More

    ಪರಿವರ್ತನೆ ಸಾಹಿತ್ಯಕ್ಕೂ ಅನ್ವಯ: ‘ಎಲ್ಲವೂ ಬದಲಾಗುತ್ತದೆ’ ಕೃತಿ ಬಿಡುಗಡೆಗೊಳಿಸಿ ಪುತ್ತೂರು ಉಮೇಶ್ ನಾಯಕ್ ಅಭಿಮತ

    ಮಂಗಳೂರು: ಪರಿವರ್ತನೆ ಜಗದ ನಿಯಮ ಎಂಬಂತೆ ಕಾವ್ಯ ಹಾಗೂ ಸಾಹಿತ್ಯವೂ ಕಾಲಕಾಲಕ್ಕೆ ಮಾರ್ಪಾಡು ಹೊಂದಿ ಪ್ರಸ್ತುತ ವಿಶೇಷ ಪ್ರಕಾರಗಳನ್ನು ಹೊಂದುತ್ತಿದೆ. ಅದೇ ರೀತಿ ‘ಎಲ್ಲವೂ ಬದಲಾಗುತ್ತದೆ’ ಎನ್ನುವ ಕವನ ಸಂಕಲನ ಶ್ರೇಷ್ಠ ಮತ್ತು ವಿಭಿನ್ನ ರೀತಿಯಲ್ಲಿ ಮೂಡಿ ಬಂದಿದೆ ಎಂದು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಹೇಳಿದರು.

    ವಿದ್ಯಾ ಪ್ರಕಾಶನ ಮಂಗಳೂರು ಪ್ರಕಟಿಸಿದ ಸಾಹಿತಿ ರಘು ಇಡ್ಕಿದು ಅವರ 29ನೇ ಕೃತಿ ‘ಎಲ್ಲವೂ ಬದಲಾಗುತ್ತದೆ-ಕವನಗಳಲ್ಲದ ಕವನಗಳು’ ಕೃತಿಯನ್ನು ಗುರುವಾರ ಪತ್ರಿಕಾಭವನದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.

    ಕವನ ಸಂಕಲನ ವಿಭಿನ್ನ ರೀತಿಯಲ್ಲಿ ಮೂಡಿಬಂದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕೃತಿಗಳು ಲೋಕಾರ್ಪಣೆಯಾಗಲಿ ಎಂದು ಶುಭ ಹಾರೈಸಿದರು.
    ಸುರತ್ಕಲ್ ಗೋವಿಂದದಾಸ ಕಾಲೇಜು ಪ್ರಾಂಶುಪಾಲ ಪ್ರೊ.ಪಿ.ಕೃಷ್ಣಮೂರ್ತಿ ಮಾತನಾಡಿ, ರಘು ಇಡ್ಕಿದು ಅವರು ಉಪನ್ಯಾಸಕ, ಅಂಕಣಕಾರರಾಗಿ ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಂಡು ಬರೆಯುವ ಪ್ರಯೋಗಶೀಲರು. ಕನ್ನಡ ಮತ್ತು ತುಳು ಸಾಹಿತ್ಯ ಲೋಕಕ್ಕೆ ಅವರ ಕಾರ್ಯ ಶ್ಲಾಘನೀಯ ಎಂದರು.

    ಅಧ್ಯಕ್ಷತೆ ವಹಿಸಿದ್ದ ಚುಟುಕು ಸಾಹಿತ್ಯ ಪರಿಷತ್ ದ.ಕ. ಜಿಲ್ಲಾ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಮಾತನಾಡಿ, ಚುಟುಕು ಸಾಹಿತ್ಯ ಬರೆಯುವುದು ಅಷ್ಟು ಸುಲಭವಲ್ಲ. ‘ಎಲ್ಲವೂ ಬದಲಾಗುತ್ತದೆ’ ಕೃತಿ ಅಪ್ಯಾಯಮಾನವಾಗಿ ಮೂಡಿಬಂದಿದೆ ಎಂದರು.

    ಚುಟುಕು ಸಾಹಿತ್ಯ ಪರಿಷತ್ ದ.ಕ. ಜಿಲ್ಲಾ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು, ಉಡುಪಿ ಜಿಲ್ಲಾ ಅಧ್ಯಕ್ಷ ಕಾ.ವೀ.ಕೃಷ್ಣದಾಸ್, ಮಂಗಳೂರು ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ಶಾಸಿ, ಪ್ರಕಾಶಕಿ ವಿದ್ಯಾ ಯು. ಉಪಸ್ಥಿತರಿದ್ದರು. ಕೃತಿ ರಚನೆಕಾರ, ಸಾಹಿತಿ ರಘು ಇಡ್ಕಿದು ಸ್ವಾಗತಿಸಿದರು. ಎನ್.ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts