More

    ಹೆದ್ದಾರಿ ಭೂ ಪರಿಹಾರ ಪರಿಷ್ಕರಿಸಿ

    ರಾಯಚೂರು: ಕೇಂದ್ರ ಸರ್ಕಾರ ಭಾರತ್ ಮಾಲಾ ಯೋಜನೆಯಡಿ ನಿರ್ಮಾಣ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿಗೆ ರೈತರಿಂದ ಸ್ವಾಧೀನ ಪಡಿಸಿಕೊಳ್ಳುತ್ತಿರುವ ಭೂಮಿಗೆ ನಿಗದಿಪಡಿಸಿದ ಪರಿಹಾರವನ್ನು ಪರಿಷ್ಕರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮಹಿಳಾ ಘಟಕದ ಅಧ್ಯಕ್ಷೆ ಮೈನಾದೇವಿ ಒತ್ತಾಯಿಸಿದರು.

    ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಸ್ವಾಧೀನ ಪಡಿಸಿಕೊಳ್ಳುತ್ತಿರುವ ಭೂಮಿಗೆ ನಿಗದಿಪಡಿಸಲಾಗಿರುವ ಪರಿಹಾರ ಕಡಿಮೆಯಾಗಿದ್ದು, ರೈತರಿಗೆ ಅನ್ಯಾಯವಾಗುತ್ತಿದೆ. ಮಾರುಕಟ್ಟೆ ದರಕ್ಕಿಂತ ರೈತರು ಕಡಿಮೆ ದರಕ್ಕೆ ಭೂಮಿಯನ್ನು ಬಿಟ್ಟುಕೊಡಬೇಕಾಗಿದೆ ಎಂದು ದೂರಿದರು.

    ಪ್ರತಿ ಎಕರೆಗೆ 7 ರಿಂದ 15 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಆದರೆ, ಮಾರುಕಟ್ಟೆಯಲ್ಲಿ ಪ್ರತಿ ಎಕರೆಗೆ 40 ರಿಂದ 50 ಲಕ್ಷ ರೂ. ದರ ಇದೆ. ಜಮೀನು ಕಳೆದುಕೊಳ್ಳುವ ರೈತರು ಜೀವನಕ್ಕೆ ಪರದಾಡುವಂತಾಗಲಿದೆ. ರೈತರು ಹೆದ್ದಾರಿ ನಿರ್ಮಾಣಕ್ಕೆ ಭೂಮಿ ನೀಡಲು ಸಿದ್ಧರಿದ್ದು, ಸೂಕ್ತ ಪರಿಹಾರ ನಿಗದಿಪಡಿಸಬೇಕಾಗಿದೆ. ತಾಲೂಕಿನ ಸಿಂಗನೋಡಿ, ಮಂಡಲಗೇರಾ, ಚಂದ್ರಬಂಡಾ ಗ್ರಾಮಗಳಲ್ಲಿ ಬೇರೆ ಬೇರೆ ಬೆಲೆ ನಿಗದಿ ಮಾಡಿ ತಾರತಮ್ಯ ಮಾಡಲಾಗುತ್ತಿದೆ ಎಂದು ಮೈನಾದೇವಿ ಆರೋಪಿಸಿದರು. ಪದಾಧಿಕಾರಿಗಳಾದ ಸಾದತ್ ಫಯಾಜ್, ಪ್ರತಿಮಾ ಜಯಕುಮಾರ, ಮಲ್ಲಿಕಾರ್ಜುನ ಗೌಡ, ಸತ್ಯರೆಡ್ಡಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts