More

    ರಬಕವಿ-ಬನಹಟ್ಟಿ ತಾಲೂಕು ಮಟ್ಟದ ಕ್ರೀಡಾಕೂಟ

    ರಬಕವಿ/ಬನಹಟ್ಟಿ: ಪ್ರಸಕ್ತ ಸಾಲಿನ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಯಲ್ಲಟ್ಟಿಯ ಕೊಣ್ಣೂರ ವಿಜ್ಞಾನ ಪ.ಪೂ. ಮಹಾವಿದ್ಯಾಲಯದ ವಿದ್ಯಾರ್ಥಿಗಳು ವೈಯಕ್ತಿಕ ಹಾಗೂ ಗುಂಪು ವಿಭಾಗದಲ್ಲಿ ಉತ್ತಮ ಸಾಧನೆ ತೋರುವ ಮೂಲಕ ಸಮಗ್ರ ವೀರಾಗ್ರಣಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

    ಬಾಲಕಿಯರ ವೈಯಕ್ತಿಕ ವಿಭಾಗದ 100 ಮೀ. ಓಟದಲ್ಲಿ ದೀಪಾ ಪೂಜಾರಿ ಪ್ರಥಮ, 400ಮೀ.ಓಟದಲ್ಲಿ ನಿಖಿತಾ ಮೋಳೆ ದ್ವಿತೀಯ, 100ಮೀ.ಹರ್ಡಲ್ಸ್‌ನಲ್ಲಿ ನಿಖಿತಾ ಮೋಳೆ ಪ್ರಥಮ ಮತ್ತು ಮಹಾಲಕ್ಷ್ಮಿ ಹಸರೆಡ್ಡಿ ದ್ವಿತೀಯ, ಚೆಸ್‌ನಲ್ಲಿ ಜ್ಯೋತಿ ವಗ್ಗ ಮತ್ತು ಮಹಾಲಕ್ಷಿ ಪ್ರಥಮ ಸ್ಥಾನ, ಯೋಗ ಸ್ಪರ್ಧೆಯಲ್ಲಿ ಸೃಷ್ಠಿ ಮಾವಿನಮರದ ಮತ್ತು ರಕ್ಷಿತಾ ದುಂಡರಗಿ ಪ್ರಥಮ ಸ್ಥಾನ ಪಡೆದಿದ್ದಾರೆ.

    ಬಾಲಕರ ವೈಯಕ್ತಿಕ ವಿಭಾಗದಲ್ಲಿ ಗುಂಡು ಎಸೆತ ಸ್ಪರ್ಧೆಯಲ್ಲಿ ಗಂಗಾಧರ ಕಡೆನವರ ಪ್ರಥಮ, ಚೆಸ್‌ನಲ್ಲಿ ಬ್ರಹ್ಮ ಲಾಳಿ, ವರ್ಧಮಾನ್ ಶೆಟ್ಟಿ ಮತ್ತು ಮುತ್ತುರಾಜ್ ನೀಲನ್ನವರ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ಬಾಲಕಿಯರ ಗುಂಪು ಆಟಗಳಲ್ಲಿ ಕಬಡ್ಡಿ, ವಾಲಿಬಾಲ್ ಮತ್ತು ಷಟಲ್ ಬ್ಯಾಡ್ಮಿಂಟನ್‌ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಬಾಲಕರ ಗುಂಪು ಆಟಗಳಲ್ಲಿ ಕಬಡ್ಡಿ, ಹ್ಯಾಂಡ್‌ಬಾಲ್, ಷಟಲ್ ಬ್ಯಾಡ್ಮಿಂಟನ್ ಹಾಗೂ 400ಮೀ.ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಾಲಿಬಾಲ್, ುಟ್‌ಬಾಲ್ ಹಾಗೂ 100ಮೀ. ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

    ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಸಾಧನೆಗೆ ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕರಾದ ಎಂ.ಬಿ.ಮಗದುಮ್, ಎಂ.ಎಸ್.ಪೂಜಾರಿ, ಸಂಜು ಗೋಠೆ ಮಾರ್ಗದರ್ಶನಕ್ಕೆ ಪ್ರಾಚಾರ್ಯ ಪ್ರೊ. ಬಸವರಾಜ ಕೊಣ್ಣೂರ, ಸಂಸ್ಥೆ ಉಪಾಧ್ಯಕ್ಷರಾದ ನಿಖಿಲ ಕೊಣ್ಣೂರ, ಆಡಳಿತಾಧಿಕಾರಿ ಶೀತಲ್ ಕೊಣ್ಣೂರ, ಉಪಪ್ರಾಚಾರ್ಯ ಪ್ರೊ. ಶಿವಾನಂದ ಕಂದಗಲ್ ಹಾಗೂ ಉಪನ್ಯಾಸಕರು ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts