More

    ರೈಲು ಮಾರ್ಗ ಶೀಘ್ರ ಪೂರ್ಣಗೊಳಿಸಿ

    ರಬಕವಿ/ಬನಹಟ್ಟಿ: ಬಾಗಲಕೋಟೆ-ಕುಡಚಿ ರೈಲು ಮಾರ್ಗ 2016ರಲ್ಲಿ ಮುಕ್ತಾಯಗೊಳ್ಳಬೇಕಾಗಿತ್ತು. ಆದರೆ, ಕಾಮಗಾರಿ ಖಜ್ಜಿಡೋಣಿಯವರಿಗೆ ಮಾತ್ರ ನಡೆದಿದ್ದು, ಅದನ್ನು ಶೀಘ್ರವಾಗಿ ಪೂರ್ಣಗೊಳಿಸಲು ನಿರ್ಣಯ ಕೈಗೊಳ್ಳದಿದ್ದರೆ ಉತ್ತರ ಕರ್ನಾಟಕದ ಪ್ರತ್ಯೇಕತೆ ಕೂಗು ಮತ್ತೆ ಏಳುತ್ತದೆ ಎಂದು ರಾಜ್ಯ ರೈಲು ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್ ಖಾಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ರಬಕವಿಯ ಶಂಕರಲಿಂಗ ದೇವಸ್ಥಾನ ಹತ್ತಿರದ ವೃತ್ತದಲ್ಲಿ ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಕುರಿತು ಬುಧವಾರ ಸಂಜೆ ಹಮ್ಮಿಕೊಂಡಿದ್ದ ಪತ್ರ ಚಳವಳಿಯಲ್ಲಿ ಮಾತನಾಡಿದರು.

    ಉತ್ತರ ಕರ್ನಾಟಕದ ಪ್ರತ್ಯೇಕತೆ ಕೂಗು ದಮನ ಮಾಡಬೇಕಾದರೆ ಆದಷ್ಟು ಬೇಗನೆ ಈ ಕುರಿತು ಕ್ರಮ ತೆಗೆದುಕೊಳ್ಳಬೇಕು. ಈಗಾಗಲೇ ಬೆಳಗಾವಿಯಲ್ಲಿ ವಿಧಾನಸಭೆ ಚಳಿಗಾಲದ ಅಧಿವೇಶನ ನಡೆದಿದ್ದು, ಮುಖ್ಯಮಂತ್ರಿ ಅವರು ರೈಲ್ವೆ ಇಲಾಖೆ ಅಧಿಕಾರಿಗಳನ್ನು ಕರೆಯಿಸಿ ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಸಮಸ್ಯೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

    ಡಾ.ರವಿ ಜಮಖಂಡಿ, ರಾಮಣ್ಣ ಹುಲಕುಂದ, ಗಂಗಾಧರ ಉಕ್ಕಲಿ, ಸಂಜು ತೇಲಿ, ಆನಂದ ಜುಗಳಿ, ಬಸವರಾಜ ತೆಗ್ಗಿ, ರವಿ ಗಡಾದ, ಧರೆಪ್ಪ ಉಳ್ಳಾಗಡ್ಡಿ, ಸುರೇಶ ಚಿಂಡಕ, ಸಂಜಯ ಅಮ್ಮಣಗಿಮಠ, ಶೇಖರ ಕೊಟ್ಟರಶೆಟ್ಟಿ, ಡಾ.ಜಿ.ಎಚ್. ಚಿತ್ತರಗಿ, ಸಂಜಯ ತೆಗ್ಗಿ, ಚಿದಾನಂದ ಸೊಲ್ಲಾಪುರ ಇತರರಿದ್ದರು.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts