More

    ಯಾರೋ ಬಂದಿದ್ದಾರೆ ನೋಡು ರಚ್ಚು: ತಾಯಿ ಮಾತು ಕೇಳಿ ಮನೆ ಬಾಗಿಲು ತೆರೆದ ರಚಿತಾಗೆ ಕಾದಿತ್ತು ಸರ್ಪ್ರೈಸ್!

    ಬೆಂಗಳೂರು: ಅಭಿಮಾನಿಯೊಬ್ಬನ ಸರ್ಪ್ರೈಸ್​ ಭೇಟಿಯಿಂದ ಖುಷಿಯಾಗಿರುವ ಡಿಂಪಲ್​ ಕ್ವೀನ್​ ರಚಿತಾ ರಾಮ್​ ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ನಡೆದ ಘಟನೆಯ ಬಗ್ಗೆ ತುಂಬಾ ಭಾವುಕರಾಗಿ ಬರೆದುಕೊಂಡಿದ್ದಾರೆ.

    ರಚಿತಾ ಬರೆದ ಫೇಸ್​ಬುಕ್​ ಸಂದೇಶ ಕೆಳಕಂಡಂತಿದೆ…
    “ಅಭಿಮಾನಿಗಳೇ ದೇವ್ರು” ಎಂದ ಅಣ್ಣಾವ್ರ ಮಾತು ಅಕ್ಷರಶಃ ಸತ್ಯ. ಪ್ರತಿದಿನ ಎಷ್ಟೋ ಅಭಿಮಾನಿಗಳು ಸೋಶಿಯಲ್ ಮೀಡಿಯಾದ ಮುಖಾಂತರ ಅಭಿಮಾನವನ್ನು ವ್ಯಕ್ತ ಪಡಿಸುತ್ತಾರೆ. ಅದನ್ನು ನೋಡಿ ತುಂಬಾ ಸಂತೋಷ ಆಗುತ್ತದೆ. ಆದರೆ, ಇಂದು ಬೆಳಗ್ಗೆ ಅಮ್ಮ ಬಂದು “ರಚ್ಚು ಬೆಳಿಗ್ಬೆಳಿಗ್ಗೆನೇ ಯಾರೋ ಮನೆ ಮುಂದೆ ಕಾಯ್ತಿದಾರೆ ನೋಡು ಅಂದ್ರು”, ನಾನು ಹೊರಗಡೆ ಬಂದು ನೋಡ್ದೇ ಒಂದು ಆಟೋ ಪಕ್ಕ ಮೂರು ಜನ ನಮ್ಮ ಮನೆ ಕಡೆ ಮುಖ ಮಾಡಿ ನಿಂತಿದ್ರು. ನನ್ನ ನೋಡ್ತಿದ್ದ ಹಾಗೆ ತುಂಬಾ ಎಕ್ಸೈಟ್ ಆದ್ರು, ಅವರ ಬಳಿ ಹೋಗ್ತಿದ್ದ ಹಾಗೇ ನನ್ನ ಒಂದು ಮಾತು ಆಡಕ್ಕೂ ಬಿಡದೆ “ಮೇಡಂ ನಾವು ನಿಮ್ಮ ದೊಡ್ಡ ಅಭಿಮಾನಿ ಮೇಡಂ ನನ್ನ ಆಟೋ ಮೇಲೆ ಮೊದಲ ಫೋಟೋ ನಿಮ್ದೇ ಇರ್ಬೇಕು ಮೇಡಂ” ಎಂದು ಗಿಫ್ಟ್ ರ್ಯಾಪರ್​ ಒಪನ್ ಮಾಡ್ಸಿ, ನನ್ನ ಫೋಟೋನ ಆಟೋ ಮೇಲೆ ಅಂಟಿಸಿ, ನನ್ನ ಆಟೋಗ್ರಾಫ್ ತೆಗೆದುಕೊಂಡು, ಅವರ ನೆಚ್ಚಿನ ಆಟೋ ಜೊತೆ ನನ್ನ ಫೋಟೋ ಕ್ಲಿಕ್ಕಿಸಿ ತಾವೂ ಸೆಲ್ಫಿ ತೆಗೆದುಕೊಂಡು ಹೊರಡಲು ಮುಂದಾದರು.

    ಇದನ್ನೂ ಓದಿ: ಮನೆಗೆ ಬರುತ್ತೇ ಫೈವ್ ಸ್ಟಾರ್​ ಹೋಟೆಲ್​ ಊಟ; ಬಟ್ಟೆನೂ ತೊಳೆದು ಕೊಡ್ತಾರೆ…!

    ನಾನು ನಿಜಕ್ಕೂ ಭಾವುಕಳಾದೆ. ಹೆಸರು ಕೇಳಬೇಕು ಎನ್ನುವಷ್ಟರಲ್ಲಿ ತುಂಬಾ ಉತ್ಸಾಹಿಕನಾಗಿ ನಗುತ್ತಲೇ ಹೊರಟೇ ಬಿಟ್ಟರು. ತಮ್ಮ ಹೆಸರು, ಊರು ಯಾವುದೂ ಹೇಳದೆ ಕೇವಲ ತಮ್ಮ ಕಾರ್ಯ ವೈಖರಿ, ನನ್ನ ಮೇಲಿನ ಅಭಿಮಾನವನ್ನ ವ್ಯಕ್ತಪಡಿಸಿದ ಅಭಿಮಾನಿಗಳಿಗೆ ಸದಾ ಚಿರಋಣಿ. ನಿಮ್ಮ ಪ್ರೀತಿಯ ಆಟೋ ನಿಮ್ಮ ಜೀವನದ ಪಯಣವನ್ನು ಸುಖಕರವಾಗಿರಿಸಲಿ ಎಂದು ದೇವರಲ್ಲಿ ಬೇಡ್ಕೋತೀನಿ.

    ನನ್ನ ಕಲಾಬದುಕಿಗೆ ಜೀವ ಕೊಟ್ಟವರು ಅಭಿಮಾನಿಗಳು. ಅಭಿಮಾನಿಗಳ ಹೃದಯ ಶ್ರೀಮಂತಿಕೆಯ ಮುಂದೆ ಬೇರೆಲ್ಲ ಶೂನ್ಯ. ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ. ಭಾವುಕಳಾದ ಕ್ಷಣದಲ್ಲಿ ಅವರ ಹೆಸರು ವಿವರ ತೆಗೆದುಕೊಳ್ಳಲಾಗಲಿಲ್ಲ. ದಯವಿಟ್ಟು ಈ ಪೋಸ್ಟ್ ನೋಡಿದ ಕೂಡಲೇ ನೀವು ಈ ಫೋಟೋವನ್ನ ನಿಮ್ಮ ಇನ್​ಸ್ಟಾಗ್ರಾಂನಲ್ಲಿ ಹಾಕಿ ನನ್ನನ್ನು ಟ್ಯಾಗ್​ ಮಾಡಿ. ನಾನು ರೀಪೋಸ್ಟ್​ ಮಾಡುತ್ತೆನೆ ಜೊತೆಗೆ ನಿಮ್ಮ ಹೆಸರು ತಿಳಿದುಕೊಳ್ಳಬೇಕೆಂಬ ಆಸಕ್ತಿ ನನಗಿದೆ ಎಂದು ರಚಿತಾ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

    "ಅಭಿಮಾನಿಗಳೇ ದೇವ್ರು" ಎಂದ ಅಣ್ಣಾವ್ರ ಮಾತು ಅಕ್ಷರಶಃ ಸತ್ಯ, ಪ್ರತಿದಿನ ಎಷ್ಟೋ ಅಭಿಮಾನಿಗಳು ಸೋಷಿಯಲ್ ಮೀಡಿಯಾದ ಮುಖಾಂತರ ಅಭಿಮಾನವನ್ನ…

    Posted by Rachita Ram on Thursday, July 2, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts