More

    ಯಶಿಕಾ ಕಾರು ಅಪಘಾತ ಕೇಸ್​: ಸ್ನೇಹಿತೆ ಸಾವಿಗೆ ಕಾರಣ, ಯುವಕರಿಬ್ಬರ ಬಗ್ಗೆ ಮಾಹಿತಿ ಬಿಚ್ಚಿಟ್ಟ ಯಶಿಕಾ!

    ಚೆನ್ನೈ: ತಮಿಳು ಬಿಗ್​ಬಾಸ್​ ಖ್ಯಾತಿಯ ನಟಿ ಯಶಿಕಾ ಆನಂದ ಅವರ ಕಾರು ಶನಿವಾರ ಮಧ್ಯರಾತ್ರಿ ಅಪಘಾತಕ್ಕೀಡಾಗಿ ಕಾರಿನಲ್ಲಿದ್ದ ಅವರ ಸ್ನೇಹಿತೆ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಯಶಿಕಾಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇದೀಗ ಮಾಧ್ಯಮವೊಂದಕ್ಕೆ ಅಪಘಾತ ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಯಶಿಕಾ ಪ್ರತಿಕ್ರಿಯೆ ನೀಡಿದ್ದಾರೆ.

    ಮಹಾಬಲಿಪುರಂ ಬಳಿಯ ತಡೆಗೋಡೆಗೆ ಯಶಿಕಾ ಅವರ ಟಾಟಾ ಹ್ಯಾರಿಯರ್ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ. ಯಶಿಕಾ ಅವರ ಆಪ್ತ ಗೆಳತಿ ವೆಲ್ಲಿಚೆಟ್ಟಿ ಭವಾನಿ ಸ್ಥಳದಲ್ಲೇ ಮೃತಪಟ್ಟರೆ, ಕಾರಿನಲ್ಲಿದ್ದ ಇಬ್ಬರು ಪುರುಷ ಸ್ನೇಹಿತರಾದ ಸೈಯದ್​ ಮತ್ತು ಆಮೀರ್​ ಗಂಭೀರ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಅಪಘಾತದಲ್ಲಿ ಯಶಿಕಾ ಅವರ ನಡುವಿನ ಮೂಳೆ ಮತ್ತು ಬಲಗಾಲಿನ ಮೂಳೆ ಮುರಿತವಾಗಿದೆ. ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಯಶಿಕಾರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿದೆ. ಇದೀಗ ಚೇತರಿಸಿಕೊಳ್ಳುತ್ತಿರುವ ಯಶಿಕಾ ಮಾಧ್ಯಮವೊಂದಕ್ಕೆ ಅಪಘಾತ ಹೇಗೆ ಸಂಭವಿಸಿತು ಎಂಬುದರ ಬಗ್ಗೆ ವಿವರಣೆ ನೀಡಿದ್ದಾರೆ.

    ಯಶಿಕಾ ಪ್ರಕಾರ ಕಾರು ಚಲಾಯಿಸುತ್ತಿದ್ದು ಅವರೇ ಎಂದು ಒಪ್ಪಿಕೊಂಡಿದ್ದಾರೆ. ಅತಿ ವೇಗದಲ್ಲಿ ಕಾರು ಚಲಾಯಿಸಿದ್ದರಿಂದ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆಯಿತು. ಭವಾನಿ ಸೀಟ್​ ಬೆಲ್ಟ್​ ಧರಿಸಿರಲಿಲ್ಲ. ಡಿಕ್ಕಿಯ ರಭಸಕ್ಕೆ ಆಕೆ ಕಾರಿನ ಆಚೆಗೆ ಹಾರಿದ್ದಳು. ತಲೆಗೆ ಬಲವಾಗಿ ಪೆಟ್ಟು ತಕ್ಷಣ ಪ್ರಾಣ ಕಳೆದುಕೊಂಡಳು ಎಂದು ಯಶಿಕಾ ಹೇಳಿದ್ದಾರೆ. ಇದು ಡ್ರಂಕ್​ ಆ್ಯಂಡ್​ ಡ್ರೈವ್​ ಕೇಸ್​ ಅಲ್ಲ. ನಾನು ಮತ್ತು ಫ್ರೆಂಡ್ಸ್​ ಡಿನ್ನರ್​ ಮುಗಿಸಿಕೊಂಡು ಬರುವಾಗ ಈ ಅವಘಡ ಸಂಭವಿಸಿತು ಎಂದು ಹೇಳಿಕೊಂಡಿದ್ದಾರೆ.

    ಇನ್ನು ಮಾಧ್ಯಮ ವರದಿಗಳ ಪ್ರಕಾರ ಯಶಿಕಾ ಮಧ್ಯ ಸೇವನೆ ಮಾಡಿರುವ ಆರೋಪವಿದೆ. ಈ ಬಗ್ಗೆ ಪೊಲೀಸರು ಪ್ರಕರಣವನ್ನು ಸಹ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಯಶಿಕಾ ಅವರ ಡ್ರೈವಿಂಗ್​ ಲೈಸೆನ್ಸ್​ ಅನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

    ಸಿನಿಮಾ ವಿಚಾರಕ್ಕೆ ಬರುವುದಾದರೆ, ಯಶಿಕಾ ಅವರು ಪ್ರಸ್ತುತ ಕಾಲಿವುಡ್ ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮಾಡೆಲ್​ ಹಾಗೂ ಕಿರುತೆರೆ ಕಲಾವಿದೆಯಾಗಿ 2016ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ಯಶಿಕಾ, 2018ರಲ್ಲಿ ತೆರೆಕಂಡ ವಯಸ್ಕರ ಕಾಮಿಡಿ ಸಿನಿಮಾ ಡಾರ್ಕ್​ ರೂಮ್​ ಕ್ರಶ್​ ಮೂಲಕ ಹೆಸರುವಾಸಿಯಾದರು. ಇದರೊಂದಿಗೆ ವಿಜಯ್​ ದೇವರಕೊಂಡ ಅಭಿನಯದ ನೋಟಾ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಬಿಗ್​ಬಾಸ್​ ಸೀಸನ್​ 3ರಲ್ಲಿ ಸ್ಪರ್ಧಿಸಿದ್ದು ಯಶಿಕಾ ಖ್ಯಾತಿಗೆ ಮತ್ತಷ್ಟು ಬೂಸ್ಟ್​ ಸಿಕ್ಕಿತು. (ಏಜೆನ್ಸೀಸ್​)

    ಅಪಘಾತದಿಂದ ನಟಿ ಯಶಿಕಾ ಸ್ಥಿತಿ ಗಂಭೀರ: ಸ್ನೇಹಿತೆಯ ಸಾವು, ಕಾರಿನಲ್ಲಿದ್ರು ಇಬ್ಬರು ಯುವಕರು

    ಬಂಧನದ ಬೆನ್ನಲ್ಲೇ ಆದೇಶ! ರಾಜ್​ ಕುಂದ್ರಾ ವಿರುದ್ಧ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಅವರದೇ ಕಂಪನಿಯ ಉದ್ಯೋಗಿಗಳು

    ಯಡಿಯೂರಪ್ಪ ಭಾವುಕ ವಿದಾಯ | ಸಿಎಂ ಸ್ಥಾನಕ್ಕೆ ರಾಜೀನಾಮೆ; 2 ವರ್ಷದ ಸಂಭ್ರಮಾಚರಣೆಯಲ್ಲಿ ಕಟ್ಟೆಯೊಡೆದ ದುಃಖ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts