More

    ಜವಳು ನೀರು ಸಮಸ್ಯೆಗೆ ಹೈರಾಣ

    ರಬಕವಿ/ಬನಹಟ್ಟಿ: ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬನಹಟ್ಟಿ ಗುಡ್ಡದ ಸಮೀಪದ ಬನಹಟ್ಟಿ ಲಕ್ಷ್ಮೀ ನಗರದಲ್ಲಿ ಜವಳು ನೀರು ಬುಗ್ಗೆಯಂತೆ ದಿನದಿಂದ ದಿನಕ್ಕೆ ಹೆಚ್ಚಾಗಿ ಹೊರಬರುತ್ತಿದೆ. ಇದರಿಂದ ಅಲ್ಲಿನ ಮನೆಗಳಿಗೆ ತೀವ್ರ ತೊಂದರೆಯಾಗಿದೆ.

    ಇಲ್ಲಿ ನಿರ್ಮಿಸಿದ ಹೊಸ ಬಡಾವಣೆಗಳು ಗುಡ್ಡದ ಸಮೀಪವಿರುವುದರಿಂದ ಗುಡ್ಡದಿಂದ ಬಸಿದು ಬರುತ್ತಿರುವ ನೀರು ರಸ್ತೆ ತುಂಬೆಲ್ಲ ಹಳ್ಳದಂತೆ ಹರಿಯುತ್ತಿದೆ. ಇದರಿಂದ ಸಾರ್ವಜನಿಕರು ರಸ್ತೆ ಮೇಲೆ ಸಂಚರಿಸಲು ಕಿರಿಕಿರಿ ಉಂಟಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವುದರ ಜತೆಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಲಕ್ಷ್ಮೀನಗರದ ಹೊಸ ಬಡಾವಣೆಗಳ ನಿವಾಸಿಗಳು ಒತ್ತಾಯಿಸಿದ್ದಾರೆ.

    ಹಲವಾರು ವರ್ಷಗಳಿಂದ ಇಲ್ಲಿ ನಾವು ವಾಸವಾಗಿದ್ದೇವೆ. ಈ ಬಾರಿ ಮಳೆ ಪ್ರಮಾಣ ಹೆಚ್ಚಾಗಿದ್ದರಿಂದ ನೀರು ನಮ್ಮ ಮನೆ ಒಳಗೆ ಕಾರಂಜಿಯಂತೆ ಜಿಗಿದು ಬರುತ್ತಿದೆ. ಬೋರ್‌ವೆಲ್ ಮೂಲಕವೂ ನೀರು ಹೊರಗೆ ಬಂದಿದ್ದು ಆತಂಕ ಸೃಷ್ಟಿಸಿದೆ.
    ಪ್ರಕಾಶ ಬೆಲ್ಲಂ ಲಕ್ಷ್ಮೀ ನಗರದ ನಿವಾಸಿ, ಬನಹಟ್ಟಿ

    ಬನಹಟ್ಟಿ ಲಕ್ಷ್ಮೀ ನಗರದಲ್ಲಿ ಮಳೆಗಾಲದ ವೇಳೆ ಬರುವ ಜವಳು ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಶಾಶ್ವತ ಕ್ರಿಯಾ ಯೋಜನೆ ರೂಪಿಸಲಾಗುವುದು. ಮಳೆಗಾಲ ಮುಗಿದ ನಂತರ ಕಾಮಗಾರಿ ಆರಂಭಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗುವುದು.
    ಶ್ರೀನಿವಾಸ ಜಾಧವ ಪೌರಾಯುಕ್ತ, ರಬಕವಿ/ಬನಹಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts