More

    ಎರಡು ತಿಂಗಳ ಅವಧಿಯೊಳಗೆ ಎರಡು ಭರ್ಜರಿ ದ್ವಿಶತಕ: ಅಪ್ಪನ ಹಾದಿಯಲ್ಲೇ ಮುನ್ನಡೆದ ದ್ರಾವಿಡ್​​ ಪುತ್ರ

    ನವದೆಹಲಿ: ಎರಡು ತಿಂಗಳ ಅವಧಿಯೊಳಗೆ ಎರಡು ದ್ವಿಶತಕ ಬಾರಿಸುವ ಮೂಲಕ ಗೋಡೆ ಖ್ಯಾತಿಯ ಟೀಮ್​ ಇಂಡಿಯಾದ ಮಾಜಿ ಆಟಗಾರ ಹಾಗೂ ಎನ್​ಸಿಎ ಮುಖ್ಯಸ್ಥ ರಾಹುಲ್​ ಡ್ರಾವಿಡ್​ ಅವರ ಪುತ್ರ ಸಮೀತ್​ ದ್ರಾವಿಡ್​ ಅಪ್ಪನ ಹಾದಿಯಲ್ಲೇ ಮುನ್ನಡೆಯುವ​ ಸೂಚನೆ ನೀಡಿದ್ದಾರೆ.

    ಮಲ್ಯ ಆದಿತಿ ಇಂಟರ್​ ನ್ಯಾಷನಲ್​ ಸ್ಕೂಲ್​ ಮತ್ತು ಶ್ರೀ ಕುಮಾರನ್​ ಸ್ಕೂಲ್​ ನಡುವೆ ನಡೆದ 14 ವಯೋಮಿತಿಯ ಬಿಟಿಆರ್ ಶೀಲ್ಡ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದು, ಎರಡು ತಿಂಗಳ ಅವಧಿಯೊಳಗೆ ಬಾರಿಸಿದ ಎರಡನೇ ದ್ವಿಶತಕ ಸಾಧನೆಯಾಗಿದೆ.

    33 ಬೌಂಡರಿ ನೆರವಿನಿಂದ 204 ರನ್​ ಗಳಿಸಿದ ಸಮೀತ್​, ಮಲ್ಯ ಆದಿತಿ ಇಂಟರ್​ನ್ಯಾಷನಲ್ ಸ್ಕೂಲ್​ 3 ವಿಕೆಟ್​ ನಷ್ಟಕ್ಕೆ 377 ರನ್​ ಗಳಿಸಲು ನೆರವಾದರು. ಗುರಿ ಬೆನ್ನತ್ತಿದ ಶ್ರೀ ಕುಮಾರನ್​ ಸ್ಕೂಲ್​ 110 ರನ್​ಗೆ ಆಲೌಟ್​ ಆಯಿತು. ವಿಶೇಷವೆಂದರೆ, ಸಮೀತ್​ ಕೂಡ ಎರಡು ಪ್ರಮುಖ ವಿಕೆಟ್​ ಕಬಳಿಸಿದರು. ಸಮೀತ್​ ತಂಡ 267 ರನ್​ ಭಾರಿ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು.

    ಸಮೀತ್​ ಕಳೆದ ವರ್ಷ ಡಿಸೆಂಬರ್​ನಲ್ಲಿ ಕೋಲ್ಕತದಲ್ಲಿ ನಡೆದ 14 ವಯೋಮಿತಿಯ ಅಂತರ ವಲಯ ರಾಜ್ಯ ಮಟ್ಟದ ಟೂರ್ನಮೆಂಟ್​ನಲ್ಲಿಯೂ ದ್ವಿಶತಕ ಬಾರಿಸಿದ್ದರು. ವೈಸ್​-ಪ್ರೆಸೆಡೆಂಟ್ ಇಲೆವೆನ್​ ತಂಡದ ಪರ ಆಡಿದ ಸಮೀತ್​ 22 ಬೌಂಡರಿ ನೆರವಿನೊಂದಿಗೆ 256 ರನ್​ ಗಳಿಸಿದ್ದರು. ಆದರೆ, ಪಂದ್ಯ ಡ್ರಾನಿಂದ ಅಂತ್ಯಗೊಂಡಿತ್ತು. ಅಲ್ಲದೆ, ಪಂದ್ಯದಲ್ಲಿ ಅಮೀತ್​ ಮೂರು ವಿಕೆಟ್​ ಕೂಡ ಪಡೆದುಕೊಂಡಿದ್ದರು.

    ಸದ್ಯ 14 ವಯೋಮಿತಿಯ ಪಂದ್ಯಾವಳಿಯಲ್ಲಿ ಸಮೀತ್​ ನಿರಂತರವಾಗಿ ಗಮನಾರ್ಹ ಪ್ರದರ್ಶನ ನೀಡುತ್ತಿರುವುದನ್ನು ನೋಡಿದರೆ, ಅಪ್ಪನ ಹಾದಿಯಲ್ಲೇ ರಾಷ್ಟ್ರೀಯ ಮಟ್ಟದ ತಂಡದಲ್ಲಿ ಭರವಸೆಯ ಆಟಗಾರನಾಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಊಹಿಸಬಹುದಾಗಿದೆ. ಇತ್ತ ದ್ರಾವಿಡ್​ ಕೂಡ ಪುತ್ರನ ಹಾದಿಯಲ್ಲಿ ಕೈಹಿಡಿದು ನಡೆಸುತ್ತಿದ್ದಾರೆ. (ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts