More

    ಎನ್‌ಸಿಎ ಮುಖ್ಯಸ್ಥರಾಗಿ ರಾಹುಲ್ ದ್ರಾವಿಡ್ ಮುಂದುವರಿಕೆ ?

    ನವದೆಹಲಿ: ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ಸ್ಥಾನದಲ್ಲಿ ಮುಂದುವರಿಯುವ ಸಲುವಾಗಿ ಅರ್ಜಿ ಹಾಕಿದ್ದಾರೆ. ಈ ಹುದ್ದೆಗೆ ಅರ್ಜಿ ಸಲ್ಲಿಸಿರುವ ರಾಹುಲ್ ದ್ರಾವಿಡ್ ಏಕೈಕ ಅಭ್ಯರ್ಥಿಯಾಗಿದ್ದು, ಎನ್ ಸಿಬಿ ಮುಖ್ಯಸ್ಥರಾಗಿ ಮುಂದುವರಿಯುವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಇದರೊಂದಿಗೆ ಟಿ20 ವಿಶ್ವಕಪ್ ಮುಕ್ತಾಯಗೊಂಡ ಬಳಿಕ ರವಿ ಶಾಸ್ತ್ರಿ ಬದಲಿಗೆ ರಾಷ್ಟ್ರೀಯ ತಂಡಕ್ಕೆ ದ್ರಾವಿಡ್ ಮುಖ್ಯಕೋಚ್ ಆಗಲಿದ್ದಾರೆ ಎಂದು ಗಾಳಿ ಸುದ್ದಿಗಳಿಗೆ ತೆರೆಬಿದ್ದಿದೆ. ರಾಷ್ಟ್ರೀಯ ತಂಡದ ಕೋಚ್ ಹುದ್ದೆ ಬದಲಿಗೆ ಎನ್‌ಸಿಎಯಲ್ಲೇ ಮುಂದುವರಿಯಲು ದ್ರಾವಿಡ್ ಆಸಕ್ತಿ ವಹಿಸಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೊಂದೆಡೆ, ಬಿಸಿಸಿಐ ಅರ್ಜಿ ಹಾಕಲು ದಿನಾಂಕವನ್ನು ವಿಸ್ತರಿಸಿದೆ.

    ಇದನ್ನೂ ಓದಿ: 6 ತಂಡಗಳ ಮಹಿಳಾ ಐಪಿಎಲ್ ಆಯೋಜಿಸಲಿ ಎಂದ ಸ್ಟಾರ್ ಆಟಗಾರ್ತಿ

    ರಾಹುಲ್ ದ್ರಾವಿಡ್ ಅವರು ಎನ್‌ಸಿಎ ಅಧ್ಯಕ್ಷರಾಗಿ ಎರಡು ವರ್ಷ ಗುತ್ತಿಗೆ ಅವಧಿ ಪೂರೈಸಿದ ಹಿನ್ನೆಲೆಯಲ್ಲಿ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಆದರೆ, ಬಿಸಿಸಿಐ ನೂತನ ಕಾನೂನಿನ ಪ್ರಕಾರ, ಎನ್‌ಸಿಎ ಅಧ್ಯಕ್ಷರನ್ನು ಮುಂದುವರಿಸುವಂತಿಲ್ಲ. ಬದಲಿಗೆ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ‘ಹೌದು, ರಾಹುಲ್ ದ್ರಾವಿಡ್ ಎನ್‌ಸಿಎ ಮುಖ್ಯಸ್ಥ ಸ್ಥಾನಕ್ಕೆ ಮತ್ತೆ ಅರ್ಜಿ ಹಾಕಿದ್ದಾರೆ. ರಾಹುಲ್ ಹೊರತುಪಡಿಸಿ ಇದುವರೆಗೂ ಯಾರೊಬ್ಬರು ಅರ್ಜಿ ಹಾಕಿಲ್ಲ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು ಆಗಸ್ಟ್ 15 ರವರೆಗೆ ಅರ್ಜಿ ಹಾಕಲು ಅವಕಾಶ ನೀಡಲಾಗಿತ್ತು. ಇದೀಗ ಅರ್ಜಿ ಹಾಕಲು ಮತ್ತಷ್ಟು ದಿನ ವಿಸ್ತರಿಸಲಾಗಿದೆ.

    ಇದನ್ನೂ ಓದಿ: ಮಗುವಿನ ಶಸ್ತ್ರಚಿಕಿತ್ಸೆಗಾಗಿ ಒಲಿಂಪಿಕ್ಸ್ ಪದಕ ಹರಾಜು! ಖರೀದಿಸಿದವರು ನೀಡಿದ ಟ್ವಿಸ್ಟ್ ಏನು ಗೊತ್ತೇ?

    ಇತ್ತೀಚೆಗೆ ರಾಹುಲ್ ದ್ರಾವಿಡ್ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ ನಿಗದಿತ ಓವರ್‌ಗಳ ತಂಡದ ಕೋಚ್ ಆಗಿದ್ದರು. ಇದರಿಂದಾಗಿ ರಾಹುಲ್ ದ್ರಾವಿಡ್ ವಿರಾಟ್ ಕೊಹ್ಲಿ ಸಾರಥ್ಯದ ತಂಡಕ್ಕೂ ಮುಖ್ಯಕೋಚ್ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಮುಂಬರುವ ಟಿ20 ವಿಶ್ವಕಪ್ ಬಳಿಕ ಮುಖ್ಯಕೋಚ್ ಹುದ್ದೆಯಿಂದ ರವಿಶಾಸ್ತ್ರಿ ನಿರ್ಗಮಿಸಲಿದ್ದಾರೆ.

    ಕಿರಿಯರ ವಿಶ್ವ ಅಥ್ಲೆಟಿಕ್ಸ್; ಭಾರತ ಮಿಶ್ರ ರಿಲೇ ತಂಡಕ್ಕೆ ಐತಿಹಾಸಿಕ ಕಂಚು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts