More

    ಆಂಬುಲೆನ್ಸ್ ಸಿಗದೆ ರಿಮ್ಸ್‌ಗೆ ಟಂಟಂನಲ್ಲಿ ಬಂದ ಹೆರಿಗೆ ಮಹಿಳೆ

    ರಾಯಚೂರು: 108 ಆಂಬುಲೆನ್ಸ್ ಸಂಪರ್ಕಿಸಿದರೂ ಲಭ್ಯ ಆಗದೆ ಕಂಗಾಲಾದ ಕುಟುಂಬ ಹೆರಿಗೆ ನೋವು ಮಧ್ಯೆಯೂ ಸರಿಯಿಲ್ಲದ ರಸ್ತೆಯಲ್ಲಿ ಟಂಟಂನಲ್ಲಿ ರಿಮ್ಸ್ ಆಸ್ಪತ್ರೆಗೆ ಆಗಮಿಸಿತು.

    ತಾಲೂಕಿನ ಕಟ್ಲಟಕೂರಿನ ಇಟ್ಟಂಗಿ ಕೆಲಸಕ್ಕೆಂದು ಒರಿಸ್ಸಾದಿಂದ ಆಗಮಿಸಿದ್ದ ಗಿರಿಧರ ಕುಟುಂಬವೆ 108 ಅಂಬ್ಯುಲೆನ್ಸ್ ಸೇವೆ ಸಿಗದೆ ಸಮಸ್ಯೆ ಎದುರಿಸಿತು. ಪತ್ನಿ ಸರಸ್ವತಿಗೆ ಭಾನುವಾರ ಬೆಳಗ್ಗೆ ಸಣ್ಣದಾಗಿ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಚಂದ್ರಬಂಡಾ ಪಿಎಚ್‌ಸಿಗೆ ತೆರಳಿದ್ದರು. ಅಲ್ಲಿ ಸೇವೆ ಲಭ್ಯ ಇಲ್ಲದ ಕಾರಣ ರಿಮ್ಸ್‌ಗೆ ತೆರಳುವಂತೆ ಸಿಬ್ಬಂದಿ ಹೇಳಿದ್ದರು. ತಕ್ಷಣವೇ 108 ಆಂಬುಲೆನ್ಸ್‌ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ಸಿಬ್ಬಂದಿ ಚಾಲಕರು ಅಲಭ್ಯ ಎಂದು ಹೇಳಿ ಫೋನ್ ಇಟ್ಟರು.

    ನಂತರ ತಕ್ಷಣವೇ ಅಲ್ಲಿಂದ ಮೂರು ಗಾಲಿಯ ಟಂಟಂ ವಾಹನ ಹತ್ತಿ ಕುಟುಂಬ ಆತಂಕದ ಮಧ್ಯೆ ರಿಮ್ಸ್ ಆಸ್ಪತ್ರೆಗೆ ಸುರಕ್ಷಿತವಾಗಿ ತಲುಪಿ ನಿಟ್ಟುಸಿರು ಬಿಟ್ಟಿತು. ರಿಮ್ಸ್ ಸಿಬ್ಬಂದಿ ತಕ್ಷಣವೆ ಮಹಿಳೆಯನ್ನು ಆಸ್ಪತ್ರೆಯೊಳಗೆ ಕರೆದೊಯ್ದು ಚಿಕಿತ್ಸೆ ನೀಡಿದರು.

    ಆರೋಗ್ಯ ಸಚಿವ ಶ್ರೀರಾಮುಲು ಅವರ ಉಸ್ತುವಾರಿ ಹೊತ್ತ ಜಿಲ್ಲೆಯಲ್ಲಿ ಈ ದುಸ್ಥಿತಿ ಕಂಡ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts