More

    ಕೊನೆಗೂ ಸರ್ಕಾರಿ ಬಂಗಲೆ ಖಾಲಿ ಮಾಡಿದ ರಾಹುಲ್ ಗಾಂಧಿ; ಸಂಸದ ಸ್ಥಾನದಿಂದ ಅನರ್ಹಗೊಂಡ ತಿಂಗಳ ಬಳಿಕ ತೆರವು

    ನವದೆಹಲಿ: ಮೋದಿ ಸರ್​ನೇಮ್ ವಿಚಾರವಾಗಿ ತಪ್ಪಿತಸ್ಥ ಅನಿಸಿಕೊಂಡು ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್ ಗಾಂಧಿ, ಕೊನೆಗೂ ಅದಾಗಿ ಒಂದು ತಿಂಗಳ ಬಳಿಕ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಿದ್ದಾರೆ. ಶನಿವಾರ ಅವರು ತಮ್ಮ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸಿದ್ದಾರೆ.

    ತಮ್ಮ ಬಂಗಲೆಯಲ್ಲಿ ಇದ್ದ ವಸ್ತುಗಳನ್ನು ಅವರು 10 ಜನಪಥ್​ನಲ್ಲಿರುವ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಅಧಿಕೃತ ನಿವಾಸಕ್ಕೆ ಸ್ಥಳಾಂತರಗೊಳಿಸಿದ್ದಾರೆ. ಇಂದೇ ಅವರು ತಮ್ಮ ಬಂಗಲೆಯ ಕೀಯನ್ನು ಲೋಕಸಭಾ ಸಚಿವಾಲಯಕ್ಕೆ ಒಪ್ಪಿಸಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ರಾಹುಲ್ ಗಾಂಧಿ ಕಾಲಿಟ್ಟು ಹೋದಲ್ಲಿ ಬಿಜೆಪಿಗೆ ಜಯ: ನನ್ನ ಗೆಲುವಿಗೂ ಅವರು ಬಂದು ಹೋಗಲಿ ಎಂದ ಬಿಜೆಪಿ ಅಭ್ಯರ್ಥಿ

    ಮೋದಿ ಸರ್​​ನೇಮ್ ವಿಚಾರವಾಗಿ ಸೂರತ್ ನ್ಯಾಯಾಲಯ ಶಿಕ್ಷೆ ವಿಧಿಸುತ್ತಿದ್ದಂತೆ ಅವರನ್ನು ವಯನಾಡ್ ಸಂಸದ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಅಲ್ಲದೆ ಏ. 22ರಂದೇ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಸೂಚನೆ ನೀಡಲಾಗಿತ್ತು. ಸದ್ಯ ಅವರು ತಮ್ಮ ವಾಸ್ತವ್ಯವನ್ನೂ ತಾಯಿಯ ಅಧಿಕೃತ ನಿವಾಸಕ್ಕೆ ಬದಲಿಸಿದ್ದಾರೆ ಎಂದು ಪಿಟಿಐ ತಿಳಿಸಿದೆ.

    ಭೀಕರ ಅಪಘಾತ: ಅಪ್ಪ-ಅಮ್ಮ ಸ್ಥಳದಲ್ಲೇ ಸಾವು, ಮಕ್ಕಳಿಬ್ಬರ ಪರಿಸ್ಥಿತಿ ಗಂಭೀರ

    ಆರ್‌ಟಿಇ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ; ಪಾಲಕರ ಒತ್ತಾಯಕ್ಕೆ ಸ್ಪಂದಿಸಿದ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts