More

    ಮಾ.1 ರಂದು ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿ

    ರಬಕವಿ/ಬನಹಟ್ಟಿ: ಬನಹಟ್ಟಿ ನಗರದ ಕಾಡಸಿದ್ಧೇಶ್ವರ ಕುಸ್ತಿ ಮೈದಾನದಲ್ಲಿ ಮಾ.1 ರಂದು ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿಗಳು ಜರುಗಲಿವೆ ಎಂದು ಕೊಣ್ಣೂರ ಸಮೂಹ ಸಂಸ್ಥೆ ಸಂಸ್ಥಾಪಕ ಪ್ರೊ.ಬಸವರಾಜ ಕೊಣ್ಣೂರ ತಿಳಿಸಿದರು.

    ಯಲ್ಲಟ್ಟಿಯ ಕೊಣ್ಣೂರ ಪಿಯು ವಿಜ್ಞಾನ ಪಪೂ ಮಹಾವಿದ್ಯಾಲಯ ಆವರಣದಲ್ಲಿ ಶುಕ್ರವಾರ ಪ್ರಚಾರ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

    ದೇಶೀಯ ಕ್ರೀಡೆಯಲ್ಲಿ ಮುಂಚೂಣಿಯಲ್ಲಿರುವ ಕುಸ್ತಿ ಯುವಕ-ಯುವತಿಯರ ಸದೃಢ ಶರೀರ ಹಾಗೂ ಆರೋಗ್ಯಯುತ ಬಾಳಿಗೆ ಸಹಕಾರಿಯಾಗಿದ್ದು, ವಿಶ್ವಮಟ್ಟದಲ್ಲಿ ಇದೀಗ ತನ್ನದೆಯಾದ ಪ್ರಾಧಾನ್ಯತೆ ಹೊಂದಿದೆ. ಹೀಗಾಗಿ ಮತ್ತಷ್ಟು ಉತ್ತೇಜನ ನೀಡುವಲ್ಲಿ ಕುಸ್ತಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

    ಖ್ಯಾತ ಕುಸ್ತಿ ಪಟುಗಳಾದ ದಿಲ್ಲಿಯ ಅಶೋಕ ಕುಮಾರ ಜತೆ ದಾವಣಗೇರಿ ಕಾರ್ತಿಕ, ಬಾಳು ಅಪರಾಧ ಜತೆ ನಾಗರಾಜ ಬಸಿಡೋಣಿ, ಹನುಮಂತ ಇಂಗಳಗಿ ಜತೆ ರವಿ ಕೆಂಪನ್ನವರ, ಜಗದಾಳ ಸಾಗರ ಜತೆ ಕೃಷ್ಣಾ ಕಕ್ಕೇರಿ, ಹನಗಂಡಿ ಗಜಪ್ಪ ಜತೆ ನಿಂಗಪ್ಪ ಆಲಗೂರ ಸೇರಿ ಸ್ಥಳೀಯ ಕುಸ್ತಿ ಪಟುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. 50 ಕ್ಕೂ ಅಧಿಕ ಕುಸ್ತಿಗಳು ಜರುಗಲಿವೆ ಎಂದು ಕೊಣ್ಣೂರ ತಿಳಿಸಿದರು.

    ಕುಸ್ತಿ ಉಸ್ತಾದ ದಾವಲಸಾಬ ಆಸಂಗಿ, ಕಾಡಪ್ಪ ಜಿಡ್ಡಿಮನಿ, ಶ್ರೀಶೈ ಗಡ್ಡಿ, ಮಲ್ಲಪ್ಪ ಕುಂಬಾರಹಳ್ಳ, ರವಿ ಬಸಗೊಂಡನವರ, ಧರೆಪ್ಪ ಪಾಟೀಲ, ಮಲ್ಲಪ್ಪ ಆಲಗೂರ, ಹಣಮಂತ ಕುಡಚಿ, ರಮೇಶ ಜಿಡ್ಡಿಮನಿ, ಕಾಡಪ್ಪ ಮಹಿಷವಾಡಗಿ, ರಾಮ ಕರಿಗಾರ, ಶ್ರೀಶೈಲ ಗಡ್ಡಿ ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts