More

    ದ್ರಾವಿಡ್ ನಿಜಕ್ಕೂ ಗೋಡೆಯೇ ಸರಿ! ಯಾಕೆ ಗೊತ್ತೇ? ಈ ಅಂಕಿ-ಅಂಶ ನೋಡಿ…

    ಬೆಂಗಳೂರು: ಟೆಸ್ಟ್ ಕ್ರಿಕೆಟ್ ಇತಿಹಾಸ ಕಂಡ ಕಲಾತ್ಮಕ ಬ್ಯಾಟ್ಸ್​ಮನ್​ಗಳಲ್ಲಿ ರಾಹುಲ್ ದ್ರಾವಿಡ್ ಪ್ರಮುಖರು. ಕರ್ನಾಟಕದ ಈ ಬ್ಯಾಟ್ಸ್​ಮನ್​ಗೆ ‘ದಿ ವಾಲ್’ ಅಥವಾ ‘ಗೋಡೆ’ ಎಂಬ ಅಡ್ಡ ಹೆಸರು ಇದೆ. ಅವರು ಈ ಹೆಸರಿಗೆ ಎಷ್ಟು ಸೂಕ್ತವಾದವರು ಎಂದು ಐಸಿಸಿಯ ಒಂದು ಟ್ವೀಟ್ ಸಮರ್ಥ ಉತ್ತರವನ್ನು ನೀಡಿದೆ. ಹಾಗಾದರೆ ಆ ಟ್ವೀಟ್​ನಲ್ಲೇನಿದೆ ಗೊತ್ತೇ ?

    ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದ್ರಾವಿಡ್ ಎದುರಿಸಿರುವಷ್ಟು ಎಸೆತಗಳನ್ನು ಬೇರೆ ಯಾವ ಬ್ಯಾಟ್ಸ್​ಮನ್ ಕೂಡ ಎದುರಿಸಿಲ್ಲ. ದ್ರಾವಿಡ್ ಆಡಿರುವುದು 164 ಟೆಸ್ಟ್ ಪಂದ್ಯ. ದಿಗ್ಗಜ ಸಚಿನ್ ತೆಂಡುಲ್ಕರ್ ಮತ್ತು ದಕ್ಷಿಣ ಆಫ್ರಿಕಾದ ಜಾಕ್ಸ್ ಕಾಲಿಸ್​ ಅವರಿಬ್ಬರು ದ್ರಾವಿಡ್​ಗಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದರೂ ಕಡಿಮೆ ಎಸೆತಗಳನ್ನು ಎದುರಿಸಿದ್ದಾರೆ. ದ್ರಾವಿಡ್ 31,258 ಎದುರಿಸಿ ಟೆಸ್ಟ್ ಕ್ರಿಕೆಟ್​ನಲ್ಲಿ ಗೋಡೆಯಂತೆ ನಿಂತಿದ್ದಾರೆ. 200 ಟೆಸ್ಟ್ ಆಡಿರುವ ಸಚಿನ್ ಎದುರಿಸಿರುವುದು 29,437 ಎಸೆತ. 166 ಟೆಸ್ಟ್ ಆಡಿರುವ ಕಾಲಿಸ್ ಎದುರಿಸಿರುವುದು 28,903 ಎಸೆತ. ದ್ರಾವಿಡ್ ಹೊರತಾಗಿ ಬೇರೆ ಯಾರೂ ಟೆಸ್ಟ್ ಕ್ರಿಕೆಟ್​ನಲ್ಲಿ 30 ಸಾವಿರಕ್ಕಿಂತ ಹೆಚ್ಚು ಎಸೆತ ಎದುರಿಸಿಲ್ಲ ಎಂದು ಐಸಿಸಿ ಟ್ವೀಟಿಸಿದೆ.

    ಇದನ್ನೂ ಓದಿ: ಅಮಿತಾಭ್​ ಬಚ್ಚನ್​ ಆರೋಗ್ಯ ಸುಧಾರಣೆಗೆ ಕ್ರೀಡಾವಲಯ ಹಾರೈಕೆ

    ದ್ರಾವಿಡ್ ವೃತ್ತಿಜೀವನದಲ್ಲಿ ಪ್ರತಿ ಇನಿಂಗ್ಸ್​ಗೆ 190.6 ಎಸೆತಗಳನ್ನು ಎದುರಿಸಿದ್ದಾರೆ. ಈ ಮೂಲಕ ದ್ರಾವಿಡ್ ಪ್ರತಿ ಇನಿಂಗ್ಸ್​ನಲ್ಲೂ ಗೋಡೆಯಂತೆ ಟೀಮ್ ಇಂಡಿಯಾಗೆ ರಕ್ಷಣೆ ಒದಗಿಸಿದ್ದಾರೆ ಎಂಬುದು ಅಂಕಿ -ಅಂಶಗಳಿಂದಲೂ ಸಾಬೀತು ಆದಂತಾಗಿದೆ. ಪ್ರತಿ ಇನ್ನಿಂಗ್ಸ್​ನಲ್ಲೂ ದ್ರಾವಿಡ್ ವಿಕೆಟ್ ಪಡೆದುಕೊಳ್ಳುವುದು ಬೌಲರ್​ಗಳಿಗೆ ಎಷ್ಟು ಸವಾಲಾಗುತಿತ್ತು ಎಂಬುದು ಕೂಡ ಸ್ಪಷ್ಟವಾಗಿದೆ. ಟೆಸ್ಟ್ ಕ್ರಿಕೆಟ್​ನಲ್ಲಿ 27 ಸಾವಿರಕ್ಕಿಂತ ಅಧಿಕ ಎಸೆತ ಎದುರಿಸಿರುವ ಮತ್ತಿಬ್ಬರೆಂದರೆ ವೆಸ್ಟ್ ಇಂಡೀಸ್​ನ ಶಿವನಾರಾಯಣ್ ಚಂದ್ರಪಾಲ್ (27,395 ಎಸೆತ, 164 ಟೆಸ್ಟ್ ) ಮತ್ತು ಆಸ್ಟ್ರೇಲಿಯಾದ ಅಲನ್ ಬಾರ್ಡರ್ (27,002 ಎಸೆತ, 156 ಟೆಸ್ಟ್).

    ಗೋಡೆ ಆಗಿದ್ದು ಹೇಗೆ ದ್ರಾವಿಡ್

    ದ್ರಾವಿಡ್ ನಿಜಕ್ಕೂ ಗೋಡೆಯೇ ಸರಿ! ಯಾಕೆ ಗೊತ್ತೇ? ಈ ಅಂಕಿ-ಅಂಶ ನೋಡಿ...

    ಇನ್ನು ದ್ರಾವಿಡ್​ಗೆ ಗೋಡೆ ಎಂಬ ಹೆಸರು ಬಂದ ಬಗೆ ಬಹಳ ಸರಳವಾಗಿದೆ. ನಿವೃತ್ತಿ ಸಮಯದಲ್ಲಿ ಸ್ವತ ದ್ರಾವಿಡ್ ಹೇಳಿದ ಪ್ರಕಾರ, ಪತ್ರಿಕೆಯೊಂದು ಸುಂದರ ಹೆಡಿಂಗ್ ನೀಡುವ ಸಲುವಾಗಿ ‘ವಾಲ್’ ಎಂದು ಅವರನ್ನು ಕರೆದಿತ್ತಂತೆ. ಬಳಿಕ ಅದುವೇ ಅವರಿಗೆ ಅಂಟಿಕೊಂಡಿತು. ಹೀಗಾಗಿ ಪತ್ರಿಕೆಯಿಂದಲೇ ದ್ರಾವಿಡ್​ಗೆ ಗೋಡೆ ಎಂಬ ಹೆಸರು ದೊರೆತಿದ್ದು ಸ್ಪಷ್ಟವಾಗಿದೆ. ಇನ್ನು ದ್ರಾವಿಡ್ ಅವರ ಗೋಡೆ ಎಂಬ ಹೆಸರನ್ನು ಸಾಕ್ಷಾತ್ಕಾರಗೊಳಿಸಲು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಎದುರು ಗೋಡೆಯೊಂದನ್ನು ನಿರ್ಮಿಸಲಾಗಿದೆ. ದ್ರಾವಿಡ್ ಟೆಸ್ಟ್ ಕ್ರಿಕೆಟ್​ನಲ್ಲಿ 10 ಸಾವಿರ ರನ್ ಪೂರೈಸಿದ ಸಮಯದಲ್ಲಿ ಇದನ್ನು 10 ಸಾವಿರ ಇಟ್ಟಿಗೆಗಳಿಂದ ನಿರ್ಮಿಸಲಾಗಿತ್ತು. ಇದನ್ನು ದ್ರಾವಿಡ್ ಅವರ ತಾಯಿ ಪುಷ್ಪಾ ಅವರೇ ವಿನ್ಯಾಸಗೊಳಿಸಿದ್ದರು ಎಂಬುದು ವಿಶೇಷ. ಇದರ ಮೇಲೆ ದ್ರಾವಿಡ್ ಅವರ ಟ್ರೇಡ್​ಮಾರ್ಕ್ ಕವರ್ ಡ್ರೈವ್ ಶಾಟ್​ನ ಚಿತ್ರವಿದೆ. ಜತೆಗೆ ‘ಬದ್ಧತೆ, ಸ್ಥಿರತೆ, ಗುಣಮಟ್ಟ’ ಎಂದು ಬರೆಯಲಾಗಿದೆ.

    ಅನುಷ್ಕಾ ಶರ್ಮ ಮಾದಕ ಪೋಸ್​ಗೆ ವಿರಾಟ್ ಕೊಹ್ಲಿ ಏನಂತಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts