More

    ಧಾರಾಕಾರ ಮಳೆಗೆ ಅಪಾರ ಹಾನಿ

    ರಬಕವಿ ಬನಹಟ್ಟಿ: ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ತಾಲೂಕಿನಾದ್ಯಂತ ಬೆಳೆ, ರಸ್ತೆಗಳು ಹಾಳಾಗಿವೆ.
    ಮಳೆಯಿಂದ ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟು ಗುಂಡಿಗಳು ಬಿದ್ದಿದ್ದು, ಸಂಚಾರ ದುಸ್ತರವಾಗಿದೆ. ವಾಹನ ಸವಾರರು ಸ್ವಲ್ಪ ಯಾಮಾರಿದರೂ ಜೀವಕ್ಕೆ ಅಪಾಯ ಗ್ಯಾರಂಟಿ ಎಂಬಂತಾಗಿದೆ.

    ರಬಕವಿ-ಬನಹಟ್ಟಿ ನಗರ ಹಾಗೂ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಪಟ್ಟಣದ ಎಲ್ಲ ರಸ್ತೆಗಳು ಹೊಂಡಮಯವಾಗಿದ್ದು, ಜಗದಾಳ, ನಾವಲಗಿ, ಆಸಂಗಿ, ಹನಗಂಡಿ, ಅಸ್ಕಿ, ಯಲ್ಲಟ್ಟಿ, ಹಿಪ್ಪರಗಿ, ಬಂಡಿಗಣಿ ಸೇರಿ ಅನೇಕ ಗ್ರಾಮಗಳ ರಸ್ತೆಗಳು ಒಡೆದು ಹಾಳಾಗಿವೆ. ರೈತರು ತಮ್ಮ ನೋವು ಯಾರಿಗೆ ಹೇಳೋಣ ಎಂದು ಪರಿತಪಿಸುತ್ತಿದ್ದಾರೆ. ಹೊಸೂರ ಗ್ರಾಮದ ನಿಂಗಸೇನಿ ಪರಿವಾರಕ್ಕೆ ಸೇರಿದ ಅರಿಶಿಣ, ಕಬ್ಬು ಬೆಳೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟವಾಗಿದೆ.

    ಮಳೆಯಿಂದ ಹಾನಿಗಿಡಾದ ಮನೆಗಳು ಹಾಗೂ ಬೆಳೆಗಳ ಕುರಿತು ಸಮೀಕ್ಷೆ ನಡೆಸಲಾಗುವುದು. ಸರ್ಕಾರದ ನಿಯಮದಂತೆ ಕಾರ್ಯನಿರ್ವಹಿಸಲಾಗುವುದು.
    – ಪ್ರಶಾಂತ ಚನಗೊಂಡ, ತಹಸೀಲ್ದಾರ್ ರಬಕವಿ ಬನಹಟ್ಟಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts