More

    ರಾಜ್ಯ ಸರ್ಕಾರ ನೇಕಾರರ ಬೇಡಿಕೆ ಈಡೇರಿಸಲಿ

    ಚಿಕ್ಕೋಡಿ: ವಿದ್ಯುತ್ ಚಾಲಿತ ಮಗ್ಗಗಳಿಗೆ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸ್ಥಗಿತಗೊಳಿದ್ದಾರೆ ಎಂದು ಆರೋಪಿಸಿ ರಾಜ್ಯ ನೇಕಾರ ಸೇವಾ ಸಂಘದ ತಾಲೂಕು ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿ ಮಿನಿ ವಿಧಾನಸೌಧದಲ್ಲಿ ಉಪವಿಭಾಗಾಧಿಕಾರಿ ಕಚೇರಿ ಅಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿದರು.

    ರಾಜ್ಯ ನೇಕಾರರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರ್ಕಿ ಮಾತನಾಡಿ, ನೇಕಾರರ ಹೆಚ್ಚುವರಿ ಬಾಕಿ ವಿದ್ಯುತ್ ಬಿಲ್ ಸರ್ಕಾರವೇ ಭರಿಸಬೇಕು. 20 ಎಚ್.ಪಿ. ತನಕ ವಿದ್ಯುತ್ ಸಂಪರ್ಕವಿರುವ ನೇಕಾರರಿಗೆ 500 ಯೂನಿಟ್ ಉಚಿತ ಹಾಗೂ 500 ಯೂನಿಟ್ ದಾಟಿದಾಗ 1.25 ರೂ. ದರ ವಿಧಿಸಬೇಕು. ಹಾಗೆಯೇ ಅದರ ಯಾವುದೇ ಚಾರ್ಜ್‌ಗಳನ್ನು ವಿಧಿಸದೆ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.

    ತಮಿಳುನಾಡು ಸರ್ಕಾರ ಕೈಮಗ್ಗ ನೇಕಾರರಿಗೆ ಬಟ್ಟೆ ಸರಬರಾಜು ಮಾಡುವ ಯೋಜನೆ ಜಾರಿಗೆ ತಂದಿದೆ. ರಾಜ್ಯದಲ್ಲಿಯೂ ಆ ಯೋಜನೆ ಜಾರಿಯಾಗಬೇಕು. ಸಾಲದ ಹೊರೆಯಿಂದ ರಾಜ್ಯದಲ್ಲಿ 47 ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.

    ರಾಜ್ಯ ನೇಕಾರರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರ್ಕಿ, ಯುವರಾಜ ಮೋರೆ, ಅರ್ಜುನ ಕುಂಬಾರ, ಈರಗೊಂಡ ಜಿಗರೆ, ಸಂದೀಪ ಮಾನೆ, ಬಾಲಾಜಿ ಮಾನೆ, ಪ್ರಲ್ಹಾದ ಡೊಣವಾಡೆ, ಸೋಮನಾಥ ಪರಕಾಳೆ, ಅಣ್ಣಾಸೋ ನಾಗರಾಳೆ, ಭೀಮರಾವ ಖೋತ, ರಾಜೇಂದ್ರ ಬೆನ್ನಾಡೆ, ಅಣ್ಣಾಸಾಹೇಬ ವರೂಟೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts