ಪ್ರೇಕ್ಷಕರ ಕ್ಷಮೆ ಕೇಳಿದ ನಿರ್ದೇಶಕ ರಘುರಾಮ್!

blank

ಶಿವರಾಜಕುಮಾರ್ ಅಭಿನಯದ ‘ಚೆಲುವೆಯೇ ನಿನ್ನ ನೋಡಲು’, ಗುರುನಂದನ್ ಅಭಿನಯದ ‘ಮಿಸ್ಸಿಂಗ್ ಬಾಯ್’ ಚಿತ್ರಗಳ ನಿರ್ದೇಶಕ ರಘುರಾಮ್, ಪ್ರೇಕ್ಷಕರಲ್ಲಿ ಕ್ಷಮೆ ಕೋರಿದ್ದಾರೆ. ಅದಕ್ಕೆ ಕಾರಣವೇನು ಗೊತ್ತಾ? ಅವರದೇ ನಿರ್ದೇಶನದ ‘ನಮಗಾಗಿ’ ಚಿತ್ರ.

ಇದನ್ನೂ ಓದಿ: ಪುಟ್ಟಣ್ಣರಿಂದ ಜೀವನದ ಪಾಠ ಕಲಿತೆವು: ಗುರುವನ್ನು ನೆನಪಿಸಿಕೊಂಡ ಹಿರಿಯ ನಟ ಶ್ರೀನಾಥ್

ವಿಜಯ್ ರಾಘವೇಂದ್ರ ಮತ್ತು ರಾಧಿಕಾ ಕುಮಾರಸ್ವಾಮಿ ಅಭಿನಯದಲ್ಲಿ ‘ನಮಗಾಗಿ’ ಎಂಬ ಚಿತ್ರವನ್ನು ಆರು ವರ್ಷಗಳ ಹಿಂದೆ ಪ್ರಾರಂಭಿಸಿದ್ದರು ರಘುರಾಮ್. ಒಂದಿಷ್ಟು ಚಿತ್ರೀಕರಣ ಸಹ ಬೆಂಗಳೂರು ಹಾಗೂ ಮೈಸೂರಿನಲ್ಲಿ ಮುಕ್ತಾಯವಾಗಿತ್ತು. ಇದೇ ಚಿತ್ರದ ಪತ್ರಿಕಾಗೋಷ್ಠಿಯೊಂದರಲ್ಲಿ ರಾಧಿಕಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆದರೆ, ಕಾರಣಾಂತರಗಳಿಂದ ಚಿತ್ರ ನಿಂತು ಹೋಯಿತು.

ಇನ್ನು ಚಿತ್ರ ಪ್ರಾರಂಭವಾಗುವುದೇ ಇಲ್ಲ ಎನ್ನುವಾಗ, ಕಳೆದ ವರ್ಷ ಚಿತ್ರ ನಿರ್ಮಾಣವನ್ನು ಪುನಃ ಪ್ರಾರಂಭಿಸುವ ಸುದ್ದಿ ಇತ್ತು. ರಾಧಿಕಾ ಕುಮಾರಸ್ವಾಮಿ ಅವರು ಈ ಚಿತ್ರದ ನಿರ್ಮಾಣವನ್ನು ವಹಿಸಿಕೊಂಡು, ಅದನ್ನು ಮುಂದುವರೆಸುವ ಬಗ್ಗೆ ಸುದ್ದಿ ಕೇಳಿ ಬಂದಿತ್ತು. ಆದರೆ, ಕೆಲವು ತಿಂಗಳುಗಳ ಹಿಂದೆ ಚಿತ್ರ ಮುಂದುವರೆಯುತ್ತಿಲ್ಲ, ಅದು ಮುಗಿದ ಕಥೆ ಎಂದು ರಘುರಾಮ್ ಅವರೇ ‘ವಿಜಯವಾಣಿ’ಯೊಂದಿಗೆ ಹೇಳಿಕೊಂಡಿದ್ದರು.

ಇದನ್ನೂ ಓದಿ: ಕರೊನಾದಿಂದ ಬಲಿಯಾದಳು ಮಗಳು ಜಾನಕಿ : ಧಾರಾವಾಹಿ ಅಪೂರ್ಣ ವಾಗಿಯೇ ಮುಗಿಯಲಿದೆ

ಇದೀಗ ಅದೇ ಚಿತ್ರದ ವಿಷಯವಾಗಿ ಅವರು ಇಂದು ಟ್ವೀಟ್ ಮಾಡಿದ್ದಾರೆ. ಚಿತ್ರ ಪ್ರಾರಂಭವಾಗಿ ಇಂದಿಗೆ ಆರು ವರ್ಷಗಳಾಗಿದ್ದು, ಚಿತ್ರವನ್ನು ಇದುವರೆಗೂ ಪ್ರೇಕ್ಷಕರಿಗೆ ತೋರಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ವಿಷಯವಾಗಿ ಪ್ರೇಕ್ಷಕರ ಕ್ಷಮೆ ಕೇಳಿರುವ ಅವರು, ಚಿತ್ರದ ಒಂದು ಹಾಡಿನ ತುಣುಕು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಬರೆದಿರುವ ಅವರು, ‘ಇವತ್ತಿಗೆ ಆರು ವರ್ಷಗಳಾದವು ನನ್ನ ಕನಸು ಪ್ರಾರಂಭವಾಗಿ. ನಾವು ಅಂದುಕೊಳ್ಳುವುದೇ ಒಂದು, ದೇವರು ನಡೆಸೋದು ಇನ್ನೊಂದು. ‘ನಮಗಾಗಿ’ ಎನ್ನುವ ನನ್ನ ಕನಸು ನಿಮಗೆ ತೋರಿಸೋಕೆ ಆಗಿಲ್ಲ. ಕ್ಷಮೆಯಿರಲಿ. ಆದರೆ, ಆ ಚಿತ್ರದ ಒಂದು ಚಿಕ್ಕ ಹಾಡಿನ ತುಣುಕು ನಿಮಗಾಗಿ …’ ಎಂದು ಅವರು ಟ್ವೀಟ್ ಮಾಡಿದ್ದಾರೆ.

PHOTO GALLERY| ಪಾರುಲ್​ಗೆ ಬರ್ತಡೇ ಖುಷಿ​: ಬಚ್ಚನ್​ ಬ್ಯೂಟಿಯ ಹಾಟ್​ ಫೋಟೋ ನೋಡಿದ್ರೆ ಪ್ಯಾರ್​ಗೆ ಆಗ್ಬಿಡುತ್ತೆ!

Share This Article

ಜ್ಯೋತಿಷ್ಯದ ಪ್ರಕಾರ ಅಂಗೈ ತುರಿಕೆ ಏನನ್ನು ಸೂಚಿಸುತ್ತೆ ಗೊತ್ತಾ..? ಶುಭವೋ..ಅಶುಭವೋ devotional

devotional: ಕಣ್ಣು ಮಿಟುಕಿಸುವುದು, ತುಟಿಗಳು ನಡುಗುವುದು ಮತ್ತು ಕಣ್ಣು ರೆಪ್ಪೆಗಳು ಮಿಟುಕಿಸುವುದು ಮುಂತಾದ ಶಕುನಗಳನ್ನು ಅನುಸರಿಸುತ್ತಾರೆ.…

ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ? ಈ ಸಿಂಪಲ್​ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಪುರುಷರಿಗಿಂತ ಮಹಿಳೆಯರ ಮೇಲೆಯೇ ಮದ್ಯಪಾನದ ಎಫೆಕ್ಟ್​ ಜಾಸ್ತಿ! ಅಚ್ಚರಿಯ ಕಾರಣ ಹೀಗಿದೆ… Alcohol

Alcohol : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರೂ ಸಹ…