More

    ಚೀನಾ ಸೈನಿಕರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಯಾಕೆ ಹೇಳಿದರು?-ರಾಹುಲ್ ಗಾಂಧಿ

    ಭಾರತ-ಚೀನಾ ಗಡಿ ಬಿಕ್ಕಟ್ಟಿನ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸುಳ್ಳು ಯಾಕೆ ಹೇಳುತ್ತಿದ್ದಾರೆ ಎಂದು ಮತ್ತೊಮ್ಮೆ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಪ್ರಶ್ನಿಸಿದ್ದಾರೆ.

    ಚೀನಾದ ಸೈನಿಕರು ಪೂರ್ವ ಲಡಾಖ್​​ನಲ್ಲಿ ಭಾರತದ ಭೂಪ್ರದೇಶದ ಒಳಗೆ ಮೇ ತಿಂಗಳಿನಲ್ಲೇ ಪ್ರವೇಶಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯ ಅಧಿಕೃತವಾಗಿ ಒಪ್ಪಿಕೊಂಡಿರುವ ಬೆನ್ನಲ್ಲೇ ರಾಹುಲ್​ ಗಾಂಧಿ ಪ್ರಶ್ನೆ ಮಾಡಿದ್ದಾರೆ.

    ಜೂ.15ರಂದು ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಹೊಡೆದಾಟ ನಡೆದು ಭಾರತೀಯ ಸೇನೆಯ 20 ಸೈನಿಕರು ಹುತಾತ್ಮರಾಗಿದ್ದರು. ಅದಾದ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚೀನಾ ಸೈನಿಕರು ಭಾರತದ ಭೂಪ್ರದೇಶಕ್ಕೆ ನುಗ್ಗಿಲ್ಲ. ಗಡಿ ದಾಟಿಲ್ಲ ಎಂದು ಹೇಳಿದ್ದರು.

    ಅಂದು ಪ್ರಧಾನಮಂತ್ರಿ ಭಾಷಣದ ನಂತರವೂ ಕೂಡ ರಾಹುಲ್​ ಗಾಂಧಿ ಅನುಮಾನ ವ್ಯಕ್ತಪಡಿಸಿದ್ದರು. ಸೈನಿಕರು ಭಾರತದ ಒಳಗೆ ಪ್ರವೇಶಿಸಿಲ್ಲ ಎಂದ ಮೇಲೆ ನಮ್ಮ ಸೈನಿಕರು ಹಾಗೂ ಅವರ ನಡುವೆ ಗಲಾಟೆ ಯಾಕಾಗಿದೆ? ನಮ್ಮ ಯೋಧರೇಕೆ ಹುತಾತ್ಮರಾದರು. ಇವರೇ ಚೀನಾ ಗಡಿಯೊಳಗೆ ಹೋಗಿದ್ದಾರಾ ಎಂಬಿತ್ಯಾದಿ ಅನುಮಾನಗಳನ್ನು ರಾಹುಲ್ ಗಾಂಧಿ, ಪಿ.ಚಿದಂಬರಂ ಮತ್ತಿತರರು ಕೇಳಿದ್ದರು.

    ಇದೀಗ ರಕ್ಷಣಾ ಸಚಿವಾಲಯದ ವೆಬ್​ಸೈಟ್​ನಲ್ಲಿ, ಚೀನಾ ಸೈನಿಕರು ಪೂರ್ವ ಲಡಾಖ್​​ನಲ್ಲಿ ಭಾರತದ ಭೂಪ್ರದೇಶದ ಒಳಗೆ ಮೇ ತಿಂಗಳಲ್ಲೇ ಅತಿಕ್ರಮಣ ಮಾಡಿದ್ದರು ಎಂದು ದಾಖಲೆಗಳನ್ನು ಅಪ್ಲೋಡ್​ ಮಾಡಲಾಗಿದೆ. ಅದರ ಬಗ್ಗೆ ಮಾಧ್ಯಮವೊಂದು ಮಾಡಿದ ವರದಿಯನ್ನು ಉಲ್ಲೇಖಿಸಿ ಟ್ವೀಟ್​ ಮಾಡಿರುವ ರಾಹುಲ್ ಗಾಂಧಿ, ಹಾಗಾದರೆ ಪ್ರಧಾನಿ ನರೇಂದ್ರ ಮೋದಿಯವರೇಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಕೇಳಿದ್ದಾರೆ.

    ಚೀನಾದ ಸೈನಿಕರು ಮೇ 17,18ರಂದು ಉತ್ತರ ಹಾಟ್​ಸ್ಪ್ರಿಂಗ್ಸ್​​ನ ಪೆಟ್ರೋಲಿಂಗ್​ ಪಾಯಿಂಟ್​ 15ರ ಬಳಿ ಇರುವ ಕುಗ್ರಾಂಗ್ ನಾಲಾ, ಗೋಗ್ರಾ (ಪಿಪಿ 17ಎ) ಮತ್ತು ಪ್ಯಾಂಗೋಂಗ್ ತ್ಸೋದ ಉತ್ತರ ದಡದ ಬಳಿ ಗಡಿ ನಿಯಮ ಉಲ್ಲಂಘಿಸಿ, ಅತಿಕ್ರಮಣ ಮಾಡಿದ್ದರು ಎಂದು ರಕ್ಷಣಾ ಸಚಿವಾಲಯದ ವೆಬ್​ಸೈಟ್​​ನಲ್ಲಿ ಉಲ್ಲೇಖಿಸಲಾಗಿದೆ. (ಏಜೆನ್ಸೀಸ್​)

    ಕರೊನಾ ಭರಾಟೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ನಕಲಿ ಸ್ಯಾನಿಟೈಸರ್ ಮಾರಾಟಕ್ಕೆ ಬ್ರೇಕ್…..! ಬೆಚ್ಚಿಬೀಳಿಸುವಂತಿದೆ ‘ನಕಲಿ’ ಎಫೆಕ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts