More

    ಮತ್ತೆ ರಾಹುಲ್​ ಗಾಂಧಿ ಕಾಂಗ್ರೆಸ್ ಅಧ್ಯಕ್ಷ? ಇಂದಿನ ಸಂಸದರ ಸಭೆಯಲ್ಲಿ ಏನಾಯ್ತು?

    ನವದೆಹಲಿ: 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಹೀನಾಯವಾಗಿ ಸೋತ ಬಳಿಕ ರಾಹುಲ್​ ಗಾಂಧಿ ಅಧ್ಯಕ್ಷಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಹೊಸ ಅಧ್ಯಕ್ಷರನ್ನು ಇನ್ನೂ ನೇಮಕ ಮಾಡಲಾಗದೆ ಸೋನಿಯಾ ಗಾಂಧಿ ಅವರೇ ಅಧ್ಯಕ್ಷೆಯಾಗಿ ಪಕ್ಷದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

    ರಾಹುಲ್​ ಗಾಂಧಿಯವರು ರಾಜೀನಾಮೆ ನೀಡಿದ ಬಳಿಕ ಇಲ್ಲಿಯವರೆಗೆ ಎಷ್ಟೋ ಸಲ ಮತ್ತೆ ರಾಹುಲ್​ ಗಾಂಧಿಯವರೇ ಅಧ್ಯಕ್ಷರಾಗಲಿ ಎಂಬ ಮಾತು ಪಕ್ಷದ ಮುಖಂಡರ ಬಾಯಲ್ಲಿ ಕೇಳಿಬಂದಿದೆ. ಹಲವರು ರಾಹುಲ್​ ಗಾಂಧಿ ಮತ್ತೆ ಅಧ್ಯಕ್ಷರಾಗಲಿ ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ರಾಹುಲ್​ ಗಾಂಧಿ ಮಾತ್ರ ಯಾರ ಮಾತಿಗೂ ಸೊಪ್ಪು ಹಾಕುತ್ತಿಲ್ಲ. ನಾನು ಅಧ್ಯಕ್ಷನಾಗುವುದಿಲ್ಲ ಎಂದಿದ್ದಾರೆ.

    ಇಂದು ಬೆಳಗ್ಗೆ ಸೋನಿಯಾ ಗಾಂಧಿಯವರು ಕಾಂಗ್ರೆಸ್​ ಸಂಸದರೊಂದಿಗೆ ನಡೆಸಿದ ವರ್ಚ್ಯುವಲ್​ ಸಭೆಯಲ್ಲಿ ಕೂಡ ಹಲವು ಸಂಸದರು ರಾಹುಲ್ ಗಾಂಧಿ ಮತ್ತೊಮ್ಮೆ ಅಧ್ಯಕ್ಷರಾಗುವಂತೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್​ ಲೋಕಸಭಾ ಸದಸ್ಯರಾದ ಕೆ.ಸುರೇಶ್​ ಮೊದಲು ಈ ಪ್ರಸ್ತಾಪವನ್ನು ಇಟ್ಟರು. ಅದಕ್ಕೆ ಉಳಿದ ಆರು ಸಂಸದರಾದ ಅಂತೋ ಅಂಥೋನಿ, ಮಾನಿಕ್ಕಂ ಟಾಗೋರ್​, ಗೌರವ್​ ಗೊಗೊಯಿ, ಅಬ್ದುಲ್​ ಖಲೀಕ್, ಮೊಹಮ್ಮದ್​ ಜಾವೇದ್​ ಮತ್ತು ಸಪ್ತಗಿರಿ ಶಂಕರ್​ ಅವರು ಬೆಂಬಲಿಸಿದ್ದಾರೆ. ಆದರೆ ರಾಹುಲ್​ ಗಾಂಧಿಯವರು ಮಾತ್ರ ಇದಕ್ಕೆ ಒಂದೂ ಪ್ರತಿಕ್ರಿಯೆ ನೀಡಿಲಿಲ್ಲ. ಮೌನವಾಗಿಯೇ ಇದ್ದರು. ಇದನ್ನೂ ಓದಿ: ಹಸ್ತಮೈಥುನವೇ ಸಾಕು, ಗಂಡನ ಅವಶ್ಯಕತೆ ಇಲ್ಲ; ಸ್ಯಾಂಡಲ್​ವುಡ್ ನಟಿಯ ಬೋಲ್ಡ್ ಮಾತು!

    ಸುಮಾರು ಮೂರೂವರೆ ತಾಸುಗಳ ಮೀಟಿಂಗ್​​ನಲ್ಲಿ ಹಲವು ಸಂಸದರು ತಮ್ಮ ಪಕ್ಷ ಇನ್ನೂ ಬಲಿಷ್ಠವಾಗಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ. ಸೋನಿಯಾ ಗಾಂಧಿಯವರು ಮಧ್ಯಂತರ ಅವಧಿಗೆ ಅಧ್ಯಕ್ಷೆಯಾಗಿದ್ದು, ಅವರ ಅವಧಿ ಆಗಸ್ಟ್​ 10ರಂದು ಮುಕ್ತಾಯಗೊಳ್ಳಲಿದೆ. ಅದಾದ ಬಳಿಕ ಯಾರಾದರೂ ಪೂರ್ಣ ಅವಧಿಗೆ ಅಧ್ಯಕ್ಷರಾಗಿ ನೇಮಕಗೊಳ್ಳಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ ಎಂದು ಕಾಂಗ್ರೆಸ್​ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಗೃಹ, ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts