More

    ಸಂಬಂಧಿಯೊಬ್ಬ ಕಳುಹಿಸಿದ ವಿಡಿಯೋ ನೋಡಿದ ಬೆನ್ನಲ್ಲೇ ತಂಗಿಯನ್ನೇ ಗುಂಡಿಟ್ಟು ಹತ್ಯೆಗೈದ ಸಹೋದರ..!

    ಲಾಹೋರ್​: ಡಾನ್ಸರ್​ ಸಹೋದರಿಗೆ ಸಹೋದರನೊಬ್ಬ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದ್ದು, ಮರ್ಯಾದೆ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆ ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದಲ್ಲಿ ನಡೆದಿದೆ.

    ಸಿದ್ರಾ (21) ಮೃತ ದುರ್ದೈವಿ. ಸಹೋದರ ಹಮ್ಜಾ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಕುಟುಂಬಸ್ಥರ ವಿರೋಧದ ನಡುವೆಯೂ ಮಾಡೆಲಿಂಗ್​ ಮತ್ತು ಡಾನ್ಸ್​ ಕಡೆ ಒಲವು ತೋರಿಸಿದ್ದಕ್ಕೆ ಹತ್ಯೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.

    ಪೊಲೀಸರ ಪ್ರಕಾರ ಸಿದ್ರಾ ಕೆಲವು ವರ್ಷಗಳಿಂದ ಮಾಡೆಲಿಂಗ್​ ಮತ್ತು ಡಾನ್ಸ್​ನಲ್ಲಿ ಸಕ್ರಿಯಳಾಗಿದ್ದಳು. ಪಾಕಿಸ್ತಾನದಲ್ಲಿ ಮುಂಚೂಣಿಯಲ್ಲಿರುವ ಜವಳಿ ಕಂಪನಿಯ ಜಾಹಿರಾತಿನಲ್ಲಿ ಸಿದ್ರಾ ರೂಪದರ್ಶಿಯಾಗಿ ಕಾಣಿಸಿಕೊಳ್ಳುತ್ತಿದ್ದಳು. ಇದಲ್ಲದೆ, ಕೆಲವು ಚಿತ್ರಮಂದಿಗಳಲ್ಲಿ ಡಾನ್ಸ್​ ಕಾರ್ಯಕ್ರಮವನ್ನು ನೀಡುತ್ತಿದ್ದಳು. ಇತ್ತ ಮನೆಯಲ್ಲಿ ಮಾಡೆಲಿಂಗ್​ ಮತ್ತು ಡಾನ್ಸ್​ ಬಿಡುವಂತೆ ಒತ್ತಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.

    ಪಾಲಕರು ಎಷ್ಟೇ ಒತ್ತಾಯ ಮಾಡಿದರು ಸಿದ್ರಾಗೆ ಮಾತ್ರ ಬಿಡಲು ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಸಿದ್ರಾ ಮತ್ತು ಕುಟುಂಬದ ನಡುವೆ ಆಗಾಗ ಗಲಾಟೆಗಳು ಕೂಡ ನಡೆದಿವೆ. ಇತ್ತೀಚೆಗಷ್ಟೇ ನಡೆದ ಗಲಾಟೆಯು ತಾರಕಕ್ಕೇರಿ, ಸಹೋದರ ಹಮ್ಜಾ ಪಿಸ್ತೂಲ್​ ತೆಗೆದು ಸಿದ್ರಾಗೆ ಗುಂಡು ಹಾರಿಸಿದ್ದಾನೆ. ಇದರಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇದಲ್ಲದೆ, ಕುಟುಂಬದ ಮಾನಹಾನಿ ಮಾಡಿದ್ದಕ್ಕಾಗಿ ಹಮ್ಜಾ, ಸಿದ್ರಾ ಮೇಲೆ ದೈಹಿಕವಾಗಿಯು ಹಲ್ಲೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಸಂಬಂಧಿಯೊಬ್ಬರು ಮೊಬೈಲ್​ಗೆ ಕಳುಹಿಸಿದ ವಿಡಿಯೋದಲ್ಲಿ ಸಿದ್ರಾ ನೃತ್ಯ ಪ್ರದರ್ಶನವನ್ನು ನೋಡಿ ಕೋಪಗೊಂಡ ಹಮ್ಜಾ, ಸಿದ್ರಾಳನ್ನು ಕೊಂದಿದ್ದಾನೆ. ಕಳೆದ ಮೂರು ತಿಂಗಳಲ್ಲಿ ಪಾಕಿಸ್ತಾನದಲ್ಲಿ ನಡೆದ ಎರಡನೇ ಮರ್ಯಾದಾ ಹತ್ಯೆ ಇದಾಗಿದೆ. ಹತ್ತೊಂಬತ್ತು ವರ್ಷದ ನರ್ತಕಿ ಆಯಿಷಾ ಕಳೆದ ಫೆಬ್ರವರಿಯಲ್ಲಿ ಆಕೆಯ ಮಾಜಿ ಪತಿಯಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟಿದ್ದಳು. (ಏಜೆನ್ಸೀಸ್​)

    ಮಗನಿಗೆ PSI ಹುದ್ದೆ ಕೊಡಿಸಲು ಅಕ್ರಮ ಹಾದಿ ಹಿಡಿದು ಲಕ್ಷ ಲಕ್ಷ ರೂ. ಕೊಟ್ಟ ಶಿಕ್ಷಕನ ಕತೆ ಇದೀಗ ಹೇಳತೀರದು!

    ಒಡೆಸಾ ಬಂದರು, ಮರಿಯುಪೋಲ್ ಸ್ಥಾವರ ಧ್ವಂಸ: ಯೂಕ್ರೇನ್ ನೆರವಿನ ಮಸೂದೆಗೆ ಬೈಡೆನ್ ಅಸ್ತು; ಇಝಿಯುಂನಲ್ಲಿ 44 ಶವ ಪತ್ತೆ

    ಸಾಯಿಪಲ್ಲವಿಗೆ 30ರ ಖುಷಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts