More

    ಲಖೀಂಪುರ್​ ಖೇರಿಗೆ ಕಾಂಗ್ರೆಸ್​ ನಾಯಕರ ನಿಯೋಗ; ಅನುಮತಿ ನೀಡಿದ ಯುಪಿ ಸರ್ಕಾರ

    ಲಖನೌ: ಪ್ರತಿಭಟನಾನಿರತ ರೈತರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಮತ್ತು ಸಾವುನೋವುಗಳು ಸಂಭವಿಸಿದ್ದ ಉತ್ತರಪ್ರದೇಶದ ಲಖೀಂಪುರ ಖೇರಿಗೆ ಭೇಟಿ ನೀಡಲು ರಾಜ್ಯ ಸರ್ಕಾರ ಕಾಂಗ್ರೆಸ್​ ನಾಯಕರಾದ ರಾಹುಲ್​ ಗಾಂದಿ, ಪ್ರಿಯಾಂಕಾ ಗಾಂಧಿ ಮತ್ತು ಇನ್ನೂ ಮೂವರಿಗೆ ಅನುಮತಿ ನೀಡಿದೆ.

    ರಾಜ್ಯ ಸರ್ಕಾರವು ಐದು ಜನರ ಗುಂಪುಗಳಲ್ಲಿ ಲಖೀಂಪುರ್ ಖೇರಿಗೆ ಹೋಗಲು ಜನರಿಗೆ ಅನುಮತಿ ನೀಡಿದೆ. ಅಲ್ಲಿಗೆ ಹೋಗಬಯಸುವವರು ಯಾರು ಬೇಕಿದ್ದರೂ ಈಗ ಹೋಗಬಹುದು ಎಂದು ರಾಜ್ಯದ ಪೊಲೀಸ್​ ಅಡಿಷನಲ್ ಡೈರೆಕ್ಟರ್ ಜನರಲ್ ಪ್ರಶಾಂತ್​ ಕುಮಾರ್​ ಹೇಳಿದ್ದಾರೆ. ಸರ್ಕಾರವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ನಿರ್ಬಂಧಗಳನ್ನು ಹೇರಿತ್ತು, ಸಂಚಾರವನ್ನು ನಿರ್ಬಂಧಿಸುವ ಸಲುವಾಗಿ ಅಲ್ಲ. ಈ ಪ್ರಕರಣದಲ್ಲಿ ಪೊಲೀಸರು ವಿವರವಾದ ತನಿಖೆ ನಡೆಸಲಿದ್ದು, ಯಾರೇ ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದಿದ್ದಾರೆ.

    ಇದನ್ನೂ ಓದಿ: ಮುಳುಗುವ ಹಡಗು ಎನ್ನುವವರಿಗೆ 2023ರಲ್ಲಿ ಉತ್ತರ : ವಿರೋಧಿಗಳಿಗೆ ಮಾಜಿ ಸಿಎಂ ಎಚ್‌ಡಿಕೆ ಸಂದೇಶ

    ಭಾನುವಾರ ನಡೆದ ಉದ್ವಿಗ್ನ ಘಟನೆಯ ನಂತರ ಘಟನಾ ಸ್ಥಳದಲ್ಲಿ ಸೆಕ್ಷನ್​ 144 ಅಡಿ ಕರ್ಫ್ಯೂ ವಿಧಿಸಲಾಗಿತ್ತು ಹಾಗೂ ಅಲ್ಲಿಗೆ ಹೊರಟಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಮಾರ್ಗಮಧ್ಯೆಯೇ ತಡೆದು ಗೃಹಬಂಧನದಲ್ಲಿರಿಸಲಾಗಿತ್ತು. ಇದೀಗ ಯುಪಿ ಸರ್ಕಾರ ಕಾಂಗ್ರೆಸ್​ ನಾಯಕರಿಗೆ ಸ್ಥಳಕ್ಕೆ ತೆರಳಲು ಅವಕಾಶ ಕಲ್ಪಿಸಿದೆ.

    ಲಖನೌನಲ್ಲಿ ರಾಹುಲ್​ ಗಾಂಧಿ: ಲಖೀಂಪುರ್​ ಖೇರಿಗೆ ತೆರಳಲು ರಾಹುಲ್​ ಗಾಂಧಿ, ಪಂಜಾಬ್​ ಸಿಎಂ ಚರಣ್​ಜೀತ್​ ಸಿಂಗ್​ ಚನ್ನಿ, ಛತ್ತೀಸಗಡ ಸಿಎಂ ಭೂಪೇಶ್ ಬಗೇಲ್, ಕೆ.ಸಿ.ವೇಣುಗೋಪಾಲ್, ರಣದೀಪ್ ಸರ್ಜೇವಾಲಾ ಅವರನ್ನೊಳಗೊಂಡ ಕಾಂಗ್ರೆಸ್​ ನಿಯೋಗ ಅದಾಗಲೇ ಲಖನೌ ತಲುಪಿದೆ. ಲಖನೌ ವಿಮಾನ ನಿಲ್ದಾಣದಲ್ಲಿ ರಾಹುಲ್​ ಗಾಂಧಿ ಅವರಿಗೆ ಭದ್ರತಾ ದೃಷ್ಟಿಯಿಂದ ಪೊಲೀಸ್​ ಎಸ್ಕಾರ್ಟ್​ನಲ್ಲಿ ಘಟನಾ ಸ್ಥಳಕ್ಕೆ ಹೋಗಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಅವರು ಕೊಂಚ ಕಾಲ ಅಲ್ಲೇ ಧರಣಿ ಕುಳಿತಿದ್ದರು. ನಂತರ ತಮ್ಮ ವಾಹನದಲ್ಲೇ, ಲಖೀಂಪುರದಲ್ಲಿ ಸಾವಪ್ಪಿದ ರೈತರ ಕುಟುಂಬಸ್ಥರನ್ನು ಮಾತನಾಡಿಸಲು ತೆರಳಿದರು. (ಏಜೆನ್ಸೀಸ್)

    ಮಕ್ಕಳಾಗದ ದಂಪತಿಗಳೇ ಇವರ ಟಾರ್ಗೆಟ್​! ಬಾಡಿಗೆ ತಾಯಿ ಹೆಸರಲ್ಲಿ ಬಡ ಮಕ್ಕಳ ಮಾರಾಟ

    ‘ಸರ್ಕಾರದ ದುಷ್ಕರ್ಮಗಳಿಗೆ ಪಶ್ಚಾತ್ತಾಪ’ ಎಂದು ತಲೆಬೋಳಿಸಿಕೊಂಡ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts