More

    ಹಬ್ಬದ ದಿನ ಹಾಡು ನುಡಿಸಿದ್ದಕ್ಕೆ ಮಹಿಳೆಯರು ನಡೆಸುತ್ತಿದ್ದ ರೇಡಿಯೋ ಸ್ಟೇಷನ್​ ಬಂದ್​ ಮಾಡಿಸಿದ್ರು!

    ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ ಪ್ರತಿನಿಧಿಗಳು ರೇಡಿಯೋ ಸ್ಟೇಷನ್​ ಬಂದು ಅದನ್ನು ಸ್ಥಗಿತಗೊಳಿಸಿದ್ದಾರೆ ಎಂದು ರೇಡಿಯೊ ಕೇಂದ್ರ ನಡೆಸುವ ಮಹಿಳೆಯರು ಹೇಳಿಕೊಂಡಿದ್ದಾರೆ.

    ಅಫ್ಘಾನಿಸ್ತಾನದಲ್ಲಿ ಮಹಿಳೆಯರು ನಡೆಸುತ್ತಿದ್ದ ರೇಡಿಯೊ ಸ್ಟೇಷನ್ ಅನ್ನು ಪವಿತ್ರ ರಂಜಾನ್ ತಿಂಗಳಲ್ಲಿ ಸಂಗೀತ ನುಡಿಸಿದ್ದಕ್ಕಾಗಿ ಮುಚ್ಚಲಾಗಿದೆ ಎಂದು ತಾಲಿಬಾನ್ ಅಧಿಕಾರಿಯೊಬ್ಬ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಮಹಿಳೆಯರೇ ನಡೆಸುವ ಈ ರೇಡಿಯೋ ಸ್ಟೇಷನ್​ ಹೆಸರು ಸದೈ ಬನೋವನ್ ಎಂದು ಹೆಸರು. ಅಂದರೆ ಮಹಿಳೆಯರ ಧ್ವನಿ ಎಂದರ್ಥ ಬರುತ್ತದೆ. ರೇಡಿಯೋ ಸ್ಟೇಷನ್ 10 ವರ್ಷಗಳ ಹಿಂದೆ ಪ್ರಾರಂಭವಾಗಿದ್ದು ಎಂಟು ಜನರ ಸಿಬ್ಬಂದಿಯನ್ನು ಹೊಂದಿದೆ. ಅವರಲ್ಲಿ ಆರು ಮಹಿಳೆಯರು ಅಲ್ಲಿ ನಿತ್ಯವೂ ಕೆಲಸ ಮಾಡುತ್ತಿದ್ದರು.

    ಇದನ್ನೂ ಓದಿ: ಅಫ್ಘಾನಿಸ್ತಾನ ಭೂಕಂಪನ ಎಫೆಕ್ಟ್​! ಉತ್ತರ ಭಾರತದಲ್ಲಿ 2 ನಿಮಿಷ ನಡುಗಿದ ಭೂಮಿ, ಜನರಲ್ಲಿ ಆತಂಕ

    ರಂಜಾನ್ ಸಮಯದಲ್ಲಿ ಹಾಡುಗಳನ್ನು ಪ್ರಸಾರ ಮಾಡುವ ಮೂಲಕ ರೇಡಿಯೊ ಸ್ಟೇಷನ್ “ಅಫ್ಘಾನಿಸ್ತಾನ್ ಇಸ್ಲಾಮಿಕ್ ಎಮಿರೇಟ್‌ನ ಕಾನೂನುಗಳು ಮತ್ತು ನಿಬಂಧನೆಗಳನ್ನು” ಹಲವಾರು ಬಾರಿ ಉಲ್ಲಂಘಿಸಿದೆ ಎಂದು ಬಡಾಖಾನ್ ಪ್ರಾಂತ್ಯದ ಮಾಹಿತಿ ಮತ್ತು ಸಂಸ್ಕೃತಿಯ ನಿರ್ದೇಶಕ ಮೊಯೆಜುದ್ದೀನ್ ಅಹ್ಮದಿ ಹೇಳಿದ್ದಾರೆ ಎಂದು ವರದಿಯಾಗಿದೆ.

    “ಈ ರೇಡಿಯೋ ಸ್ಟೇಷನ್ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ನೀತಿಯನ್ನು ಒಪ್ಪಿಕೊಂಡರೆ ಮತ್ತು ಅಂತಹದನ್ನು ಮತ್ತೆ ಪುನರಾವರ್ತಿಸುವುದಿಲ್ಲ ಎಂಬ ಭರವಸೆಯನ್ನು ನೀಡಿದರೆ, ನಾವು ಅದನ್ನು ಮತ್ತೆ ಕಾರ್ಯನಿರ್ವಹಿಸಲು ಅನುಮತಿಸುತ್ತೇವೆ” ಎಂದು ಮೊಯೆಜುದ್ದೀನ್ ಅಹ್ಮದಿ ಹೇಳಿದರು.

    ಇದನ್ನೂ ಓದಿ: ಪಾಕ್​ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು: ಅಫ್ಘಾನಿಸ್ತಾನದಲ್ಲಿ ಸಂಭ್ರಮಾಚರಣೆ, ವಿಡಿಯೋ ವೈರಲ್​

    ಏತನ್ಮಧ್ಯೆ, ರೇಡಿಯೊ ಸ್ಟೇಷನ್ ಮುಖ್ಯಸ್ಥ ನಜಿಯಾ ಸೊರೊಶ್ ಅವರು ಮುಚ್ಚುವ ಅಗತ್ಯವಿಲ್ಲ ಎಂದು ಆರೋಪಗಳನ್ನು ನಿರಾಕರಿಸಿದರು. ಇದನ್ನು “ಪಿತೂರಿ” ಎಂದು ಕರೆದರು. ತಾಲಿಬಾನ್ “ನೀವು ಸಂಗೀತವನ್ನು ಪ್ರಸಾರ ಮಾಡಿದ್ದೀರಿ ಎಂದು ನಮಗೆ ಹೇಳಿದರು. ನಾವು ಯಾವುದೇ ರೀತಿಯ ಸಂಗೀತವನ್ನು ಪ್ರಸಾರ ಮಾಡಿಲ್ಲ” ಎಂದು ಅವರು ಹೇಳಿದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts