More

    ರಂಗಿನಲ್ಲಿ ಮಿಂದೆದ್ದ ಶಿರಸಿಯ ಜನತೆ

    ಶಿರಸಿ: ಕರೊನಾ 2 ನೇ ಅಲೆ ನಡುವೆಯೂ ತಾಲೂಕಿನ ಜನತೆ ಬಣ್ಣದ ಹಬ್ಬ ಹೋಳಿಯ ದಿನವಾದ ಭಾನುವಾರ ರಂಗನ್ನು ಎರಚಿ ಸಂಭ್ರಮಿಸಿದರು.

    ಸಾವಿರಾರು ಜನ ನಗರದ ಪ್ರಮುಖ ವೃತ್ತಗಳಲ್ಲಿ ಪಾಲ್ಗೊಂಡು ಕುಣಿಯುತ್ತಾ ಒಬ್ಬರಿಗೊಬ್ಬರು ಬಣ್ಣ ಎರಚುವ ಮೂಲಕ ಹೋಳಿ ಆಚರಣೆ ಮಾಡಿದರು.

    ಬೇಡರವೇಷ ಮುಕ್ತಾಯ: ರಾಜ್ಯ ಪ್ರಸಿದ್ಧ ಬೇಡರವೇಷ ಪ್ರದರ್ಶನ ಭಾನುವಾರ ಬೆಳಗಿನ ಜಾವದ ತನಕ ನಡೆದು ಮುಕ್ತಾಯ ಕಂಡಿದೆ. ನಗರದ ವಿವಿಧ ವೃತ್ತಗಳಲ್ಲಿ ಈ ನೃತ್ಯ ವೀಕ್ಷಿಸಲು ರಾತ್ರಿ ಇಡೀ ಜನಸಾಗರ ಸೇರಿದ್ದು ವಿಶೇಷವಾಗಿತ್ತು. ಈ ಪ್ರದರ್ಶನದ ಅಬ್ಬರ ನೋಡಲು ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಜನರು ಬಂದಿದ್ದು, 50ಕ್ಕೂ ಹೆಚ್ಚು ಭಾಗದ ಬೇಡರ ವೇಷಧಾರಿಗಳು ತಮ್ಮ ಪ್ರದರ್ಶನ ನೀಡಿದರು.

    ಭಟ್ಕಳ ಬಂದರಿನಲ್ಲಿ ಹೋಳಿ ಆಚರಣೆ

    ತಾಲೂಕಿನ ಮಾವಿನಕುರ್ವೆ ಪಂಚಾಯಿತಿ ವ್ಯಾಪ್ತಿಯಲ್ಲಿ ಹೋಳಿ ಹಬ್ಬವನ್ನು ವಿಶಿಷ್ಟವಾಗಿ ಅಚರಿಸಲಾಗುತಿದೆ. ಮಾ.25ರಂದು ಆರಂಭವಾದ ಹೋಳಿ ಅಚರಣೆ 29ರವರೆಗೆ ನಡೆಯಲಿದೆ.

    ಪ್ರತಿ ವರ್ಷವೂ ಖಾರ್ವಿ ಸಮಾಜದ ಒಂದು ಕುಟುಂಬ ಹೋಳಿ ಹಬ್ಬದ ಹರಕೆ ಹೊತ್ತು ನಿಯಮ ಪಾಲಿಸುತ್ತದೆ. ಹರಕೆದಾರರ ಮನೆಯಿಂದ ಒಂದು ಅಡಕೆ ಮರವನ್ನು ಹುಣ್ಣಿಮೆ ದಿನ ಸಮಾಜದವರೆಲ್ಲರೂ ಸೇರಿ ವಾದ್ಯ ಕುಣಿತ ಮೆರವಣಿಗೆಯ ಮೂಲಕ ಕಡಲತೀರಕ್ಕೆ ತರುತ್ತಾರೆ. ಜೈಕಾರ, ಘೊಷಣೆ ಜತೆಗೆ ವೇಷಧಾರಿಗಳು ಮೆರವಣಿಗೆಗೆ ಮೆರಗು ನೀಡುತ್ತಾರೆ. ಮಹಿಳೆಯರು, ಪುರುಷರು ಎಲ್ಲರೂ ನೃತ್ಯದಲ್ಲಿ ಭಾಗವಹಿಸಿ ಸಂಭ್ರಮಿಸುತ್ತಾರೆ. ಮೆರವಣಿಗೆ ಮೂಲಕ ಕಡಲತೀರಕ್ಕೆ ತಂದು ನೆಟ್ಟ ಅಡಕೆ ಮರವನ್ನು ದಹನ ಮಾಡುವ ಮೂಲಕ ಸಂಪ್ರದಾಯದ ಹೋಳಿಯ ಆಚರಣೆ ನಡೆದಿದೆ. ಸೋಮವಾರವು ಬಂದರಿನ ಖಾರ್ವಿ ಸಮಾಜದ ಬಣ್ಣದಾಟ ನಡೆಯಲಿದ್ದು, ರಾತ್ರಿ ಕಾಮನ ಮೂರ್ತಿಯ ದಹನ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts