More

    25 ವರ್ಷಗಳ ನಂತರ ಒಂದಾದ ದಂಪತಿ

    ರಬಕವಿ/ಬನಹಟ್ಟಿ: ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಕೆಲ ಕಾರಣಗಳಿಂದ ದೂರವಾಗಿದ್ದ ಪ್ರತ್ಯೇಕ ಎರಡು ಕುಟುಂಬಗಳ ದಂಪತಿಯನ್ನು ಬೃಹತ್ ಇ-ಲೋಕ ಅದಾಲತ್‌ನಲ್ಲಿ ಕೋರ್ಟ್ ಜೊತೆಯಾಗಿಸಿದೆ.

    25 ವರ್ಷ ಕಳೆದ ದಾರಿಯನ್ನು ದಂಪತಿ ಒಂದಿಷ್ಟು ಮೆಲುಕು ಹಾಕಿ ತಿರುಗಿ ನೋಡಿದರೆ, ಅಯ್ಯೋ ನಮ್ಮ ಜೀವನದಲ್ಲಿ ಅತ್ಯಮೂಲ್ಯವಾದ ಸಮಯವನ್ನು ವಿನಾಕಾರಣ ಹಾಳು ಮಾಡಿದೆವಲ್ಲ ಎಂಬುದನ್ನು ಕೋರ್ಟ್ ಈ ದಂಪತಿಗೆ ಅರಿವು ಮೂಡಿಸಿದಂತಾಗಿದೆ.

    ಬನಹಟ್ಟಿಯ ದಿವಾಣಿ ನ್ಯಾಯಾಲಯದಲ್ಲಿ 20 ವರ್ಷಗಳಿಂದ ರಂಗಪ್ಪ ಅಮ್ಮಲಜೇರಿ ಹಾಗೂ ಅವರ ಪತ್ನಿ ಸುಮಿತ್ರಾ ಆಸ್ತಿ, ವಿಚ್ಛೇದನೆ ಸೇರಿದಂತೆ ಇತರ ದಾವೆಗಳಿಂದ ಹೋರಾಟ ನಡೆಸುತ್ತಲೇ ಇದ್ದರು. ಸ್ಥಳೀಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶ ಮಹೇಶ ಚಂದ್ರಕಾಂತ ನೇತೃತ್ವದಲ್ಲಿ ಕಳೆದೊಂದು ತಿಂಗಳಿಂದ ನಡೆದ ಬೃಹತ್ ಇ-ಲೋಕ ಅದಾಲತ್‌ನಲ್ಲಿ ಶುಕ್ರವಾರ ಇಂತಹ ಅಪರೂಪದ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಪತಿ-ಪತ್ನಿ ಒಂದಾಗಿಸುವ ಮೂಲಕ ಇಡೀ ಕುಟುಂಬವನ್ನು ಸಂತಸಪಡಿಸುವಲ್ಲಿ ನ್ಯಾಯಾಧಿಶರು ಯಶಸ್ವಿಯಾದರು.

    ಮತ್ತೊಂದು ಪ್ರಕರಣದಲ್ಲಿ ಕಳೆದ 25 ವರ್ಷಗಳಿಂದ ಕಾಡಪ್ಪ ಜಕ್ಕನ್ನವರ ಹಾಗೂ ಆತನ ಪತ್ನಿ ಮಹಾನಂದಾ ಜೊತೆಗೂ ಕೌಟುಂಬಿಕ ಸಮಸ್ಯೆಯಿಂದ ಪರಸ್ಪರ ದೂರವಾಗಿದ್ದರು. ಈ ಪ್ರಕರಣವನ್ನೂ ಸಹಿತ ವಿಶೇಷ ಕಾಳಜಿವಹಿಸಿ ರಾಜಿ ಸಂಧಾನ ಮಾಡುವಲ್ಲಿ ಮಹೇಶ ಚಂದ್ರಕಾಂತ ರವರು ಯಶಸ್ಸು ಕಂಡರು. ಇವೆರಡೂ ಪ್ರಕರಣದಲ್ಲಿ ನ್ಯಾಯವಾದಿಗಳಾದ ಎಸ್.ವಿ.ಗೊಳಸಂಗಿ, ಈಶ್ವರಚಂದ್ರ ಭೂತಿ, ಜಿ.ಡಿ. ಪಾಟೀಲ ವಕಲಾತ್ತು ವಹಿಸಿದ್ದರು. ಹಿರಿಯ ವಕೀಲರಾದ ಎಂ.ಜಿ. ಕೆರೂರ, ಎಸ್.ಎ. ಶೇಗುಣಸಿ, ಎ.ಜೆ. ವ್ಯಾಸ, ಹರ್ಷವರ್ಧನ ಪಟವರ್ಧನ, ಬಸವರಾಜ ಭೂತಿ, ರವಿಂದ್ರ ಸಂಪಗಾಂವಿ, ವಿ.ಡಿ. ಪತ್ತಾರ, ಬಿ.ಎನ್. ಗುರವ, ಎಸ್.ಎಸ್. ನಿಡೋಣಿ ಸೇರಿದಂತೆ ಅನೇಕ ನ್ಯಾಯವಾದಿಗಳಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts