More

    ಶಿಕ್ಷಕ ವೃತ್ತಿ ಪವಿತ್ರವಾದುದು

    ರಬಕವಿ/ಬನಹಟ್ಟಿ: ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಿ ಎಂದು ಜಮಖಂಡಿ ತಾಪಂ ಇಒ ಅಭೀದ್ ಗದ್ಯಾಳ ಹೇಳಿದರು.

    ತಾಲೂಕಿನ ಹಿಪ್ಪರಗಿಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಎಸ್.ಎಸ್. ಖಾನಗೌಡ್ರ ತೋಟದ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿದ್ಯಾಧಿಪತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುವ ರೂವಾರಿಗಳು. ಶಿಕ್ಷಕ ವೃತ್ತಿ ಪವಿತ್ರವಾದುದು. ಮಕ್ಕಳಲ್ಲಿ ಕ್ರಿಯಾತ್ಮಕತೆ ಬೆಳೆಸುವುದರಿಂದ ಅವರ ಭವಿಷ್ಯಕ್ಕೆ ಉತ್ತಮ ಅಡಿಪಾಯ ಹಾಕಿಕೊಡಬೇಕು ಎಂದರು.

    ಬಿಇಒ ಸಿ.ಎಂ. ನೇಮಗೌಡ ಮಾತನಾಡಿ, ಜಾಗತಿಕ ಮಟ್ಟದಲ್ಲಿ ತುಂಬಾ ಸ್ಪರ್ಧೆ ಎದುರಿಸಬೇಕಾಗಿದ್ದು, ಮಕ್ಕಳನ್ನು ಆ ನಿಟ್ಟಿನಲ್ಲಿ ತಯಾರಿ ಮಾಡಬೇಕಾಗಿದೆ ಎಂದರು.

    ಎಸ್‌ಡಿಎಂಸಿ ಅಧ್ಯಕ್ಷ ಎಸ್.ಎಸ್. ಖಾನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ವಿಜಯಕುಮಾರ ವಂದಾಲ, ಶಿಕ್ಷಣ ಸಂಯೋಜಕ ಡಿ.ಎಂ. ಗಲಗಲಿ, ಬಿಆರ್‌ಪಿ ಎಸ್.ಆರ್. ಮದ್ನೂರ, ಸಿಆರ್‌ಪಿ ಪ್ರಶಾಂತ ಹೊಸಮನಿ, ಮುಖ್ಯಗುರುಗಳಾದ ಉಮೇಶ ಗಂಜ್ಯಾಳ, ಶಿವು ಯಾದವಾಡ, ಶಿವಾಜಿ ನಾಯಕ ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts