More

    ಎರಡು ಮಕ್ಕಳ ತಾಯಿಯಾಗಿ ನೀವು ಮಾಡೋದು ಸರಿನಾ? ನೆಟ್ಟಿಗನ ಪ್ರಶ್ನೆಗೆ ಗರಂ ಆದ ಅನಸೂಯ ಭಾರದ್ವಜ್​

    ಹೈದರಾಬಾದ್​: ಟಾಲಿವುಡ್​ನ ಜನಪ್ರಿಯ ನಟಿ ಮತ್ತು ನಿರೂಪಕಿ ಅನಸೂಯ ಭಾರದ್ವಜ್​ ಅವರು ನೆಟ್ಟಿಗನೊಬ್ಬ ಮಾಡಿರುವ ಕಾಮೆಂಟ್​ಗೆ ಗರಂ ಆಗಿದ್ದು, ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

    ಅನಸೂಯ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುತ್ತಾರೆ. ಆಗಾಗ ಫೋಟೋಶೂಟ್​ ಮಾಡಿಸುವ ಅನಸೂಯ, ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾರೆ. 36ರ ಹರೆಯದಲ್ಲೂ ಸಖತ್​ ಹಾಟ್​ ಆಗಿ ಫೋಟೋಶೂಟ್​ ಮಾಡಿಸುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿರುತ್ತಾರೆ. ಟ್ವಿಟರ್​ನಲ್ಲೂ ಅನಸೂಯ ಸಕ್ರೀಯರಾಗಿದ್ದಾರೆ. ಇತ್ತೀಚೆಗೆ ಟ್ವಿಟ್ಟಿಗನೊಬ್ಬ ಆಡಿದ ಮಾತು ಅನಸೂಯ ಅವರ ಕೋಪಕ್ಕೆ ಕಾರಣವಾಗಿದೆ.

    ಟ್ವಿಟ್ಟಿಗ ಆಡಿದ ಮಾತೇನೆಂದರೆ, ಎರಡು ಮಕ್ಕಳ ತಾಯಿ ಆಗಿ ಇಂತಹ ತುಂಡುಡುಗೆಗಳನ್ನು ತೊಡುತ್ತೀರಲ್ಲ ನಿಮಗೆ ನಾಚಿಕೆ ಆಗೋದಿಲ್ವಾ? ನೀವು ಇಡೀ ತೆಲುಗು ಮಹಿಳಾ ಸಮುದಾಯಕ್ಕೆ ಅವಮಾನ ಮಾಡುತ್ತೀದ್ದೀರಾ ಎಂದು ಟ್ವೀಟ್​ ಮೂಲಕ ಕೇಳಲಾಗಿದೆ.

    ಇದಕ್ಕೆ ಖಡಕ್​ ಉತ್ತರ ನೀಡಿರುವ ಅನಸೂಯ, ನಿಮ್ಮ ಯೋಚನಾ ಲಹರಿ ಇಡೀ ಗಂಡಸರ ಜಾತಿಗೆ ಅವಮಾನ ಮಾಡಿದಂತೆ. ನಿಮ್ಮ ಕೆಲಸವನ್ನು ನೀವು ಮಾಡುವುದು ಉತ್ತಮ. ನನಗೇನು ಅನಿಸುತ್ತದೆಯೋ ಅದನ್ನು ನಾನು ಮಾಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

    ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಅಲ್ಲು ಅರ್ಜುನ್​ ನಟನೆಯ ಪುಷ್ಪ ಚಿತ್ರದಲ್ಲಿ ಮಿಂಚು ಹರಿಸಿರುವ ಅನಸೂಯ ಇತ್ತೀಚೆಗೆ ಬಿಡುಗಡೆಯಾದ ರವಿತೇಜ ಅಭಿನಯದ ಖಿಲಾಡಿ ಚಿತ್ರದಲ್ಲಿ ಸಖತ್​ ಗ್ಲಾಮರಸ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿರಂಜೀವಿ ಅಭಿನಯದ ಆಚಾರ್ಯ ಚಿತ್ರದಲ್ಲೂ ಅನಸೂಯ ಬಣ್ಣ ಹಚ್ಚಿದ್ದಾರೆ. (ಏಜೆನ್ಸೀಸ್​)

    ಪೋಸ್ಟ್​ ವೆಡ್ಡಿಂಗ್​ ಫೋಟೋಶೂಟ್​ ವೇಳೆ ದುರಂತ: ವರನ ಸಾವು, ವಧುವಿನ ಸ್ಥಿತಿ ಚಿಂತಾಜನಕ

    ವಿಜಯ್ ರಾಘವೇಂದ್ರ ಈಗ ರಾಘು; ವಿಭಿನ್ನ ಥ್ರಿಲ್ಲರ್​ನಲ್ಲಿ ಹೊಸ ತರಹದ ಪಾತ್ರ

    15 ದಿನದಲ್ಲಿ 13 ಬಾರಿ ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆ: ವಿವಿಧ ನಗರಗಳಲ್ಲಿ ಇಂದಿನ ಇಂಧನ​ ದರ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts