More

    ಜನ ಜಾಗೃತರಾಗದ ಹೊರತು ಕರೊನಾ ಹತೋಟಿಗೆ ಬರಲು ಸಾಧ್ಯವಿಲ್ಲ

    ರಬಕವಿ/ಬನಹಟ್ಟಿ; ಬನಹಟ್ಟಿಯ ಕಾಡಸಿದ್ಧೇಶ್ವರ ಹಾಗೂ ಬಾಲಾಜಿ ದೇವಸ್ಥಾನಗಳ ಎದುರಿನ ರಸ್ತೆಯಲ್ಲಿ ಕಾಯಿಪಲ್ಲೆ ಪಡೆಯಲು ಜನ ಮುಗಿಬೀಳುತ್ತಿದ್ದಾರೆ.
    ಜನರು ಜಾಗೃತರಾಗದ ಹೊರತು ಈ ಮಹಾಮಾರಿ ಹತೋಟಗೆ ಬರಲು ಸಾಧ್ಯವೇ ಇಲ್ಲ ಎಂದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

    ಈ ಮೊದಲು ಬನಹಟ್ಟಿ ಎಸ್‌ಆರ್‌ಎ ಹೈಸ್ಕೂಲ್ ಮೈದಾನದಲ್ಲಿ ಪ್ರತಿದಿನ ಸಂತೆ ಏರ್ಪಡಿಸಲಾಗಿತ್ತು. ಅಲ್ಲಿ ತೀರ ಗದ್ದಲ ಉಂಟಾದ ಮೇಲೆ ಮನೆ ಮನೆಗೆ ತಳ್ಳು ಗಾಡಿಗಳ ಮುಖಾಂತರ ಕಾಯಿಪಲ್ಲೆ ಮಾರಾಟ ಮಾಡಲು ತಹಸೀಲಾರ್ ಆದೇಶ ಮಾಡಿದ್ದರು.

    ಆದೇಶ ಮಾಡಿ ಇನ್ನೂ ಎರಡು ದಿನ ಕಳೆದಿಲ್ಲ ಜನ ಕಾಯಿಪಲ್ಲೆಗಾಗಿ ಈ ರೀತಿ ಸೇರುತ್ತಿದ್ದಾರೆ. ಕೆಲವರಂತು ಪ್ರತಿ ದಿನ ಕಾಯಿಪಲ್ಲೆಗೆ ಬರುತ್ತಾರೆ. ಎರಡು ಮೂರು ದಿನಗಳಿಗಾಗುವಷ್ಟು ಒಂದೇ ದಿನ ಪಡೆದುಕೊಂಡು ಹೋದರೆ ಜನಜಂಗುಳಿ ತಪ್ಪಿಸಬದುದಲ್ಲವೆ.

    ನಿತ್ಯ ರಬಕವಿ-ಬನಹಟ್ಟಿಯಲ್ಲಿ ಎರಡು-ಮೂರು ಜನ ಸಾವನ್ನುತ್ತಿದ್ದಾರೆಂದು ಹೇಳಲಾಗುತ್ತಿದ್ದರೂ ಜನ ಜಾಗೃತರಾಗುತ್ತಿಲ್ಲ. ಸಮಾಜಿಕ ಅಂತರ ಕಾಪಾಡಿಕೊಂಡು ಕಾಯಿಪಲ್ಲೆ ಮಾಡದವರು ವಿನಾಕಾರಣ, ಸಿಎಂ. ಪಿಎಂ ಅವರನ್ನು ಬೈಯುತ್ತ ್ತ ಕಾಲಹರಣ ಮಾಡುತ್ತಿದ್ದಾರೆ.

    ಸಮಾಜಿಕ ಅಂತರ ಕಾಪಾಡಿಕೊಳ್ಳದ ನಾವು ಈ ರೀತಿ ವರ್ತಿಸಿದರೆ ರೋಗ ಹರಡುವುದಿಲ್ಲ ಎನ್ನುವುದು ಏನು ಗ್ಯಾರಂಟಿ. ವಿನಾಕಾರಣ ಸರ್ಕಾರವನ್ನು ದೂಷಿಸುವುದು, ವೈದ್ಯರನ್ನು ಬೈಯುವುದು ಸರಿಯಲ. ಏನೋ ಅಪ್ಪಿತಪ್ಪಿ ರೋಗ ಬಂದಿದೆ ಎಂದರೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಅಲ್ಲದೆ ಅದು ಬರದಂತೆ ನೋಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಕೂಡ ಆಗಿದೆ.

    ಆಕ್ಸಿಜನ್ ಇಲ್ಲ, ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ತೆ ಇಲ್ಲ ಎಂದು ಹೇಳುವ ನಾವುಗಳು ಮೊದಲು ಸರಿಯಾಗಬೇಕು. ಗದ್ದಲ ಮಾಡದೇ, ಅಲ್ಲಲ್ಲಿ ಗುಂಪುಗುಂಪಾಗಿ ಬರುವುದು. ಮಾಸ್ಕ್ ಇಲ್ಲದೆ ತಿರುಗಾಡುವುದು, ಹೀಗಾದರೆ ಕರೊನಾ ಯಾವಾಗ ಹತೋಟಿಗೆ ಬರಲು ಸಾಧ್ಯ. ಅವಳಿ ನಗರದಲ್ಲಿ ಕಳೆದ ಒಂದು ವಾರದಲ್ಲಿ ಅನೇಕ ಯುವಕರು, ಹಿರಿಜೀವಗಳು ಈ ಮಹಾಮಾರಿಗೆ ಬಲಿಯಾಗಿದ್ದಾರೆ. ಅದು ಕಳೆದುಕೊಂಡವರ ಪರಿವಾರದವರಿಗೆ ದುಃಖ ಏನು ಅಂತ ಗೊತ್ತು. ವಿನಾಕಾರಣ ಈ ರೀತಿ ಮಾತನಾಡುವವರಿಗೆ ಏನು ಗೊತ್ತು. ರೈತರು ಕಷ್ಟ ಪಟ್ಟು ಕಾಯಿಪಲ್ಲೆ ಬೆಳದು ನಮಗಾಗಿ ತಂದಿರುತ್ತಾರೆ. ಅವರಿಗೆ ತೊಂದರೆಯಾಗುವ ರೀತಿಯಲ್ಲಿ ಗುಂಪಾದರೆ ಏಟು ಬೀಳುವುದು ಅವರಿಗೆ ಹೊರತು ನಿಮಗಲ್ಲ. ಸಿಕ್ಕಿತ್ತೋ ಇಲ್ಲೋ ಎಂಬಂತೆ ಗದ್ದಲ ಮಾಡಿ ಪೊಲೀಸ್‌ರು ಬರುವ ಹಾಗೆ ಮಾಡುವುದು ಸರಿಯಲ್ಲ. ದೂರ ದೂರ ನಿಂತು ನಿಧಾನವಾಗಿ ಪಡೆದರೆ ಎಲ್ಲರಿಗೂ ಒಳ್ಳೆಯದಲ್ಲವೆ. ಹೀಗಾದರೆ ರೈತರು ಸಹ ಮಾರುಕಟ್ಟೆಗೆ ಬರುವುದನ್ನು ನಿಲ್ಲಿಸುತ್ತಾರೆ. ರೈತರೇ ನಮಗೆ ನಿಮಗೆಲ್ಲ ಜೀವಾಳ ಅವರನ್ನು ಗೌರವಿಸೋಣ.

    ಎಲ್ಲರೂ ಸೇರಿ ಈ ಮಹಾಮಾರಿಯನ್ನು ಹೊಡೆದೋಡಿಸಲು ಪ್ರಯತ್ನಿಸೋಣ. ಸಮಾಜಿಕ ಅಂತರ, ಮಾಸ್ಕ್ ಮತ್ತು ಮನೆಯಿಂದ ಹೊರಬರದೆ ಸರ್ಕಾರ ನಿಗದಿ ಪಡಿಸಿದ ಸಮಯದಲ್ಲಿ ಕಾನೂನಿನಡಿ ಎಲ್ಲರೂ ಬದುಕೋಣ. ಬದುಕಿದ್ದರೆ ಮುಂದೆ ನಮ್ಮ ನಿಮ್ಮೇಲ್ಲರ ಜೀವನ. ಒಂದೊಂದು ಕುಟುಂಬದಲ್ಲಿ ಮನೆಯವರನ್ನು ಕಳೆದುಕೊಂಡ ರೋದನ ಕೇಳಿದರೆ ಕರಳು ಚುರ್ ಎನ್ನುತ್ತದೆ. ಆದಕಾರಣ ಎಲ್ಲರೂ ಸರ್ಕಾರದೊಂದಿಗೆ ಕೈಜೋಡಿಸಿ ವೈರಸ್‌ನ್ನು ಹೊಡೆದೋಡಿಸೋಣ ಎಂದು ಕೆಲ ಹಿರಿಜೀವಗಳು ಜನರಲ್ಲಿ ಮನವಿ ಮಾಡಿವೆ.

    ಈ ರೀತಿ ಜನ ಸೇರುವುದು ನೋಡಿ ನಮಗೂ ಬೆಸರ ತಂದಿದೆ. ನಾಳೆಯಿಂದ ಈ ಸ್ಥಳದಲ್ಲಿ ನಗರಸಭೆ, ಕಂದಾಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ನಿಂತು ಜನ ಗುಂಪಾಗದಂತೆ ಕ್ರಮ ಜರುಗಿಸುತ್ತೇವೆ. ತಪಿಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ.
    ಸಂಜಯ ಇಂಗಳೆ ತಹಸೀಲ್ದಾರ್,ರಬಕವಿ-ಬನಹಟ್ಟಿ

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts