More

    ಸಿದ್ದರಾಮಯ್ಯಗೆ ಸುಳ್ಳು ಶೋಭೆ ತರಲ್ಲ; ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ

    ಮಂತ್ರಾಲಯ ಭೇಟಿ, ರಾಯರ ವೃಂದಾವನ ದರ್ಶನ

    ರಾಯಚೂರು: ವೀರ ಸಾವರ್ಕರ್ ಕುರಿತು ಸುಳ್ಳು ಹೇಳುತ್ತಿರುವುದು ಮಾಜಿ ಸಿಎಂ ಸಿದ್ದರಾಮಯ್ಯಗೆ ಶೋಭೆ ತರುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

    ಮಂತ್ರಾಲಯದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಾವರ್ಕರ್ ಬ್ರಿಟಿಷರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಕಠಿಣ ಶಿಕ್ಷೆ ಯಾಕೆ ಅನುಭವಿಸುತ್ತಿದ್ದರು ಎಂದು ಪ್ರಶ್ನಿಸಿದರು. ಸಾವರ್ಕರ್ 27ವರ್ಷಗಳಲ್ಲಿ 13ವರ್ಷ ಕಾಲಾಪಾನಿ ಶಿಕ್ಷೆ, ಗೃಹಬಂಧನ ಅನುಭವಿಸಿದ್ದರು. ಜೈಲಿನಲ್ಲಿ ಜವಾಹರಲಾಲ್ ನೆಹರುಗೆ ದೊರೆತ ಸೌಲಭ್ಯಗಳು ಸಾರ್ವಕರ್‌ಗೆ ದೊರೆತಿರಲಿಲ್ಲ. ಡಿಸ್ಕವರಿ ಆಫ್ ಇಂಡಿಯಾ ಪುಸ್ತಕ ಬರೆಯಲು ನೆಹರುಗೆ ಟೇಬಲ್, ಪೆನ್ನು ಕೊಟ್ಟಂತೆ ಬ್ರಿಟಿಷರು ಸಾವರ್ಕರ್‌ಗೆ ಅವುಗಳನ್ನು ಕೊಟ್ಟರಿಲಿಲ್ಲ. ಕೆಲ ಸ್ವಾತಂತ್ರೃಹೋರಾಟಗಾರರಿಗೆ ಲಾರ್ಡ್ ಮೌಂಟ್ ಬ್ಯಾಟನ್ ಅವರನ್ನು ಆಲಂಗಿಸುವ ಭಾಗ್ಯವಿತ್ತು. ಆದರೆ ಸಾರ್ವಕರ್ ನೆರಳು ನೋಡಿದರೂ ಬ್ರಿಟಿಷರಿಗೆ ಆಗುತ್ತಿರಲಿಲ್ಲ. ಜನರೇ ಹೋಲಿಕೆ ಮಾಡಿ ನಿರ್ಧರಿಸಬೇಕಿದೆ ಎಂದರು.

    ಮಹಾತ್ಮ ಗಾಂಧೀಜಿಯನ್ನು ಆರ್‌ಎಸ್‌ಎಸ್‌ನವರೇ ಕೊಂದರು ಎಂದು ಹೇಳುವ ಸಿದ್ದರಾಮಯ್ಯ, ಅಂದು ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿತ್ತು. ಆಗ ಏಕೆ ಆರ್‌ಎಸ್‌ಎಸ್‌ಅನ್ನು ನಿಷೇಧೀಸಲಿಲ್ಲ. ಗಾಂಧೀಜಿ ಕೊಲೆ ತನಿಖೆಗೆ ಮೂರು ಆಯೋಗ ರಚಿಸಲಾಗಿತ್ತು. ಮೂರೂ ಆಯೋಗಗಳು ಗಾಂಧೀಜಿ ಹತ್ಯೆಗೆ ಆರ್‌ಎಸ್‌ಎಸ್ ಕಾರಣವಲ್ಲ ಎಂದೇ ಹೇಳಿವೆ. ಅಂದು ಬಿಜೆಪಿಯ ಒಬ್ಬ ಸಂಸದನೂ ಇರಲಿಲ್ಲ. ಕಾಂಗ್ರೆಸ್ಸಿಗರು ಅಂದೇಕೆ ಪ್ರಶ್ನಿಸಸಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts