ನಿಮಗೆ ಎಷ್ಟು ಸಾಧ್ಯವೋ ಅಷ್ಟು ಕೇಸ್​ ದಾಖಲಿಸಿ : ರಾಹುಲ್​ ಗಾಂಧಿ

rahul
Published on

ಬಾರ್ಪೇಟಾ: ಬಿಜೆಪಿ ಸರ್ಕಾರವಿರುವ ರಾಜ್ಯವು ತಮಗೆ ಎಷ್ಟು ಸಾಧ್ಯವೋ ಅಷ್ಟು ಪ್ರಕರಣಗಳನ್ನು ನಮ್ಮ ಮೇಲೆ ದಾಖಲಿಸಲು ಧೈರ್ಯ ಮಾಡಿದೆ. ಆದರೆ ನಾವು ಇದಿಕ್ಕೆಲ್ಲ ಹೆದರುವುದಿಲ್ಲ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸವಾಲ್​ ಎಸೆದಿದ್ದಾರೆ.

ಬಾರ್ಪೇಟಾ ಜಿಲ್ಲೆಯಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯ 7 ನೇ ದಿನದಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಕಟುವಾಗಿ ಟೀಕಿಸಿದ್ದಾರೆ.

ಕೇಸ್ ಹಾಕುವ ಮೂಲಕ ನನ್ನನ್ನು ಬೆದರಿಸಬಹುದು ಎಂಬ ಆಲೋಚನೆ ಹಿಮಂತ ಬಿಸ್ವ ಶರ್ಮಾ ಅವರಿಗೆ ಹೇಗೆ ಬಂದಿತೋ ಗೊತ್ತಿಲ್ಲ. ಎಷ್ಟು ಸಾಧ್ಯವೋ ಅಷ್ಟು ಪ್ರಕರಣಗಳನ್ನು ದಾಖಲಿಸಿ. ಇನ್ನೂ 25 ಕೇಸ್​ ದಾಖಲು ಮಾಡಿ, ಬಿಜೆಪಿ-ಆರ್​ಎಸ್​ಎಸ್​ ಕೂಡ ನನ್ನನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.

ಗುವಾಹಟಿ ಪೊಲೀಸರು ಸ್ವಯಂ ಪ್ರೇರಿತರಾಗಿ ಜನವರಿ 23 ರಂದು ಶ್ರೀ ಗಾಂಧಿ ಮತ್ತು ಇತರ ನಾಯಕರ ವಿರುದ್ಧ ರಾಜ್ಯ ರಾಜಧಾನಿಯಲ್ಲಿ ಹಿಂಸಾಚಾರದ ಉದ್ದೇಶಪೂರ್ವಕ ಕೃತ್ಯಗಳಿಗಾಗಿ ಎಫ್‌ಐಆರ್ ದಾಖಲಿಸಿದ್ದಾರೆ. ಬಿಜೆಪಿ, ಆರ್​​​ಎಸ್​ಎಸ್​ ಅಸ್ಸಾಂನ ಭಾಷೆ, ಸಂಸ್ಕೃತಿ ಮತ್ತು ಇತಿಹಾಸವನ್ನು ಅಳಿಸಿಹಾಕಲು ಬಯಸಿದೆ. ಅಸ್ಸಾಂ ಅನ್ನು ನಾಗ್ಪುರದಿಂದ ಹೊರಗಿಡಲು ಯತ್ನಿಸುತ್ತಿದೆ. ಆದರೆ ನಾವು ಅದಕ್ಕೆ ಅನುಮತಿ ನೀಡುವುದಿಲ್ಲ. ಅಸ್ಸಾಂ ಅನ್ನು ಅಸ್ಸಾಂನಿಂದ ಮಾತ್ರ ನಡೆಸಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net