನ ಚೀಟಿಯನ್ನು ಪರಿಶೀಲಿಸಬೇಕು. ಕೆಲವರು ಗುರುತಿನ ಚೀಟಿ ಪಡೆಯದವರಿದ್ದು, ಪೂರ್ವಾಪರ ವಿಚಾರಿಸಬೇಕೆಂದು ಆಗ್ರಹಿಸಿದರು. ಸಂಘದ ಪದಾಧಿಕಾರಿಗಳಾದ ರಂಗಮುನಿ ದಾಸ್, ಶರಣಪ್ಪ ಬಾನಾಳ, ಸಿಂಹಾದ್ರಿ, ತಿಮ್ಮಯ್ಯಸ್ವಾಮಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts