More

    ಕನ್ನಡಿಗ ಕೆಎಲ್ ರಾಹುಲ್ ಭವಿಷ್ಯದ ಭಾರತ ತಂಡದ ನಾಯಕ ಎಂದ ದಿಗ್ಗಜ

    ನವದೆಹಲಿ: ಕನ್ನಡಿಗ ಕೆಎಲ್ ರಾಹುಲ್ ಉತ್ತಮ ನಾಯಕತ್ವ ಗುಣಹೊಂದಿದ್ದಾರೆ. ತಂಡದ ಭವಿಷ್ಯದ ನಾಯಕನಾಗುವ ಎಲ್ಲ ಅರ್ಹತೆ ಹೊಂದಿದ್ದಾರೆ ಎಂದು ದಿಗ್ಗಜ ಸುನೀಲ್ ಗಾವಸ್ಕರ್ ಹೇಳಿದ್ದಾರೆ. ವಿಶ್ವಕಪ್ ಮುಕ್ತಾಯಗೊಂಡ ಬಳಿಕ ಟಿ20 ತಂಡದ ನಾಯಕತ್ವ ತ್ಯಜಿಸುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಗಾವಸ್ಕರ್ ಕನ್ನಡಿಗನ ಪರ ಬ್ಯಾಟಿಂಗ್ ಮಾಡಿದ್ದಾರೆ. ಕೊಹ್ಲಿ ಬಳಿಕ ರೋಹಿತ್ ಶರ್ಮ ನಾಯಕನಾಗಲಿದ್ದಾರೆ ಎಂಬ ಸುದ್ದಿ ನಡುವೆಯೂ ಗಾವಸ್ಕರ್ ಹೇಳಿಕೆ ಮಹತ್ವ ಪಡೆದಿದೆ. ‘ಇದು ಉತ್ತಮ ಬೆಳವಣಿಗೆ, ಬಿಸಿಸಿಐ ಭವಿಷ್ಯದ ಬಗ್ಗೆ ಚಿಂತಿಸಬೇಕಿದೆ’ ಎಂದು ಗಾವಸ್ಕರ್ ಹೇಳಿದ್ದಾರೆ.

    ಇದನ್ನೂ ಓದಿ: ವಿಶ್ವಕಪ್ ಬಳಿಕ ಟಿ20 ನಾಯಕತ್ವ ತ್ಯಜಿಸಲಿದ್ದಾರೆ ವಿರಾಟ್ ಕೊಹ್ಲಿ

    ಕನ್ನಡಿಗ ಕೆಎಲ್ ರಾಹುಲ್ ಭವಿಷ್ಯದ ಭಾರತ ತಂಡದ ನಾಯಕ ಎಂದ ದಿಗ್ಗಜ‘ಭಾರತ ತಂಡಕ್ಕೆ ಹೊಸ ನಾಯಕನ ಅವಶ್ಯಕತೆ ಇರುವಾಗುವ ರಾಹುಲ್ ಅವರನ್ನು ಏಕೆ ಪರಿಗಣಿಸಬಾರದು. ಇಂಗ್ಲೆಂಡ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಐಪಿಎಲ್‌ನಲ್ಲೂ ಉತ್ತಮ ನಿರ್ವಹಣೆ ತೋರುತ್ತಿದ್ದು, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲೂ ಫಾರ್ಮ್‌ನಲ್ಲಿದ್ದಾರೆ. ಅವರನ್ನು ಉಪನಾಯಕನಾಗಿ ನೇಮಿಸಬಹುದು’ ಎಂದು ಗಾವಸ್ಕರ್ ಹೇಳಿದ್ದಾರೆ. ರಾಹುಲ್ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಪ್ರತಿನಿಧಿಸುತ್ತಿದ್ದಾರೆ.

    ಇದನ್ನೂ ಓದಿ: ಮೊದಲ ಪಂದ್ಯಕ್ಕೂ ಮುನ್ನವೇ ಸಿಎಸ್‌ಕೆ ತಂಡಕ್ಕೆ ಶಾಕ್

    ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮುಂಬರುವ ಟಿ20 ವಿಶ್ವಕಪ್ ಬಳಿಕ ಭಾರತ ಟಿ20 ತಂಡದ ನಾಯಕತ್ವ ತ್ಯಜಿಸಲು ನಿರ್ಧರಿಸಿದ್ದಾರೆ. ಟಿ20 ವಿಶ್ವಕಪ್ ಬಳಿಕ ಏಕದಿನ ಹಾಗೂ ಟೆಸ್ಟ್ ತಂಡಗಳನ್ನಷ್ಟೇ ಮುನ್ನಡೆಸುವುದಾಗಿ ಗುರುವಾರ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಬ್ಯಾಟ್ಸ್‌ಮನ್ ಆಗಿ ಟಿ20 ತಂಡದಲ್ಲೂ ಅವರು ಮುಂದುವರಿಯಲಿದ್ದಾರೆ. ಅನುಭವಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮ, ಟಿ20 ತಂಡದ ನಾಯಕತ್ವ ಜವಾಬ್ದಾರಿ ಹೊರುವ ಸಾಧ್ಯತೆಗಳಿವೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts