More

    ರೂಮ್​ ಬುಕ್​ ಮಾಡಿ ಕೆಲಸ ಕೊಟ್ಟ ಮಾಲೀಕನ ಪತ್ನಿ ಜತೆ ಹೋಟೆಲ್​ಗೆ ತೆರಳಿದ ಯುವಕ: ಮುಂದಾಗಿದ್ದು ದುರಂತ

    ತ್ರಿಸ್ಸೂರ್: ಹೋಟೆಲ್​ ಒಂದರ ಕೋಣೆಯಲ್ಲಿ ವ್ಯಕ್ತಿಗಳಿಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕೇರಳದ ತ್ರಿಸ್ಸೂರ್​ನಲ್ಲಿ ನಡೆದಿದೆ.

    ಮೃತರನ್ನು ಒಲರಿಕ್ಕರದ ನಿವಾಸಿ ರಿಜೊ (26) ಮತ್ತು ಕರ್ಯತ್ತುಕುರಾ ನಿವಾಸಿ ಸಂಗೀತಾ ಎಂದು (26) ಎಂದು ಗುರುತಿಸಲಾಗಿದೆ. ಸಂಗೀತಾ ಪತಿ ನಡೆಸುತ್ತಿದ್ದ ಕ್ಯಾಟರಿಂಗ್​ ಘಟಕದಲ್ಲಿ ರಿಜೊ ಕೆಲಸ ಮಾಡುತ್ತಿದ್ದ. ಇಬ್ಬರ ನಡುವೆ ಅಕ್ರಮ ಸಂಬಂಧ ಇತ್ತೆಂದು ಹೇಳಲಾಗಿದೆ.

    ನಿನ್ನೆ ಇಬ್ಬರು ಹೋಟೆಲ್​ ರೂಮ್​ ಬುಕ್​ ಮಾಡಿದ್ದರು. ಎಷ್ಟೇ ಕೂಗಿದರೂ ಬಾಗಿಲು ತೆಗೆಯದಿದ್ದಾಗ ಅನುಮಾನಗೊಂಡು ಹೋಟೆಲ್​ ಸಿಬ್ಬಂದಿ ಪೊಲೀಸರ ಸಮ್ಮುಖದಲ್ಲಿ ಬಾಗಿಲು ತೆಗೆದು ನೋಡಿದಾಗ ಇಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಸಂಗೀತಾ ದಂಪತಿಗೆ ಮೂವರು ಮಕ್ಕಳಿದ್ದಾರೆ. ಸಂಗೀತಾ ಮತ್ತು ರಿಜೊ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ತ್ರಿಸ್ಸೂರ್​ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್​)

    ಹಿಜಾಬ್​ ವಿವಾದದ ಬಗ್ಗೆ ಮಾತನಾಡಿದ್ದಕ್ಕೆ ಹಾಟ್​ ಫೋಟೋ ಶೇರ್​: ನೆಟ್ಟಿಗನಿಗೆ ಸ್ವರಾ ಕೊಟ್ಟ ಉತ್ತರ ಹೀಗಿತ್ತು…

    ಮನುಕುಲಕ್ಕೆ ಅಪಾಯಕಾರಿ ಸುದ್ದಿ: ಸಮುದ್ರದಲ್ಲಾಗುತ್ತಿದೆ ಬದಲಾವಣೆ, 2050ರ ವೇಳೆಗೆ ಕಾದಿದೆ ಗಂಡಾಂತರ!

    VIDEO: ನಗ್ನವಾಗಿ ಮಲಗಿ, ಅಂದ ಹೆಚ್ಚಿಸಿಕೊಳ್ಳಿ ಎಂದ ವಿಶ್ವದ ಹಾಟೆಸ್ಟ್‌ ಅಜ್ಜಿ- ಗುಟ್ಟು ಹೇಳಿದ ನಾಲ್ಕು ಮಕ್ಕಳ ಅಮ್ಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts