More

    ಬೆಂಗ್ಳೂರಲ್ಲಿ ಚಿಂದಿ ಆಯುವವನಿಗೆ ಸಿಕ್ತು 25 ಕೋಟಿ ರೂ. ಮೌಲ್ಯದ ಡಾಲರ್! ಕೆಲವೇ ಕ್ಷಣದಲ್ಲಿ ಅಸಲಿಯತ್ತು ಬಯಲು​

    ಬೆಂಗಳೂರು: ಬೀದಿಗಳಲ್ಲಿ ಚಿಂದಿ ಆಯ್ದು ಜೀವನ ನಡೆಸುತ್ತಿದ್ದ ವ್ಯಕ್ತಿಗೆ 23 ಲಕ್ಷ ಡಾಲರ್ ಸಿಕ್ಕಿದ್ದು, ನಗರ ಪೊಲೀಸ್ ಆಯುಕ್ತರ ಕಚೇರಿವರೆಗೂ ತಲುಪಿತ್ತು. ಕೊನೆಗೆ ಕೆಲವೇ ಗಂಟೆಗಳಲ್ಲಿ ಡಾಲರ್ ಅಸಲಿಯತ್ತು ಬಯಲಾಯಿತು.

    ಪಶ್ಚಿಮ ಬಂಗಾಳ ಮೂಲದ ಎಸ್.ಕೆ. ಸೇಲ್ಮನ್ (39) ಚಿಂದಿ ಆಯುವವ. ಕೆಲ ವರ್ಷಗಳ ಹಿಂದೆ ನೌಕರಿ ಅರಸಿ ನಗರಕ್ಕೆ ಬಂದಿದ್ದ ಈತ, ನಂತರ ಹೆಬ್ಬಾಳ, ನಾಗವಾರ ಸುತ್ತಮುತ್ತ ಚಿಂದಿ ಆರಿಸಿ ಜೀವನ ಸಾಗಿಸುತ್ತಿದ್ದಾನೆ. ಶುಕ್ರವಾರ ವೀರಣ್ಣಪಾಳ್ಯ ರೈಲ್ವೆ ಗೇಟ್ ಬಳಿ ಚಿಂದಿ ಆಯುವಾಗ ಕಪ್ಪು ಬಣ್ಣದ ಚೀಲ ಪತ್ತೆಯಾಗಿತ್ತು. ಕುತೂಹಲದಲ್ಲಿ ತೆಗೆದು ನೋಡಿದಾಗ ಯುಎಸ್ ಡಾಲರ್ ಪತ್ತೆಯಾಗಿತ್ತು. ಆದರೆ ಅದು ನಕಲಿಯೋ ಅಸಲಿಯೋ ಎಂಬುದು ಗೊತ್ತಾಗದೆ, ಏನು ಮಾಡಬೇಕೆಂದು ತೋಚದೆ, ಕೊನೆಗೆ ಪರಿಚಯಸ್ಥ ಗುಜರಿ ವ್ಯಾಪಾರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದ. ಹೊರ ಜಿಲ್ಲೆಗೆ ಹೋಗಿದ್ದ ಗುಜರಿ ವ್ಯಾಪಾರಿ, ತಾನು ಬರುವವರೆಗೂ ನಿನ್ನ ಮನೆಯಲ್ಲಿಯೇ ಇಟ್ಟುಕೊಂಡಿರುವಂತೆ ಸಲಹೆ ನೀಡಿದ್ದ. ಅದರಂತೆ ಸೇಲ್ಮನ್, ಅಮೃತಹಳ್ಳಿಯ ಸಣ್ಣ ಮನೆಯಲ್ಲಿ ಇಟ್ಟುಕೊಂಡಿದ್ದ.

    ಗುಜರಿ ವ್ಯಾಪಾರಿ ಬಂದು ಪರಿಶೀಲಿಸಿದಾಗ ಆತನಿಗೂ ಹಕೀಕತ್ತು ಗೊತ್ತಾಗಲಿಲ್ಲ. ಇದೊಂದು ವಿದೇಶಿ ಕರೆನ್ಸಿ. ಇಷ್ಟೊಂದು ದೊಡ್ಡ ಮೊತ್ತದ ಹಣ ಇಟ್ಟುಕೊಳ್ಳುವುದು ಸರಿಯಲ್ಲ ಎಂದು ಸ್ವರಾಜ್ ಇಂಡಿಯಾ ಸಂಘಟನೆಯ ಸಾಮಾಜಿಕ ಕಾರ್ಯಕರ್ತ ಆರ್. ಕಲೀಂ ಉಲ್ಲಾಗೆ ಮಾಹಿತಿ ನೀಡಿದ್ದ. ತಕ್ಷಣ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರನ್ನು ಕಲೀಂ ಭೇಟಿ ಮಾಡಿ ಮಾಹಿತಿ ನೀಡಿದ್ದರು. ಚಿಂದಿ ಆಯುವ ಸೇಲ್ಮನ್​ನನ್ನು ಕರೆಸಿ ವಿಚಾರಿಸಿದ್ದರು.

    ನೋಟುಗಳ ನೈಜತೆ ಬಗ್ಗೆ ಪರಿಶೀಲಿಸಿ ತನಿಖೆ ನಡೆಸಲು ಹೆಬ್ಬಾಳ ಠಾಣೆ ಪೊಲೀಸರಿಗೆ ಆಯುಕ್ತರು ಸೂಚಿಸಿದ್ದರು. ಕೊನೆಗೆ ಪೊಲೀಸರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದಾಗ ಅದು ಕಲರ್ ಜೆರಾಕ್ಸ್ ಎಂಬುದು ದೃಢವಾಗಿದೆ. ರೈಲು ಪ್ರಯಾಣಿಕರು ಎಸೆದುಹೋಗಿರುವ ಸಾಧ್ಯತೆ ಇರುವುದಾಗಿ ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಲಷ್ಕರ್ ಇ ತೈಬಾದ ಮಾಜಿ ಮುಖ್ಯಸ್ಥ ಅಕ್ರಂ ಖಾನ್​ ಅಪರಿಚಿತರ ಗುಂಡಿಗೆ ಬಲಿ!

    ಕಣ್ಣಿಗೊಂದು ಸವಾಲ್​: ಸಾಧ್ಯವಾದ್ರೆ ಈ ಫೋಟೋದಲ್ಲಿರುವ ನಾಯಿಯನ್ನು ಪತ್ತೆಹಚ್ಚಿ! ಶೇ. 90 ಮಂದಿ ಕೈಯಲ್ಲಿ ಆಗಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts