More

    ಯುವತಿ ಕುಟುಂಬಕ್ಕೆ ನ್ಯಾಯ ಒದಗಿಸಿ

    ರಬಕವಿ/ಬನಹಟ್ಟಿ: ಉತ್ತರ ಪ್ರದೇಶದ ಹಥರಾಸ್‌ನ ಯುವತಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣವನ್ನು ಕೂಡಲೇ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮುಖಾಂತರ ತನಿಖೆ ನಡೆಸಿ ಆ ಕುಟುಂಬಕ್ಕೆ ನ್ಯಾಯ ಒದಗಿಸುವುದು ಹಾಗೂ ವಿವಿಧ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಡಿಎಸ್‌ಎಸ್ ಹಾಗೂ ಮತ್ತು ಸಮತಾದಳ ಪದಾಧಿಕಾರಿಗಳು ರಬಕವಿ-ಬನಹಟ್ಟಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

    ಡಿಎಸ್‌ಎಸ್ ಬೆಳಗಾವಿ ವಿಭಾಗದ ಸಂಚಾಲಕ ಭೀಮರಾವ ಕಾಳವ್ವಗೋಳ ಮಾತನಾಡಿ, ಭೂ ಸುಧಾರಣೆ, ಎಪಿಎಂಸಿ ತಿದ್ದ್ದುಪಡಿ ಹಾಗೂ ವಿದ್ಯುತ್ ಕಂಪನಿ ಹಾಗೂ ಸರ್ಕಾರಿ ಕಚೇರಿಗಳನ್ನು ಖಾಸಗೀಕರಣ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಇದಕ್ಕೂ ಮುಂಚೆ ನಗರದ ಪೊಲೀಸ್ ಠಾಣೆಯಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಪ್ರಶಾಂತ ಚನಗೊಂಡ ಅವರಿಗೆ ಮನವಿ ಸಲ್ಲಿಸಿದರು.

    ಶಿವನಿಂಗ ಮೇತ್ರಿ, ಸಮತಾ ಸೈನಿಕದಳದ ತಾಲೂಕು ಅಧ್ಯಕ್ಷ ರಮೇಶ ಬಸಪ್ಪಗೋಳ, ಅಶೋಕ ತಳಗಡೆ, ರಮೇಶ ಗೌಂಡಿ, ಅಶೋಕ ಮುಗಳಖೋಡ, ರವಿ ಮೇತ್ರಿ, ವಿನೋದ ಸಂಗಾನಟ್ಟಿ, ಶಟ್ಟೆಪ್ಪ ಹಲಸಪ್ಪಗೋಳ, ಮಾನಿಂಗ ರಂಜಣಗಿ, ಮಂಜು ಕಳ್ಳೊಳ್ಳೆಪ್ಪಗೋಳ, ಪುಂಡಲಿಕ ಶಿಂಧೆ, ಶಿವನಿಂಗ ಸೋನೋನೆ, ಸದಾಶಿವ ಸೋನೋನೆ ಅನೇಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts