More

    ರವಿಶಾಸ್ತ್ರಿ ಬಳಿಕ ಟೀಮ್ ಇಂಡಿಯಾಗೆ ತಾತ್ಕಾಲಿಕ ಕೋಚ್ ಆಗಲಿದ್ದಾರೆ ಈ ದಿಗ್ಗಜ..?

    ನವದೆಹಲಿ: ಭಾರತ ತಂಡದ ಮುಖ್ಯಕೋಚ್ ಸ್ಥಾನದಿಂದ ರವಿಶಾಸ್ತ್ರಿ ಕೆಳಗಿಳಿದ ಬಳಿಕ ಆ ಹುದ್ದೆಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರನ್ನು ತಾತ್ಕಾಲಿಕವಾಗಿ ನೇಮಿಸುವ ಸಾಧ್ಯತೆಗಳಿವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ಬಳಿಕ ರವಿಶಾಸ್ತ್ರಿ ಕೋಚ್ ಹುದ್ದೆಯಿಂದ ನಿರ್ಗಮಿಸಲಿದ್ದಾರೆ. ‘ರಾಹುಲ್ ದ್ರಾವಿಡ್‌ಗೆ ಕಾಯಂ ಆಗಿ ಕೋಚ್ ಆಗಲು ಇಷ್ಟವಿಲ್ಲ, ನಾವು ಕೂಡ ಅವರನ್ನು ಒತ್ತಾಯಿಸಿಲ್ಲ. ಅವರು ಬಯಸಿದಾಗ ಈ ಹುದ್ದೆ ನೀಡುವುದಾಗಿ’ ಗಂಗೂಲಿ ತಿಳಿಸಿದ್ದಾರೆ.

    ಇದನ್ನೂ ಓದಿ: 5ನೇ ಟೆಸ್ಟ್ ಪಂದ್ಯ ರದ್ದತಿ ಕುರಿತು ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಹೇಳಿದ್ದೇನು? 

    ರವಿಶಾಸ್ತ್ರಿ ಬಳಿಕ ಟೀಮ್ ಇಂಡಿಯಾಗೆ ತಾತ್ಕಾಲಿಕ ಕೋಚ್ ಆಗಲಿದ್ದಾರೆ ಈ ದಿಗ್ಗಜ..?ಭಾರತ ತಂಡಕ್ಕೆ ಕೋಚ್ ಆಗಬೇಕೆಂಬ ಆಸಕ್ತಿ ಇಲ್ಲ. ಸಮಯ ಬಂದಾಗ ನಿರ್ಧರಿಸುವುದಾಗಿ ರಾಹುಲ್ ದ್ರಾವಿಡ್ ಈ ಮೊದಲು ಹೇಳಿಕೊಂಡಿದ್ದರು. ಸದ್ಯ ಎನ್‌ಸಿಎ ಮುಖ್ಯಸ್ಥರಾಗಿರುವ ರಾಹುಲ್ ದ್ರಾವಿಡ್, ಕೆಲ ವರ್ಷಗಳ ಮಟ್ಟಿಗೆ ಅದೇ ಹುದ್ದೆಯಲ್ಲಿ ಮುಂದುವರಿಯುವುದಾಗಿ ಬಿಸಿಸಿಐ ಬಳಿಕ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಎನ್‌ಸಿಎ ಮೂಲಕವೇ ದ್ರಾವಿಡ್ ರಾಷ್ಟ್ರೀಯ ತಂಡಕ್ಕೆ ಉತ್ತಮ ಬೆಂಚ್ ಸ್ಟ್ರೇಂತ್ ನೀಡುತ್ತಿದ್ದಾರೆ. ಎನ್‌ಸಿಎ ಅಧ್ಯಕ್ಷರಾಗಿ ದ್ರಾವಿಡ್ ಅವರ ಎರಡು ವರ್ಷಗಳ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಅರ್ಜಿ ಆಃವಾನಿಸಿತ್ತು. ಆದರೆ, ದ್ರಾವಿಡ್ ಹೊರತುಪಡಿಸಿ ಯಾರು ಈ ಹುದ್ದೆಗೆ ಅರ್ಜಿ ಸಲ್ಲಿಸಿರಲಿಲ್ಲ.

    ಇದನ್ನೂ ಓದಿ: ನಿಗದಿತ ಓವರ್‌ಗಳ ತಂಡಕ್ಕೆ ರೋಹಿತ್ ಶರ್ಮ ಸಾರಥ್ಯ?

    ಇದೀಗ ದ್ರಾವಿಡ್ ಎನ್‌ಸಿಎ ಮುಖ್ಯಸ್ಥರಾಗಿ ಮತ್ತೆರಡು ವರ್ಷಗಳ ಕಾಲ ಮುಂದುವರಿಯುವುದು ಖಚಿತವಾಗಿದೆ. ರವಿಶಾಸ್ತ್ರಿ ಮಾರ್ಗದರ್ಶನ ವಿರಾಟ್ ಕೊಹ್ಲಿ ಸಾರಥ್ಯದ ಟೆಸ್ಟ್ ತಂಡ ಇಂಗ್ಲೆಂಡ್ ಪ್ರವಾಸದಲ್ಲಿರುವಾಗ , ದ್ರಾವಿಡ್ ಮಾರ್ಗದರ್ಶನದ ಶಿಖರ್ ಧವನ್ ನಾಯಕತ್ವದ ನಿಗದಿತ ಓವರ್‌ಗಳ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿತ್ತು.

    ಯಾರ್ಕರ್ ಸ್ಪೆಷಲಿಸ್ಟ್ ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ವಿದಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts