More

    ರಾಹುಲ್ ಗಾಂಧಿ v/s ಜ್ಯೋತಿರಾದಿತ್ಯ ಸಿಂದಿಯಾ

    ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಯೂತ್​ ಕಾಂಗ್ರೆಸ್​ ಕಾರ್ಯಕಾರಿಣಿ ಸಭೆಯಲ್ಲಿ ರಾಹುಲ್ ಗಾಂಧಿ ಆಡಿರುವ ಮಾತುಗಳು ಭಾರೀ ಚರ್ಚೆಯಲ್ಲಿವೆ. ಕಳೆದ ವರ್ಷ ಕಾಂಗ್ರೆಸ್​ಅನ್ನು ತ್ಯಜಿಸಿ ಬಿಜೆಪಿ ಸೇರಿ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ ಸರ್ಕಾರದ ಪತನಕ್ಕೆ ಕಾರಣವಾದ ಜ್ಯೋತಿರಾದಿತ್ಯ ಸಿಂದಿಯಾ ಅವರು ಬಿಜೆಪಿಯಲ್ಲಿ “ಬ್ಯಾಕ್​ಬೆಂಚರ್” ಆಗಿದ್ದಾರೆಂದು ಗಾಂಧಿ ಹೇಳಿದ್ದಾರೆ ಎನ್ನಲಾಗಿದೆ.

    ವರದಿಗಳ ಪ್ರಕಾರ, ಸೋಮವಾರ ಕಾಂಗ್ರೆಸ್ ಯುವ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, “ಕಾಂಗ್ರೆಸ್​ ಕಾರ್ಯಕರ್ತರೊಂದಿಗೆ ಕೆಲಸ ಮಾಡಿ ಪಕ್ಷವನ್ನು ಬಲಪಡಿಸುವ ಅವಕಾಶ ಸಿಂದಿಯಾಗೆ ಇತ್ತು. ನಾನು ಅವರಿಗೆ ಹೇಳಿದ್ದೆ – ಒಂದು ದಿನ ನೀವು ಮುಖ್ಯಮಂತ್ರಿ ಆಗ್ತೀರಾ ಅಂತ. ಆದರೆ ಅವರು ಬೇರೆ ಮಾರ್ಗ ಆಯ್ದುಕೊಂಡರು. ಬರೆದಿಟ್ಟುಕೊಳ್ಳಿ… ಅವರು ಅಲ್ಲಿ (ಬಿಜೆಪಿ) ಯಾವತ್ತೂ ಸಿಎಂ ಆಗೋದಿಲ್ಲ. ಅದಕ್ಕಾಗಿ ಅವರು ಇಲ್ಲಿಗೆ ವಾಪಸ್ ಬರಬೇಕಾಗುತ್ತದೆ” ಎಂದು ಹೇಳಿದ್ದನ್ನು ಮಾಧ್ಯಮಗಳು ವರದಿ ಮಾಡಿದ್ದವು.

    ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಕಾಂಗ್ರೆಸ್​ ಅಧ್ಯಕ್ಷರಾಗಿಸಿ : ಯೂತ್ ಕಾಂಗ್ರೆಸ್ ಆಗ್ರಹ

    ರಾಹುಲ್​ ಗಾಂಧಿಯವರ ಮಾತಿಗೆ ಇದೀಗ ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿರುವ ಸಿಂದಿಯಾ ಪ್ರತ್ಯುತ್ತರ ನೀಡಿದ್ದಾರೆ. “ನಾನು ಕಾಂಗ್ರೆಸ್​ನಲ್ಲಿದ್ದಾಗ, ಈವಾಗ ಕಾಳಜಿ ತೋರಿಸುತ್ತಿರುವ ರೀತಿಯಲ್ಲಿ ಕಾಳಜಿ ತೋರಿಸಿದ್ದಿದ್ದರೆ, ಸನ್ನಿವೇಶ ಬೇರೆ ರೀತಿ ಇರುತ್ತಿತ್ತು” ಎಂದು ಸಿಂದಿಯಾ ಚುಟುಕಾಗಿ ತಿರುಗೇಟು ನೀಡಿದ್ದಾರೆ.

    ಒಂದು ವರ್ಷದ ಹಿಂದೆ ಸಿಂದಿಯಾ ಕಾಂಗ್ರೆಸ್​​ನೊಂದಿಗಿನ ತಮ್ಮ 19 ವರ್ಷಗಳ ಸಂಪರ್ಕವನ್ನು ಕಡಿದುಕೊಂಡಿದ್ದರು. ರಾಜ್ಯ ಕಾಂಗ್ರೆಸ್​ನಲ್ಲಿ ತಮಗೆ ಸೂಕ್ತ ಮಹತ್ವ ನೀಡದಿರುವ ಬಗ್ಗೆ ಸಿಂದಿಯಾ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    “ರಾಹುಲ್ ಭೈಯಾ… ನೀವಾಗ ರಜೆಯ ಮೇಲಿದ್ದಿರಿ… ಅದಕ್ಕೆ ನಿಮಗೆ ಗೊತ್ತಿಲ್ಲ”

    ಹೆಚ್ಚಿದ ಕರೊನಾ : ಮದುವೆ ಸಮಾರಂಭಗಳಿಗೆ ಪೊಲೀಸರಾಗಲಿದ್ದಾರೆ ವಿಶೇಷ ಅತಿಥಿಗಳು !

    ಗೀರ್ ಅರಣ್ಯ ಪ್ರದೇಶದಲ್ಲಿ ‘ಲಯನ್​ ಶೋ’ : ಏಳು ಜನರಿಗೆ ಜೈಲು ಶಿಕ್ಷೆ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts