More

    ಮಜೂರಿ, ಪ್ರೋತ್ಸಾಹ ಧನಕ್ಕಾಗಿ ನೇಕಾರರ ಮನವಿ

    ರಬಕವಿ/ಬನಹಟ್ಟಿ: ನಾಲ್ಕು ವರ್ಷಗಳಿಂದ ಕೆಎಚ್‌ಡಿಸಿ ನಿಗಮದಡಿ ದುಡಿಯುತ್ತಿರುವ ನೇಕಾರರಿಗೆ ಮಜೂರಿ ಹೆಚ್ಚಳಗೊಳಿಸಿಲ್ಲ. ಪ್ರೋತ್ಸಾಹ ಧನವನ್ನು ನೀಡಿಲ್ಲ. ಸರ್ಕಾರ ಕೂಡಲೇ ನೇಕಾರರಿಗೆ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ನೇಕಾರರು ಬನಹಟ್ಟಿಯ ಕೆಎಚ್‌ಡಿಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

    ನೇಕಾರ ಮುಖಂಡ ರಾಜು ಹೂಗಾರ ಮಾತನಾಡಿ, ತೀವ್ರ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಪ್ರತಿ ದಿನ ಕೇವಲ 100 ರಿಂದ 120 ರೂ.ನಷ್ಟು ಮಾತ್ರ ವೇತನ ದೊರಕುತ್ತಿದ್ದು, ಕುಟುಂಬ ನಿಭಾಯಿಸುವುದು ಕಷ್ಟಕರವಾಗಿದೆ. ಸರ್ಕಾರ ಕೂಡಲೇ ಮಜೂರಿ ಹೆಚ್ಚಳಗೊಳಿಸಬೇಕು. ಪ್ರೋತ್ಸಾಹ ಧನವನ್ನು ಚಾಲ್ತಿಯಲ್ಲಿಟ್ಟು ಪ್ರತಿ ವರ್ಷ ನಿಯಮಿತ ಸಮಯದಲ್ಲಿ ಒದಗಿಸಬೇಕು ಎಂದರು.

    ಕೆಎಚ್‌ಡಿಸಿ ಪ್ರಧಾನ ಕಚೇರಿ ಯೋಜನಾಧಿಕಾರಿ ಆರ್.ಎಸ್. ರಾಜನ್ ಅವರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಸಿದ್ದಪ್ಪ ಗಂವಾರ, ನಾಮದೇವ ಗೋಂದಕರ, ಗುರುಬಸು ಶೀಲವಂತ, ಲಕ್ಷ್ಮಣ ಮುಂಡಾಸ, ಯೂಸಫ್ ಅವರೆ, ಸುರೇಶ ರಾಠಿ, ರುದ್ರೇಶ ಶೆಟ್ಟೆಪ್ಪನವರ ಸೇರಿದಂತೆ ಅನೇಕರಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts