More

    ಬಿಜೆಪಿಯ ಯಾವ ನಾಯಕರೂ ಆಸ್ತಿ ಮಾಡಿಲ್ಲವೇ? ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡುತ್ತಿರುವುದೇಕೆ?

    ಬೆಂಗಳೂರು: ಸೋನಿಯಾ ಗಾಂಧಿ ಅವರನ್ನ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಒಳಪಡಿಸಿದೆ. ಇದು ನಿಜಕ್ಕೂ ಖಂಡನೀಯ. ಇದು ಬಿಜೆಪಿ ಸರ್ಕಾರದ ರಾಜಕೀಯ ಪ್ರೇರಿತ ನಡೆ. ನಮ್ಮ ನಾಯಕರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಚಾಮರಾಜಪೇಟೆ ಶಾಸಕ ಜಮೀರ್​ ಅಹ್ಮದ್​ ಆಕ್ರೋಶ ಹೊರಹಾಕಿದ್ದಾರೆ.

    ಸೋನಿಯಾ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಫ್ರೀಡಂ ಪಾರ್ಕ್​ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಜಮೀರ್​ ಅಹ್ಮದ್​ ಮಾತನಾಡಿದರು. ತನಿಖಾ ಸಂಸ್ಥೆಗಳನ್ನು ಬಿಜೆಪಿ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆ. ಇದು ಎಲ್ಲರಿಗೂ ಗೊತ್ತೇ ಇದೆ. ಬಿಜೆಪಿ ನಾಯಕರಿಗೆ ನಾನು ಮತ್ತು ಡಿ.ಕೆ ಶಿವಕುಮಾರ್ ಮಾತ್ರ ಕಾಣುತ್ತೇವೆ ಎಂದು ಅಸಮಾಧಾನ ಹೊರ ಹಾಕಿದರು.

    ನಿಮ್ಮ ಬಿಜೆಪಿ ನಾಯಕರಲ್ಲಿ ಯಾರೊಬ್ಬರೂ ಹಣ, ಆಸ್ತಿ ಮಾಡಿಲ್ಲವೇ? ಬಿಜೆಪಿಯಲ್ಲಿ ಯಾರೊಬ್ಬರನ್ನು ಇದುವರೆಗೂ ಯಾಕೆ ವಿಚಾರಣೆಗೆ ಒಳಪಡಿಸಿಲ್ಲ? ನನ್ನನ್ನು ಕಳೆದ ವರ್ಷ ಆ.5 ರಂದು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಅವರು ಕೇಳಿದ ಪ್ರತಿಯೊಂದು ದಾಖಲೆಗಳನ್ನು ಒದಗಿಸಿದ್ದೇನೆ. ಆದರೂ, ನನ್ನ ಪ್ರಕರಣವನ್ನು ಪುನಃ ಸ್ಥಳೀಯ ಎಸಿಬಿಗೆ ಒಪ್ಪಿಸಿದ್ದೇಕೆ? ಹಾಗಿದ್ದರೆ ಇಡಿ, ಎಸಿಬಿಗಿಂತ ವೀಕ್ ಆಗಿದೆ ಎಂದರ್ಥವೇ? ಇದೆಲ್ಲ ಕೇವಲ 2023ರ ಚುನಾವಣಾ ಗಿಮಿಕ್. ನಾವು ನ್ಯಾಯಬದ್ಧವಾಗಿದ್ದೇವೆ. ಬಿಜೆಪಿಯ ರಾಜಕೀಯ ಪ್ರೇರಿತ ಅಸ್ತ್ರಕ್ಕೆ ಕುಗ್ಗುವುದಿಲ್ಲ ಎಂದು ಜಮೀರ್​ ಹೇಳಿದರು.

    ಬಡವರಿಗೆ ಸಹಾಯ ಮಾಡುವಂತೆ 600 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸರ್ಕಾರಕ್ಕೆ ದಾನ ಕೊಟ್ಟ ವೈದ್ಯ!

    ಇ.ಡಿ ಇಕ್ಕಳದಲ್ಲಿ ಸೋನಿಯಾ: ದೇಶಾದ್ಯಂತ ಭಾರಿ ಪ್ರತಿಭಟನೆ- ವೈರಲ್​ ಆಯ್ತು ಈ ಹಳೆಯ ವಿಡಿಯೋ

    ನೆಟ್ಟಿಗ ಕೇಳಿದ ತೀರಾ ಅಶ್ಲೀಲ ಪ್ರಶ್ನೆಗೆ ಖ್ಯಾತ ಕಿರುತೆರೆ ನಟಿ ಕೊಟ್ಟ ಬೋಲ್ಡ್​ ಉತ್ತರ ಹೀಗಿತ್ತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts