More

    ಪೋಸ್ಟ್​ ವೆಡ್ಡಿಂಗ್​ ಫೋಟೋಶೂಟ್​ ವೇಳೆ ದುರಂತ: ವರನ ಸಾವು, ವಧುವಿನ ಸ್ಥಿತಿ ಚಿಂತಾಜನಕ

    ಕೊಚ್ಚಿ: ಅದ್ಧೂರಿ ಮದುವೆಯ ಬಳಿಕ ನವಜೋಡಿಯ ಪೋಸ್ಟ್​ ವೆಡ್ಡಿಂಗ್​ ಫೋಟೋಶೂಟ್​ ದುರಂತಕ್ಕೆ ತಿರುಗಿದ ಹೃದಯ ವಿದ್ರಾವಕ ಘಟನೆ ಕೇರಳದ ಜನಕಿಕಾಡುವಿನ ಕುಟ್ಟಿಯಾದಿ ನದಿಯಲ್ಲಿ ನಡೆದಿದೆ.

    ಫೋಟೋಶೂಟ್​ ವೇಳೆ ಆಕಸ್ಮಿಕವಾಗಿ ವರನ ಕಾಲು ಜಾರಿ ನದಿ ಬಿದ್ದು ದುರಂತ ಸಾವಿಗೀಡಾಗಿದ್ದಾನೆ. ಈ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ. ಮದುವೆಯ ಬಳಿಕ ಫೋಟೋಶೂಟ್​ ಮಾಡಿಸಲು ಇಚ್ಛಿಸಿದ ವಧು-ವರ ಸೋಮವಾರ ಬೆಳಗ್ಗೆ ಕುಟ್ಟಿಯಾದಿ ನದಿಯ ಹತ್ತಿರ ಬಂದಿದ್ದರು. ಕ್ಯಾಮೆರಾಗೆ ಪೋಸ್​​ ನೀಡುವಾಗ ವಧು-ವರರ ಕಾಲು ಜಾರಿ ನದಿ ಬಿದ್ದಿದ್ದಾರೆ. ರೆಜಿಲ್ ಎಂದು ಗುರುತಿಸಲಾದ ವರ ಬಲವಾದ ಪ್ರವಾಹಕ್ಕೆ ಸಿಲುಕಿ ನದಿಯಲ್ಲಿ ಮುಳುಗಿದರೆ, ಅವನ ಹೆಂಡತಿ ಕಾರ್ತಿಕಾ ಅವರನ್ನು ಸಾರ್ವಜನಿಕರು ಸಮಯಕ್ಕೆ ರಕ್ಷಿಸಿದ್ದಾರೆ. ವಧುವಿನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

    ಮಾರ್ಚ್ 14 ರಂದು ವಿವಾಹವಾದ ಜೋಡಿ, ಮದುವೆಯ ನಂತರದ ಫೋಟೋ ಶೂಟ್‌ಗಾಗಿ ನದಿಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಸಂಬಂಧಿಕರ ಪ್ರಕಾರ, ಇಬ್ಬರು ನಿಶ್ಚಿತಾರ್ಥಗಳ ಕಾರಣದಿಂದ ಹೊರಾಂಗಣ ಮದುವೆಯ ಚಿತ್ರೀಕರಣವನ್ನು ಏಪ್ರಿಲ್ 4 ಕ್ಕೆ ಮುಂದೂಡಿದ್ದರು. ಸೋಮವಾರ ಬೆಳಗ್ಗೆ 7 ಗಂಟೆಗೆ ಫೋಟೋಶೂಟ್ ಶುರು ಮಾಡಿದ್ದರು.

    ಸ್ಥಳೀಯರು ಹೇಳುವ ಪ್ರಕಾರ, ನವಜೋಡಿ ಮತ್ತು ಛಾಯಾಗ್ರಾಹಕರು ನದಿಯ ಸುರಕ್ಷಿತವಲ್ಲದ ತುಂಬಾ ಆಳವಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್​)

    11 ತಿಂಗಳು ಸಂಬಳ ಕೊಡದೆ ಕಣ್ಣಾಮುಚ್ಚಾಲೆ; ಸಚಿವರೇ ಬಹಿರಂಗಪಡಿಸಿದ ಅಮಾನವೀಯ ಘಟನೆ

    ಪಾಕ್ ಗೊಂದಲ ಮುಂದುವರಿಕೆ: ಮಾಜಿ ಸಿಜೆ ಹಂಗಾಮಿ ಪಿಎಂ ಸಾಧ್ಯತೆ; ಸುಪ್ರೀಂ ವಿಚಾರಣೆ ಮುಂದಕ್ಕೆ

    ಮಹಿಳೆ, ಮಕ್ಕಳ ಅಭಿವೃದ್ಧಿಗೆ ಮೂರು ಯೋಜನೆಗಳ ಜಾರಿ; ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts